/newsfirstlive-kannada/media/post_attachments/wp-content/uploads/2025/04/Job.jpg)
ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (NCRTC)ವೂ ವಿವಿಧ ಹುದ್ದೆಗಳ ನೇಮಕಾತಿ ಮಾಡಲು ಮುಂದಾಗಿದೆ. ಹಲವಾರು ಉದ್ಯೋಗಗಳನ್ನ ಭರ್ತಿ ಮಾಡಲಾಗುತ್ತಿರುವ ಕಾರಣ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಇನ್ನುಳಿದಂತೆ ಈ ಕೆಲಸಗಳಿಗೆ ಉದ್ಯೋಗಕಾಂಕ್ಷಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಎನ್ಸಿಆರ್ಟಿಸಿ ಇಲಾಖೆಯು ಈಗಾಗಲೇ ನೇಮಕಾತಿ ಅಧಿಸೂಚನೆ ರಿಲೀಸ್ ಮಾಡಿದೆ. ಈ ಉದ್ಯೋಗಗಳಿಗೆ ಸಂಬಂಧಿಸಿದ ಪರೀಕ್ಷೆ, ಅರ್ಹತೆ, ಹುದ್ದೆಯ ವಿವರಗಳ ಮಾಹಿತಿ, ಅಗತ್ಯವಿರುವ ದಾಖಲೆಗಳು, ವಯಸ್ಸಿನ ಮಿತಿ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಇತರ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ಗಮನಿಸಿ.
ಹುದ್ದೆಯ ಹೆಸರು, ಎಷ್ಟು ಕೆಲಸಗಳು?
- ಜೂನಿಯರ್ ಇಂಜಿನಿಯರ್ ಎಲೆಕ್ಟ್ರಿಕಲ್- 16
- ಜೂನಿಯರ್ ಇಂಜಿನಿಯರ್ ಎಲೆಕ್ಟ್ರಾನಿಕ್ಸ್- 16
- ಜೂನಿಯರ್ ಇಂಜಿನಿಯರ್ ಮೆಕಾನಿಕಲ್ 03
- ಜೂನಿಯರ್ ಇಂಜಿನಿಯರ್ ಸಿವಿಲ್- 01
- ಪ್ರೋಗ್ರಾಮಿಂಗ್ ಅಸೋಷಿಯೇಶನ್- 04
- ಸಹಾಯಕ ಹೆಚ್ಆರ್- 03
- ಅಸಿಸ್ಟೆಂಟ್ ಕಾರ್ಪೊರೆಟ್ ಹಾಸ್ಪಿಟಲಿಟಿ- 01
- ಜೂನಿಯರ್ ಮೆಂಟೈನಿಯರ್ ಎಲೆಕ್ಟ್ರಿಕಲ್- 18
- ಜೂನಿಯರ್ ಮೆಂಟೈನಿಯರ್ ಮೆಕಾನಿಕಲ್- 10
ಒಟ್ಟು 72 ಉದ್ಯೋಗಗಳು ಇವೆ
ಇದನ್ನೂ ಓದಿ:NTPC ಗ್ರೀನ್ ಎನರ್ಜಿ ನೇಮಕಾತಿ 2025; ಹುದ್ದೆಗಳಿಗೆ ಅರ್ಜಿ ಆಹ್ವಾನ.. ಉದ್ಯೋಗಕ್ಕೆ ಆಯ್ಕೆ ಹೇಗೆ ನಡೆಯುತ್ತೆ?
ವಿದ್ಯಾರ್ಹತೆ
- 3 ವರ್ಷದ ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್/ ಐಟಿ/ ಬಿಸಿಎ/ ಬಿಎಸ್ಸಿ, ಬಿಬಿಎ/ಬಿಬಿಎಂ
- ಬಿಹೆಚ್ಎಂ (ಹೋಟೆಲ್ ಮ್ಯಾನೇಜ್ಮೆಂಟ್)
- 3 ವರ್ಷದ ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕಾನಿಕಲ್, ಸಿವಿಲ್, ಇಂಜಿನಿಯರ್,
ತಿಂಗಳ ಸ್ಯಾಲರಿ
18,250 ದಿಂದ 75,850 ರೂಪಾಯಿಗಳು (ಹುದ್ದೆಗೆ ತಕ್ಕಂತೆ ವಿಂಗಡಣೆ ಇದೆ)
ವಯಸ್ಸಿನ ಮಿತಿ
18 ರಿಂದ 25 ವರ್ಷದ ಒಳಗಿನವರಿಗೆ ಚಾನ್ಸ್ ಇದೆ
ಅರ್ಜಿ ಶುಲ್ಕ ಎಷ್ಟು ಪಾವತಿ ಮಾಡಬೇಕು?
ಜನರಲ್, ಒಬಿಸಿ, ಇಡಬ್ಲುಎಸ್- 1000 ರೂಪಾಯಿ
ಎಸ್ಸಿ, ಎಸ್ಟಿ- ವಿನಾಯತಿ ಇದೆ
ಪ್ರಮುಖವಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 24 ಮಾರ್ಚ್ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 24 ಮೇ 2025
ಪೂರ್ಣ ಮಾಹಿತಿಗಾಗಿ-https://static-cdn.publive.online/newsfirstlive-kannada/media/pdf_filesNCRTC_Various_Post_Notification (1).pdf
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ