newsfirstkannada.com

×

ಪಟಾಕಿ ಸೌಂಡಿನಲ್ಲೇ ಗುಂಡಿನ ದಾಳಿ.. ಆಸ್ಪತ್ರೆಗೆ ದಾಖಲಿಸಿದ್ರು ಉಳಿಯಲಿಲ್ಲ NCP ನಾಯಕ; ಯಾರು ಈ ಬಾಬಾ ಸಿದ್ದಿಕಿ?

Share :

Published October 13, 2024 at 7:24am

    ಸಲ್ಮಾನ್ ಖಾನ್​​-ಶಾರುಖ್ ಖಾನ್​​ರನ್ನ ಒಂದಾಗಿಸಿದ್ದ ಲೀಡರ್​​

    ಪಟಾಕಿ ಸಿಡಿಸುವ ಶಬ್ಧದ ನಡುವೆ 4 ಸುತತ್ತಿನ ಗುಂಡಿನ ದಾಳಿ

    ಸುಮಾರು 48 ವರ್ಷಗಳ ಕಾಲ ಕಾಂಗ್ರೆಸ್‌ಲ್ಲಿದ್ದ ಬಾಬಾ ಸಿದ್ದಿಕಿ

ಮಾಜಿ ಸಚಿವ ಮತ್ತು ಅಜಿತ್ ಪವಾರ್ ನೇತೃತ್ವದ ಎನ್​​ಸಿಪಿ ಲೀಡರ್​​​ ಬಾಬಾ ಸಿದ್ದಿಕಿಯನ್ನ ಮುಂಬೈನಲ್ಲಿ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಒಟ್ಟು 4 ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಬಾ ಸಿದ್ದಿಕಿ ಕೊನೆಯುಸಿರೆಳೆದಿದ್ದಾರೆ. ಬಾಂದ್ರಾ ಬಾಯ್ ಅಂತ ಕರೆಸಿಕೊಳ್ಳುತ್ತಿದ್ದ ಬಾಬಾ ಸಿದ್ದಿಕಿ, ಬಾಲಿವುಡ್​ನ ಸಲ್ಮಾನ್ ಖಾನ್ ಅವರ ಆಪ್ತ ಸ್ನೇಹಿತರಾಗಿದ್ದರು.

ಮಹಾರಾಷ್ಟ್ರದ ಪವರ್​​​ಫುಲ್​​ ಲೀಡರ್​​​. ಮಾಜಿ ಸಚಿವ ಮತ್ತು ಅಜಿತ್ ಪವಾರ್ ನೇತೃತ್ವದ ಎನ್​​ಸಿಪಿ ಹಿರಿಯ ನಾಯಕ ಬಾಬಾ ಸಿದ್ದಿಕಿಯನ್ನ ಭೀಕರ ಹತ್ಯೆ ಮಾಡಲಾಗಿದೆ. ಶನಿವಾರ ಮುಂಬೈನ ಕಚೇರಿಯ ಮುಂಭಾಗ ದುಷ್ಕರ್ಮಿಗಳು 4 ಸುತ್ತಿನ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಆದ್ರೆ, ಹತ್ಯೆಗೆ ಕಾರಣ ದುಡ್ಡಿನ ವ್ಯವಹಾರ ಎಂದು ಶಂಕಿಸಲಾಗುತ್ತಿದ್ದು, ಲಾರೆನ್ಸ್ ಬಿಷ್ಣೋಯ್​ ಗ್ಯಾಂಗ್​ ಕೈವಾಡದ ಚರ್ಚೆ ಇದೆ.

ಇದನ್ನೂ ಓದಿ: ದಸರಾ ಮಹೋತ್ಸವಕ್ಕೆ ಸಂಭ್ರಮದ ತೆರೆ.. ಹರ್ಷೋದ್ಗಾರದಲ್ಲಿ ಮಿಂದೆದ್ದ ಜನ; ಅಭಿಮನ್ಯುಗೆ ಅಭಿನಂದನೆ

ಬಾಂದ್ರಾದಲ್ಲಿ ಪಟಾಕಿ ಸಿಡಿಸ್ತಿದ್ದ ವೇಳೆ ಗುಂಡಿನ ದಾಳಿ

ರಾತ್ರಿ 9.15.. ಬಾಂದ್ರಾದ ನಿರ್ಮಲ್ ನಗರ ಪ್ರದೇಶದ ಪುತ್ರನ ಕಚೇರಿ ಬಳಿ ಪಟಾಕಿ ಸಿಡಿಸ್ತಿದ್ರು. ಈ ವೇಳೆ ದುಷ್ಕರ್ಮಿಗಳಿಂದ 4 ಸುತ್ತಿನ ಗುಂಡಿನ ದಾಳಿ ನಡೆಸಿದ್ದು, 3 ಗುಂಡು ದೇಹ ಸೇರಿದೆ. ಅದರಲ್ಲಿ ಒಂದು ಎದೆ ಭಾಗವನ್ನ ಸೀಳಿದೆ. ಘಟನೆ ಬೆನ್ನಲ್ಲೆ ಸಿದ್ದಿಕಿಯನ್ನ ಲೀಲಾವತಿ ಆಸ್ಪತ್ರೆಗೆ ಸೇರಿಸಿದ್ರು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸದ್ಯ ಪ್ರಕರಣ ಸಂಬಂಧ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ.

ಯಾರಿದು ಬಾಬಾ ಸಿದ್ದಿಕಿ?

  • ಬಾಬಾ ಸಿದ್ದಿಕಿ 1999, 2004, 2009ರ ಚುನಾವಣೆಯಲ್ಲಿ ಜಯ
  • ಬಾಂದ್ರಾ ಪಶ್ಚಿಮ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು
  • 2004 ರಿಂದ 2008ರವರೆಗೆ ಆಹಾರ ಮತ್ತು ಕಾರ್ಮಿಕ ಸಚಿವ
  • ಸುಮಾರು 48 ವರ್ಷಗಳ ಕಾಲ ಕಾಂಗ್ರೆಸ್‌ಲ್ಲಿದ್ದ ಬಾಬಾ ಸಿದ್ದಿಕಿ
  • ಫೆಬ್ರವರಿಯಲ್ಲಿ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಸೇರಿದ್ರು
  • ಪುತ್ರ ಜೀಶನ್‌ ಸಿದ್ದಿಕಿ ಬಾಂದ್ರಾ ಪೂರ್ವದ ಶಾಸಕರಾಗಿದ್ದಾರೆ
  • ಜೀಶನ್​ ಸಿದ್ದಿಕಿ ಕಚೇರಿ ಬಳಿಯೇ ಈ ಗುಂಡಿನ ದಾಳಿ ನಡೆದಿದೆ

ಇದನ್ನೂ ಓದಿ: 2,847 ಹುದ್ದೆಗಳಿಗೆ ನೇರ ನೇಮಕಾತಿ.. ಬೆಳಗಾವಿಯ 2 ಹಂತದ Rallyಯಲ್ಲಿ ನೀವೂ ಭಾಗಿಯಾಗಿ

ಬಾಲಿವುಡ್ ಪಾಲಿನ ‘ಬಾಂದ್ರಾ ಬಾಯ್’ ಈ ಸಿದ್ದಿಕಿ?

ಬಾಬಾ ಸಿದ್ದಿಕಿ ರಾಜಕಾರಣಿ ಮಾತ್ರವಲ್ಲ. ಬಾಲಿವುಡ್​ನ ಹಲವರ ಪಾಲಿನ ಬ್ಯಾಕ್​​​ಬೋನ್​​​. ಬಾಬಾ ಸಿದ್ದಿಕಿ, ಬಾಂದ್ರಾ ಬಾಯ್​​ ಅಂತಾನೆ ಖ್ಯಾತಿ. ಸಲ್ಮಾನ್​-ಶಾರುಖ್​ ನಡುವಿನ ಸ್ಟಾರ್​​​ ವಾರ್​​​ ಖತಂ ಮಾಡಿದ ಸಿದ್ದಿಕಿ, ರಂಜಾನ್​​​ನ ಇಫ್ತಾರ್ ಕೂಟದಲ್ಲಿ ಒಂದಾಗಿಸಿದರು. ಪ್ರತಿವರ್ಷ ಆಯೋಜನೆ ಆಗುವ ಈ ಪಾರ್ಟಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು, ರಾಜಕಾರಣಿಗಳಿಂದ ತುಂಬಿ ತುಳುಕುತ್ತಿತ್ತು. ಅದರಲ್ಲೂ ಸಂಜಯ್ ದತ್ ಮತ್ತು ಸಲ್ಮಾನ್ ಖಾನ್​ಗೆ ಬಾಬಾ ಸಿದ್ದಿಕಿ ಅತ್ಯಾಪ್ತರಾಗಿದ್ದರು.

ದಸರಾದಂದೇ ಈ ಗುಂಡಿನ ದಾಳಿ ನಡೆದಿದ್ದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ನಡೆದಿರುವ ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಟಾಕಿ ಸೌಂಡಿನಲ್ಲೇ ಗುಂಡಿನ ದಾಳಿ.. ಆಸ್ಪತ್ರೆಗೆ ದಾಖಲಿಸಿದ್ರು ಉಳಿಯಲಿಲ್ಲ NCP ನಾಯಕ; ಯಾರು ಈ ಬಾಬಾ ಸಿದ್ದಿಕಿ?

https://newsfirstlive.com/wp-content/uploads/2024/10/Baba_Siddique_1.jpg

Load More