/newsfirstlive-kannada/media/post_attachments/wp-content/uploads/2024/12/NAYANA.jpg)
ಖ್ಯಾತ ಬಹುಭಾಷಾ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ದಕ್ಷಿಣ ಭಾರತದಲ್ಲೇ ಅತ್ಯಂತ ಜನಪ್ರಿಯ ನಟಿ. ಇತ್ತೀಚೆಗಷ್ಟೇ ನಯನತಾರಾ ಬಿಯಾಂಡ್ ದಿ ಫೇರಿಟೇಲ್ (Nayanthara: Beyond the Fairytale) ಎನ್ನುವ ಸಾಕ್ಷ್ಯ ಚಿತ್ರದಲ್ಲಿ ಅಭಿನಯ ಮಾಡಿದ್ದರು. ಇದು ನಯನತಾರಾ ಅವರದೇ ಕಥೆ ಆಗಿದೆ. ಆದರೆ ಈ ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು ನಟಿಗೆ ಇನ್ನಿಲ್ಲದಂತೆ ಕಾನೂನು ತೊಡಕುಗಳು ಕಾಡಲಾರಂಭಿಸಿವೆ.
ನಯನತಾರಾ ಬಿಯಾಂಡ್ ದಿ ಫೇರಿಟೇಲ್ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯ ಮಾಡಿರುವ ತಮಿಳು ಚಂದ್ರಮುಖಿ ಸಿನಿಮಾದ ಕೆಲ ಕ್ಲಿಪ್ಗಳನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಚಂದ್ರಮುಖಿ ಸಿನಿಮಾದ ಕ್ಲಿಪ್ಗಳನ್ನು ಉಪಯೋಗಿಸಿಕೊಳ್ಳಬೇಕಾದರೆ ನಯನತಾರಾ ಅವರು ನಿರ್ಮಾಪಕರಾದ ಪ್ರಭು ಹಾಗೂ ಪಾರ್ಥ ಸಾರಥಿ ಗವರ ಅವರ ಅನುಮತಿ ಪಡೆದಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:BIGG BOSS ಗ್ರ್ಯಾಂಡ್ ಫಿನಾಲೆಗೆ ಈ ನಾಲ್ವರು ಹೋಗೋದು ಫಿಕ್ಸ್.. ಟಾಸ್ಕ್ನಲ್ಲಿ ರಜತ್ ಆಯ್ಕೆ ಸರಿನಾ?
ಸದ್ಯ ಈ ಸಂಬಂಧ ಚಂದ್ರಮುಖಿ ಸಿನಿಮಾದ ನಿರ್ಮಾಪಕರು, ನೆಟ್ಫ್ಲಿಕ್ಸ್ ಹಾಗೂ ನಟಿ ನಯನತಾರಾಗೆ ಕಾನೂನು ಪ್ರಕಾರ ನೋಟಿಸ್ ನೀಡಿದ್ದಾರೆ. ಅನುಮತಿ ಇಲ್ಲದೇ ನಮ್ಮ ಸಿನಿಮಾದ ಕ್ಲಿಪ್ಗಳನ್ನು ಉಪಯೋಗಿಸಿಕೊಂಡಿದ್ದಕ್ಕೆ 5 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್ನಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
2024ರ ನವೆಂಬರ್ನಲ್ಲಿ ತಮಿಳು ನಟ ಧನುಷ್ ಕೂಡ ಕಾನೂನು ಪ್ರಕಾರ ನಯನತಾರಾಗೆ ನೋಟಿಸ್ ನೀಡಿ 10 ಕೋಟಿ ರೂಪಾಯಿ ಪರಿಹಾರ ಕೇಳಿದ್ದರು. ನಾನು ರೌಡಿ ಧಾನ್ ಎನ್ನುವ ಧನುಷ್ ಅವರ ಸಿನಿಮಾದಲ್ಲಿನ ದೃಶ್ಯಗಳನ್ನು ಅನುಮತಿ ಪಡೆಯದೇ ಬಳಸಿಕೊಂಡಿದ್ದಕ್ಕೆ ಕೋರ್ಟ್ ಮೊರೆ ಹೋಗಿದ್ದರು. ಇದರ ಬೆನ್ನಲ್ಲೇ ಈಗ ಚಂದ್ರಮುಖಿ ಸಿನಿಮಾದ ನಿರ್ಮಾಪಕರು ನೋಟಿಸ್ ಕೊಟ್ಟು 5 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ. ಇನ್ನು ನೋಟಿಸ್ ನೀಡಿರುವ ಕುರಿತು ನಯನತಾರಾ ಮತ್ತು ನೆಟ್ಫ್ಲಿಕ್ಸ್ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ