/newsfirstlive-kannada/media/post_attachments/wp-content/uploads/2025/04/CBSE-1.jpg)
ಸಿಬಿಎಸ್ಇ (Central Board of Secondary Education) ಪಠ್ಯದಲ್ಲಿ ಮೊಘಲರು, ದಿಲ್ಲಿ ಸುಲ್ತಾನ್ರಿಗೆ ಕೊಕ್ ನೀಡಲಾಗಿದೆ. 7ನೇ ತರಗತಿಯ ಭಾರತ ಸಾಮ್ರಾಜ್ಯಗಳು ಹಾಗೂ ಪವಿತ್ರ ಭೂಗೋಳ ಶಾಸ್ತ್ರ ಅಧ್ಯಯನದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಎನ್ಸಿಇಆರ್ಟಿ (National Council of Educational Research and Training) ತನ್ನ ಆದೇಶದಲ್ಲಿ ತಿಳಿಸಿದೆ.
ಯಾವ ವಿಷಯ ಸೇರ್ಪಡೆ..?
ಸಿಬಿಎಸ್ಇ ನೂತನ ಪಠ್ಯದಲ್ಲಿ ಮೊಘಲರು, ದಿಲ್ಲಿ ಸುಲ್ತಾನರ ಕುರಿತ ಪಾಠಗಳಿಗೆ ಬದಲಾಗಿ ಮಹಾಕುಂಭ, ಮೇಕ್ ಇನ್ ಇಂಡಿಯಾ, ಬೇಟಿ ಬಚಾವೋ, ಬೇಟಿ ಪಢಾವೋ ಆಂದೋಲನ ವಿಷಯ ಸೇರ್ಪಡೆ ಮಾಡಲಾಗಿದೆ.
ಇದನ್ನೂ ಓದಿ: ಉಗ್ರರ ವಿರುದ್ಧ ಗರುಡ ಪಡೆ ರಹಸ್ಯ ಆಪರೇಷನ್! ವಾಯುಪಡೆಯ ಈ ದೈತ್ಯ ಶಕ್ತಿಯ ವಿಶೇಷತೆ ಏನು..?
ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯ ಸೇರ್ಪಡೆ ಮಾಡಲಾಗಿದೆ. ಶಾಲಾ ಶಿಕ್ಷಣದಲ್ಲಿ ಭಾರತೀಯ ಸಂಪ್ರದಾಯ, ಸಿದ್ಧಾಂತ, ಜ್ಞಾನ ವ್ಯವಸ್ಥೆ ಹಾಗೂ ಸ್ಥಳೀಯ ವಿಚಾರಗಳ ಪಠ್ಯದಲ್ಲಿ ಸೇರ್ಪಡೆ ಮಾಡುವ ನಿರ್ಧಾರವನ್ನು ಎನ್ಸಿಇಆರ್ಟಿ ಕೈಗೊಂಡಿದೆ. ಪ್ರಸಕ್ತ ಸಾಲಿನಿಂದಲೇ ಮೊಘಲರ ಪಠ್ಯ ಸಂಪೂರ್ಣ ಕೈಬಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕೊಹ್ಲಿಗೂ ಅಲ್ಲ, ಕೃನಾಲ್ಗೂ ಅಲ್ಲ.. ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ರಜತ್ ಪಾಟೀದಾರ್..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ