/newsfirstlive-kannada/media/post_attachments/wp-content/uploads/2024/10/BSY-Nikhil-kumaraswamy-1.jpg)
ಸಿ.ಪಿ.ಯೋಗೇಶ್ವರ್ ಬಿಜೆಪಿಯನ್ನು ತೊರದು ಕಾಂಗ್ರೆಸ್ಗೆ ಹೋಗಿ ಟಿಕೆಟ್ ಗಿಟ್ಟಿಸಿಕೊಂಡಾದ ಮೇಲೆ ಒಂದು ಕುತೂಹಲ ಮೊಳಕೆಯೊಡೆದಿತ್ತು. ಚನ್ನಪಟ್ಟಣದಲ್ಲಿ ಯೋಗೇಶ್ವರ್ ವಿರುದ್ಧ ಎನ್ಡಿನ ಯಾವ ಅಭ್ಯರ್ಥಿ ತೋಳು ತಟ್ಟಲಿದ್ದಾರೆ ಅನ್ನೋದು. ಆ ಕುತೂಹಲಕ್ಕೆ ಈಗ ತೆರೆದಬಿದ್ದಿದೆ. ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಚನ್ನಪಟ್ಟಣದಿಂದ ನಿಖಿಲ್ ಕುಮಾರಸ್ವಾಮಿ ಯೋಗೇಶ್ವರ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
ಎಲ್ಲಾ ಪಕ್ಷದ ನಾಯಕರು ಸಭೆ ನಡೆಸಿ ಚರ್ಚೆ ಮಾಡುವ ಮೂಲಕ ಚನ್ನಪಟ್ಟಣದ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿಯವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದೇವೆ. ನಿಖಿಲ್ ಕುಮಾರಸ್ವಾಮಿ ಈ ಉಪಚುನಾವಣೆಯಲ್ಲಿ ಗೆಲ್ಲುವುದು ನಿಶ್ಚಿತ. ಎಂದು ಹೇಳಿದ್ದಾರೆ. ಯೋಗೇಶ್ವರ್ ಬಗ್ಗೆ ಪ್ರಶ್ನೆ ಮಾಡಿದಾಗ. ನಾನು ಆ ಬಗ್ಗೆ ಏನೂ ಹೇಳಲು ಹೋಗುವುದಿಲ್ಲ. ಅದು ಈಗ ನಮಗೆ ಇಲ್ಲಿ ಅಪ್ರಸ್ತುತ. ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದ ಬೈ ಎಲೆಕ್ಷನ್‌ನಲ್ಲಿ ಭಾರೀ ಬಹುಮತದ ಮೂಲಕ ಗೆಲ್ಲೋದು ನಿಶ್ಚಿತ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್.. ಜೆಡಿಎಸ್, BJP ನಾಯಕರಿಂದ ಮಹತ್ವದ ತೀರ್ಮಾನ!
ಇನ್ನು ಮಾಧ್ಯಮಗಳ ಮುಂದೆ ಮಾತನಾಡಿದ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯಡಿಯೂರಪ್ಪನವರ ಜೊತೆ ಚರ್ಚೆ ಮಾಡಿ ಅಂತಿಮವಾಗಿ ನಿಖಿಲ್ ಕುಮಾರಸ್ವಾಮಿಯನ್ನು ಚನ್ನಪಟ್ಟಣದಿಂದ ಕಣಕ್ಕಿಳಿಸಲು ಸಿದ್ಧರಾಗಿದ್ದೇವೆ. ಈ ಒಂದು ಚುನಾವಣೆಯಲ್ಲಿ ಮೈತ್ರಿ ಶಕ್ತಿಯನ್ನು ತೋರಿಸುತ್ತೇವೆ. ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿಯನ್ನು ಘೋಷಿಸಲಾಗಿದೆ. ಎಲ್ಲ ನಾಯಕರು ಸೇರಿ ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಸಿ.ಪಿ. ಯೋಗೇಶ್ವರ್ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಹಲವಾರು ಬೆಳವಣಿಗೆಗಳು ಅಂತ ನಾನು ಅದಕ್ಕೆ ಹೇಳಿದ್ದುಇದೇ ಕಾರಣಕ್ಕೆ. ಇದು ಒಂದು ಒಂದೂವರೆ ತಿಂಗಳಿಂದ ಇದು ನಡೆಯುತ್ತಿದೆ. ಈಗ ಅದರ ಬಗ್ಗೆ ಚರ್ಚೆ ಅಪ್ರಸ್ತುತ. ನಮ್ಮ ರಾಜ್ಯ ಘಟಕದ ಎಲ್ಲಾ ಕಾರ್ಯಕರ್ತರು ನಾಯಕರು ಚರ್ಚೆ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇರಲಿಲ್ಲ. ಮುಕ್ತವಾದ ಅವಕಾಶ ಇತ್ತು ಅವರವರ ನಿರ್ಣಯದಿಂದ ಏನೇನೋ ಮಾಡಿಕೊಂಡಿದ್ದಾರೆ. ಆದ್ರೆ ನಾನು ಅದರ ಬಗ್ಗೆ ನಾನು ಈಗ ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಅದ್ಧೂರಿ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಕೆ.. CP ಯೋಗೇಶ್ವರ್ಗೆ ಶುಭ ಹಾರೈಸಿದ ಸಿಎಂ, ಡಿಸಿಎಂ
ನೀವು ಬಿಜೆಪಿಯಿಂದ ನಿಲ್ಲಬೇಕು ಅಂತ ಸಿ,ಎನ್ ಮಂಜನಾಥ್ ಅವರೇ ಯೋಗೇಶ್ವರ್ಗೆ ಹೇಳಿದ್ದಾರೆ. ಪ್ರಹ್ಲಾದ್ ಜೋಶಿ ಅವರ ಎದುರು ನಾನು ಅದಕ್ಕೆ ಸಹಮತ ಇದೆ ಎಂದು ಹೇಳಿದ್ದೇನೆ. ನನ್ನ ಹತ್ರ ಒಂದು ಪ್ರಪೋಸಲ್ ನಡ್ಡಾ ಅವರು ಇಟ್ಟಿದ್ದರು. ನಾವು ಜೆಡಿಎಸ್ ಅಭ್ಯರ್ಥಿಯಾಗಲು ಅವರಿಗೆ ಸೂಚನೆ ನೀಡುತ್ತೇವೆ ಎಂದಿದ್ದರು. ಅದನ್ನು ಕೂಡ ಧಿಕ್ಕರಿಸಿ ಹೋಗಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಿಗೆ ಅಗೌರವ ಸೂಚಿಸಿದ್ದಾರೆ. ಈ ಚುನಾವಣೆ ನಾವು ಮೂರು ಗೆಲ್ಲುತ್ತೆವೆ. ಎರಡು ಪಕ್ಷದ ಕಾರ್ಯಕರ್ತರು ಮೂರು ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮಾಡಿದ ಕೆಲಸದಂತೆ ಮಾಡಬೇಕು ಎಂದು ಕರೆ ಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ
ಇನ್ನು ಟಿಕೆಟ್ ಪಡೆದ ಸಂತಸದಲ್ಲಿದ್ದ ನಿಖಿಲ್ ಕುಮಾರಸ್ವಾಮಿಯವರು ಮಾತನಾಡಿ, ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಲವಾರು ರಾಜಕೀಯ ಬೆಳವಣಿಗೆಯನ್ನು ಮಾಧ್ಯಮಗಳು ತಿಳಿಸಿವೆ. ಸಾಕಷ್ಟು ಸರಣಿ ಸಭೆಗಳ ನಂತರ ಎರಡು ಪಕ್ಷದ ಹಿರಿಯ ಮುಖಂಡರು ಕೂತು ಚರ್ಚೆಮಾಡಿ. ಅಂತಿಮವಾಗಿ ರೈತ ನಾಯಕ ಮಾಜಿ ಸಿಎಂ ಯಡಿಯೂರಪ್ಪನವರ ಆಶೀರ್ವಾದದೊಂದಿಗೆ ಎನ್ಡಿಎ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಎರಡು ಪಕ್ಷದ ನಾಯಕರು ಕಾರ್ಯಕರ್ತರು ಅವಕಾಶ ಕೊಟ್ಟಿದ್ದಾರೆ. ನಾಳೆ ನಾಮಿನೇಷನ್ ಮಾಡಲು ಕೊನೆಯ ದಿನ. ನಾಳೆಯಿಂದ ಆ ಪ್ರಕ್ರಿಯೆಗಳು ನಡೆಯುತ್ತವೆ ಎಂದು ಹೇಳಿದರು.
ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿ ಮಾಡೋದಕ್ಕಿದೆ 5 ಪ್ರಮುಖ ಕಾರಣಗಳಿವೆ.
ಕಾರಣ 01: ನಿಖಿಲ್ ಅಭ್ಯರ್ಥಿಯಾಗಬೇಕೆಂದು ಕಾರ್ಯಕರ್ತರ ಪಟ್ಟು
ಕಾರಣ 02: ಬಿಜೆಪಿ ಹೈಕಮಾಂಡ್ನಿಂದಲೂ ನಿಖಿಲ್ ಸ್ಪರ್ಧೆಗೆ ಒಲವು
ಕಾರಣ 03: ನಿಖಿಲ್ ಸ್ಪರ್ಧಿಸಿದ್ರೆ ಕುಮಾರಸ್ವಾಮಿ ವರ್ಚಸ್ಸಿನ ನೇರ ಲಾಭ
ಕಾರಣ 04: ಯೋಗೇಶ್ವರ್ ವಿರುದ್ಧ ಪ್ರಬಲ ಅಭ್ಯರ್ಥಿಯಾಗೋ ಲೆಕ್ಕಾಚಾರ
ಕಾರಣ 05: ನಡೆಸಿದ 3 ಆಂತರಿಕ ಸರ್ವೇಯಲ್ಲಿ ನಿಖಿಲ್ ಜಯದ ಸುಳಿವು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ