newsfirstkannada.com

BREAKING: ಮಹಾರಾಷ್ಟ್ರದಲ್ಲಿ ಸಂಡೇ ಸಖತ್ ಪವರ್ ಪ್ಲೇ; NCPಗೆ ಕೈ ಕೊಟ್ಟ ಶರದ್ ಪವಾರ್‌ ಅಳಿಯ ಅಜಿತ್ ಪವಾರ್

Share :

Published July 2, 2023 at 2:39pm

Update July 3, 2023 at 10:23am

    ಸೂಪರ್ ಸಂಡೇ ಮಹಾರಾಷ್ಟ್ರದಲ್ಲಿ ಸಖತ್ ಪವರ್ ಪ್ಲೇ

    ಎನ್‌ಸಿಪಿ ಪಕ್ಷದ ಪ್ರಮುಖ ನಾಯಕರಿಂದ ಬಂಡಾಯ

    ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ

ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದೆ. ಶರದ್ ಪವಾರ್ ಅವರ ಎನ್‌ಸಿಪಿ ಪಕ್ಷದ ಪ್ರಮುಖ ನಾಯಕರು ಶಿವಸೇನಾ, ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಜೈ ಎಂದಿದ್ದಾರೆ. ದಿಢೀರ್ ಬೆಳವಣಿಗೆಯಲ್ಲಿ ಶರದ್ ಪವಾರ್ ಅವರ ಅಳಿಯ ಅಜಿತ್ ಪವಾರ್ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ.

2019ರಲ್ಲೂ ಅಜಿತ್ ಪವಾರ್ ಅವರು ಎನ್‌ಸಿಪಿ ವಿರುದ್ಧ ಬಂಡಾಯ ಎದ್ದಿದ್ದರು. ಅಂದು ಸಿಎಂ ಆಗಿದ್ದ ದೇವೇಂದ್ರ ಫಡ್ನವಿಸ್ ಸರ್ಕಾರದಲ್ಲಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಇದೀಗ ಮತ್ತೆ ಶರದ್‌ ಪವಾರ್ ಮೇಲೆ ರೆಬೆಲ್ ಆಗಿದ್ದು, ತನ್ನೊಂದಿಗೆ ಹಲವು ಶಾಸಕರನ್ನು ಆಪರೇಷನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ದಿಢೀರ್ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ರೆ 8 ಶಾಸಕರು ಸಿಎಂ ಏಕನಾಥ್ ಶಿಂಧೆ ಸರ್ಕಾರದಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕರಾಗಿದ್ದ ಅಜಿತ್ ಪವಾರ್ ಇಂದು ದಿಢೀರ್ ಬೆಳವಣಿಗೆಯಲ್ಲಿ ಸಿಎಂ ಏಕನಾಥ್ ಶಿಂಧೆ ಬಣ ಸೇರಿದ್ದಾರೆ. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಅಜಿತ್ ಪವಾರ್ ಹಾಗೂ ಅವರ ಬೆಂಬಲಿಗ ಶಾಸಕರು ರಾಜಭವನಕ್ಕೆ ತೆರಳಿದ್ದರು. ರಾಜ್ಯಪಾಲರ ಮುಂದೆ ಎನ್‌ಸಿಪಿ ಶಾಸಕರು ಶಿವಸೇನೆ, ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಬಳಿಕ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ನಡೆದಿದೆ.

ಅಜಿತ್ ಪವಾರ್ ಅವರು ಎನ್‌ಸಿಪಿ ಹಿರಿಯ ನಾಯಕ ಶರದ್ ಪವಾರ್ ಸೋದರಳಿಯ. ಇತ್ತೀಚಿಗೆ ಶರದ್ ಪವಾರ್ ಅವರು ತಮ್ಮ ಪುತ್ರಿ ಸುಪ್ರಿಯಾ ಸುಳೆ ಅವರನ್ನ NCP ಕಾರ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದರು. ಇದಾದ ಮೇಲೆ ಅಜಿತ್ ಪವಾರ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದ ಬೇಸರದಲ್ಲಿದ್ದರು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಅಜಿತ್ ಪವಾರ್ ಇಂದು ತಮ್ಮ ಬೆಂಬಲಿಗ ಶಾಸಕರ ಜೊತೆ ಎನ್‌ಸಿಪಿ ಬಿಟ್ಟು ಬಿಜೆಪಿ, ಶಿವಸೇನೆ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ.

ಅಜಿತ್ ಪವಾರ್ ಜೊತೆ ಎನ್‌ಸಿಪಿಯ 8 ರೆಬೆಲ್ ಶಾಸಕರು ಇಂದು ನೂತನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಎನ್‌ಸಿಪಿಯ ಎಲ್ಲಾ 43 ಶಾಸಕರು ಸರ್ಕಾರವನ್ನು ಬೆಂಬಲಿಸಲಿದ್ದಾರೆ ಎಂದಿದ್ದಾರೆ. ಸೂಪರ್ ಸಂಡೇ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಬಿಗ್ ಶಾಕಿಂಗ್ ನ್ಯೂಸ್ ಆಗಿರೋದಂತೂ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಮಹಾರಾಷ್ಟ್ರದಲ್ಲಿ ಸಂಡೇ ಸಖತ್ ಪವರ್ ಪ್ಲೇ; NCPಗೆ ಕೈ ಕೊಟ್ಟ ಶರದ್ ಪವಾರ್‌ ಅಳಿಯ ಅಜಿತ್ ಪವಾರ್

https://newsfirstlive.com/wp-content/uploads/2023/07/Sharad-Pawar-NCP.jpg

Load More