newsfirstkannada.com

ನೆಟ್‌ಫ್ಲಿಕ್ಸ್​​ನಿಂದಲೇ ಕಿತ್ತು ಹಾಕಿದ ನಯನತಾರಾ ನಟನೆಯ ‘ಅನ್ನಪೂರ್ಣಿ’ ಸಿನಿಮಾ; ಕಾರಣವೇನು?

Share :

Published January 11, 2024 at 4:32pm

  ಬಹುಭಾಷಾ ನಟಿ ನಯನತಾರಾ ನಟಿಸಿರೋ ಅನ್ನಪೂರ್ಣಿ ಸಿನಿಮಾ ಇದು

  ಅನ್ನಪೂರ್ಣಿ ಚಿತ್ರದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಆರೋಪ

  ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧ ದೂರು ದಾಖಲಿಸಿದ ರಮೇಶ್ ಸೋಲಂಕಿ

ಬಹುಭಾಷಾ ನಟಿ ನಯನತಾರಾ ನಟಿಸಿರೋ ಅನ್ನಪೂರ್ಣಿ ಸಿನಿಮಾ ಹೊಸದೊಂದು ವಿವಾದಕ್ಕೆ ಗುರಿಯಾಗಿತ್ತು. ಅನ್ನಪೂರ್ಣಿ ಸಿನಿಮಾದಲ್ಲಿ ನಯನತಾರಾ ಹಿಂದೂ ಪೂಜಾರಿಯ ಮಗಳ ಪಾತ್ರದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ನಯನತಾರಾ ಜೊತೆಗೆ ಭಗವಾನ ಶ್ರೀರಾಮ, ಮಾಂಸಹಾರಿ ಎಂದು ನಟ ಜೈ ಸಿನಿಮಾದಲ್ಲಿ ಹೇಳಿದ್ದರು. ಹೀಗಾಗಿ ಅನ್ನಪೂರ್ಣಿ ಚಿತ್ರವು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಹಿಂದೂ ಮುಖಂಡ, ಶಿವಸೇನಾ ಮಾಜಿ ನಾಯಕ ರಮೇಶ್ ಸೋಲಂಕಿ ಗಂಭೀರವಾಗಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಇದೀಗ ಅನ್ನಪೂರ್ಣಿ ಸಿನಿಮಾವನ್ನು  ನೆಟ್‌ಫ್ಲಿಕ್ಸ್ ತೆಗೆದು ಹಾಕಲಾಗಿದೆ.

ಅನ್ನಪೂರ್ಣಿ ಸಿನಿಮಾದಲ್ಲಿ ಏನಿದೆ?

ಅನ್ನಪೂರ್ಣಿ ಸಿನಿಮಾದಲ್ಲಿ ನಟಿ ನಯನತಾರಾ ಅಭಿನಯಿಸಿದ್ದಾರೆ. ಈ ಅನ್ನಪೂರ್ಣಿ ಸಿನಿಮಾದಲ್ಲಿ ನಯನತಾರಾ ಹಿಂದೂ ಪೂಜಾರಿಯ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದೂ ಪೂಜಾರಿಯ ಮಗಳು ಒಂದು ಅಡುಗೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ಅಡುಗೆ ಸ್ಪರ್ಧೆಯನ್ನ ಗೆಲ್ಲಲು ನಮಾಜ್ ಮಾಡಿದೆ. ನಮಾಜ್ ಮಾಡಿ ಬಿರಿಯಾನಿ ಮಾಡಿದ್ದರಿಂದ ಬಿರಿಯಾನಿ ಚೆನ್ನಾಗಿದೆ ಎಂದು ಹೇಳಿದ್ದರು. ನಯನತಾರಾ ಜೊತೆಗೆ ಭಗವಾನ ಶ್ರೀರಾಮ, ಮಾಂಸಹಾರಿ ಎಂದು ನಟ ಜೈ ಸಿನಿಮಾದಲ್ಲಿ ಹೇಳಿದ್ದರು. ಹೀಗಾಗಿ ಈ ಸಿನಿಮಾದಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಬಂದಿದೆ ಎಂದು ದೂರಲಾಗಿತ್ತು. ಈ ಚಿತ್ರದಲ್ಲಿ ಭಗವಾನ್ ಶ್ರೀರಾಮನನ್ನು ಅವಹೇಳನ ಮಾಡಿದ್ದಾರೆ. ಲವ್ ಜಿಹಾದ್ ಅನ್ನು ಉತ್ತೇಜಿಸುತ್ತದೆ. ಹಿಂದೂ ಧರ್ಮ ವಿರೋಧಿ ನಿಲುವು ಚಿತ್ರದಲ್ಲಿರುವುದರಿಂದ ನಿರ್ಮಾಪಕ, ನಿರ್ದೇಶಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನಾ ಮಾಜಿ ನಾಯಕ ರಮೇಶ್ ಸೋಲಂಕಿ ಅವರು ಒತ್ತಾಯಿಸಿದ್ದಾರೆ. ನಿರ್ಮಾಪಕ, ನಿರ್ದೇಶಕರು ಸೇರಿದಂತೆ ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧವೂ ದೂರು ದಾಖಲು ಮಾಡಿದ್ದರು.

ಇದನ್ನು ಓದಿ: ‘ನಮಾಜ್ ಮಾಡಿ ಬಿರಿಯಾನಿ ಮಾಡಿದ್ರೆ ಟೇಸ್ಟ್ ಸೂಪರ್‌’- ವಿವಾದಕ್ಕೆ ಸಿಲುಕಿದ ನಟಿ ನಯನತಾರಾ ಸಿನಿಮಾ

ಈ ಸಂಬಂಧ ಅನ್ನಪೂರ್ಣಿ ಚಿತ್ರವು ವಿವಾದಾತ್ಮಕ ತಿರುವು ಪಡೆದುಕೊಳ್ಳುತ್ತಿದ್ದಂತೆ ಸಹ-ನಿರ್ಮಾಪಕರು Zee ಸ್ಟುಡಿಯೋಸ್ ಮನವಿ ಪತ್ರವನ್ನು ನೀಡಿದ್ದಾರಂತೆ. ಹೀಗಾಗಿ ತಾತ್ಕಾಲಿಕವಾಗಿ OTT ಪ್ಲಾಟ್‌ಫಾರ್ಮ್‌ನಿಂದ ಅನ್ನಪೂರ್ಣಿ ಚಿತ್ರವನ್ನು ತೆಗೆದು ಹಾಕಲಾಗಿದೆ. ಈ ಚಿತ್ರವು ನಯನತಾರಾ ಅಭಿನಯಿಸಿರೋ 75ನೇ ಸಿನಿಮಾವಾಗಿದೆ. ಈ ಚಿತ್ರಕ್ಕೆ ನಿಲೇಶ್ ಕೃಷ್ಣ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೆಟ್‌ಫ್ಲಿಕ್ಸ್​​ನಿಂದಲೇ ಕಿತ್ತು ಹಾಕಿದ ನಯನತಾರಾ ನಟನೆಯ ‘ಅನ್ನಪೂರ್ಣಿ’ ಸಿನಿಮಾ; ಕಾರಣವೇನು?

https://newsfirstlive.com/wp-content/uploads/2024/01/nayana-2.jpg

Load More