ಕಲ್ಲಿದ್ದಲು ಗಣಿ ಇಲಾಖೆಯಲ್ಲಿ 1,765 ಅಪ್ರೆಂಟೀಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

author-image
Bheemappa
Updated On
400ಕ್ಕೂ ಹೆಚ್ಚು ಹುದ್ದೆಗಳನ್ನ ಆಹ್ವಾನಿಸಿದ ಕೋಲ್ ಇಂಡಿಯಾ ಲಿಮಿಟೆಡ್.. ಕೂಡಲೇ ಅಪ್ಲೇ ಮಾಡಿ
Advertisment
  • ಅರ್ಹತೆ, ದಿನಾಂಕ ಇತ್ಯಾದಿ ಮಾಹಿತಿಗಳು ಇಲ್ಲಿ ಲಭ್ಯ ಇವೆ
  • ಕಲ್ಲಿದ್ದಲು ಇಲಾಖೆಯ ಅರ್ಜಿ ಆರಂಭ ಆಗುವುದು ಯಾವಾಗ?
  • ಯಾವ ಯಾವ ಕೋರ್ಸ್​ ಮಾಡಿದವರಿಗೆ ಅವಕಾಶ ಇದೆ

ಉತ್ತರ ಕೋಲ್​ಫೀಲ್ಡ್​ ಲಿಮಿಟೆಡ್ (NCL) ಅಥವಾ ಉತ್ತರದ ಕಲ್ಲಿದ್ದಲು ಗಣಿ ಇಲಾಖೆ, ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಕೆಲಸ ಮಾಡಲು ಆಸಕ್ತಿ ಇರುವವರು ಇವುಗಳಿಗೆ ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನಷ್ಟು ಮಾಹಿತಿಗಾಗಿ ಅಭ್ಯರ್ಥಿಗಳು ಈ ಲೇಖನವನ್ನು ಗಮನಿಸಿ.

ಎನ್​ಸಿಎಲ್ ಸಂಸ್ಥೆಯು ಒಟ್ಟು 1,765 ಅಪ್ರೆಂಟೀಸ್​ ಉದ್ಯೋಗಗಳನ್ನು ಆಹ್ವಾನ ಮಾಡಿದೆ. ಪದವಿ ಅಥವಾ ಡಿಪ್ಲೊಮಾ (ಎಂಜಿನಿಯರಿಂಗ್ ಮತ್ತು ನಾನ್-ಇಂಜಿನಿಯರಿಂಗ್) ಹಾಗೂ ಟ್ರೇಡ್ (ಐಟಿಐ ಗೊತ್ತುಪಡಿಸಿದ ಟ್ರೇಡ್ಸ್​) ಆಯಾ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಅಪ್ರೆಂಟಿಸ್ ಟ್ರೈನಿಗಳನ್ನು ಭರ್ತಿ ಮಾಡಲಾಗುತ್ತದೆ.

ಫೆಬ್ರವರಿ 24 ರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಹತೆ, ಮಾನದಂಡಗಳು, ವಯಸ್ಸಿನ ಮಾನದಂಡ ಹಾಗೂ ವಿವಿಧ ವರ್ಗಗಳಿಗೆ ಮೀಸಲಾತಿಗಳು, ದಿನಾಂಕ ಇತ್ಯಾದಿ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ವೆಬ್​ಸೈಟ್​ಗೆ ಭೇಟಿ ನೀಡಬೇಕು ಎಂದು ಎನ್​ಸಿಎಲ್ ತಿಳಿಸಿದೆ. ವೆಬ್‌ಸೈಟ್- www.nclcil.in

ವಿದ್ಯಾರ್ಹತೆ

ಬಿಇ, ಡಿಪ್ಲೋಮಾ ಇಂಜಿನಿಯರಿಂಗ್ ಹಾಗೂ ಐಟಿಐ

ವಯೋಮಿತಿ- 18 ರಿಂದ 26 ವರ್ಷಗಳು

ಇದನ್ನೂ ಓದಿ:ಪಶುಸಂಗೋಪನಾ ನಿಗಮದಲ್ಲಿ ಉದ್ಯೋಗಗಳು.. 2,152 ಹುದ್ದೆ, SSLC, PUC, ಪದವಿ ಮುಗಿಸಿದ್ರೆ ಅವಕಾಶ

publive-image

ಆಯ್ಕೆ ಪ್ರಕ್ರಿಯೆ

  • ಅರ್ಹತಾ ಪರೀಕ್ಷೆ
  • ದಾಖಲೆ ಪರಿಶೀಲನೆ
  • ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್

ಸ್ಟೇಫಂಡ್

  • ಬಿಇ- 9000 ರೂ.
  • ಡಿಪ್ಲೋಮಾ- 8000 ರೂ.
  • ಐಟಿಐ (1 ವರ್ಷ)- 7700 ರೂ.
  • ಐಟಿಐ (2 ವರ್ಷ)- 8050 ರೂ.

ಈ ಉದ್ಯೋಗದ ಮುಖ್ಯವಾದ ದಿನಾಂಕಗಳು

ಅರ್ಜಿ ಸಲ್ಲಿಕೆಯ ಆರಂಭ- 24 ಫೆಬ್ರವರಿ 2025

ಪೂರ್ಣ ಮಾಹಿತಿ-https://static-cdn.publive.online/newsfirstlive-kannada/media/pdf_files/Content/nclcil.in/Document593ShortNoticeApprentice.pdf

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment