/newsfirstlive-kannada/media/post_attachments/wp-content/uploads/2024/10/Siraj-DSP.jpg)
- ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್..!
- ಇವರು ಈಗ ಡೆಪ್ಯೂಟಿ ಸೂಪರಿಂಟೆಂಡಂಟ್ ಅಫ್ ಪೊಲೀಸ್
- ಡಿಎಸ್ಪಿ ಆಗಿ ಅಧಿಕಾರ ವಹಿಸಿಕೊಂಡ RCB ಸ್ಟಾರ್ ಕ್ರಿಕೆಟರ್
ಟೀಮ್​ ಇಂಡಿಯಾದ ಸ್ಟಾರ್​​ ವೇಗಿ ಮೊಹಮ್ಮದ್​ ಸಿರಾಜ್​​. ಇವರು ತೆಲಂಗಾಣದ ಡೆಪ್ಯೂಟಿ ಸೂಪರಿಂಟೆಂಡಂಟ್ ಅಫ್ ಪೊಲೀಸ್ (DSP) ಆಗಿ ಅಧಿಕಾರಿ ವಹಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಭಾರತ ತಂಡದ ಪರ ತಾನು ಮಾಡಿದ್ದ ಸಾಧನೆಗೆ ಗೌರವವಾಗಿ ತೆಲಂಗಾಣ ಸರ್ಕಾರದಿಂದ ಮೊಹಮ್ಮದ್​ ಸಿರಾಜ್​ಗೆ ಈ ಪೋಸ್ಟ್​ ನೀಡಲಾಗಿದೆ.
ಇಂದು ಮೊಹಮ್ಮದ್​ ಸಿರಾಜ್​ ಅವರು ತೆಲಂಗಾಣ ಡೈರೆಕ್ಟರ್​ ಜನರಲ್​ ಆಫ್​ ಪೊಲೀಸ್​​ಗೆ ರಿಪೋರ್ಟ್​ ಮಾಡಿದ್ದಾರೆ. ರಾಜ್ಯ ಸರ್ಕಾರ ತನಗೆ ನೀಡಿರೋ ಪೋಸ್ಟ್​ ಸ್ವೀಕರಿಸಿದ್ದಾಗಿ ರಿಪೋರ್ಟ್​ನಲ್ಲಿ ಡಿಜಿಪಿಗೆ ತಿಳಿಸಿದ್ದಾರೆ. ಈಗ ಆರ್​​ಸಿಬಿ ತಂಡದ ಸ್ಟಾರ್​​ ವೇಗಿ ತೆಲಂಗಾಣ ಸರ್ಕಾರದ ಪೊಲೀಸ್​ ಅಧಿಕಾರಿ ಆಗಿದ್ದಾರೆ. ಇವರ ಸಂಬಳ ತಿಂಗಳಿಗೆ 1,37,050 ರೂ. ಇದೆ.
ದುಬಾರಿ ಕಾರ್​ ಖರೀದಿ ಮಾಡಿದ್ದ ಸಿರಾಜ್​​
ಇತ್ತೀಚೆಗೆ ಆರ್​​ಸಿಬಿ ತಂಡದ ಸ್ಟಾರ್​ ಪ್ಲೇಯರ್​ ಮೊಹಮ್ಮದ್ ಸಿರಾಜ್ ಮತ್ತೊಂದು ಐಷಾರಾಮಿ ಕಾರು ಖರೀದಿಸಿದ್ರು. ಭಾರತದ ಮೂರು ಮಾದರಿ ಕ್ರಿಕೆಟ್​ನಲ್ಲಿ ಖಾಯಂ ಆಟಗಾರನಾಗಿರೋ ಸಿರಾಜ್ ಆದಾಯ ಗಳಿಕೆಯಲ್ಲೂ ಮುಂದಿದ್ದಾರೆ. ಬರೋಬ್ಬರಿ 3 ಕೋಟಿ ರೂ ಮೌಲ್ಯದ ಲ್ಯಾಂಡ್ ರೋವರ್ ಕಾರನ್ನು ಖರೀದಿಸಿದ್ರು.
ಸಾಮಾನ್ಯ ಆಟೋ ಚಾಲಕನ ಮಗನಾಗಿ ಕ್ರಿಕೆಟ್ ಜೀವನ ಆರಂಭಿಸಿದ ಸಿರಾಜ್ ತಮ್ಮ ಅಸಾಧಾರಣ ಪ್ರತಿಭೆಯಿಂದಲೇ ಭಾರತ ತಂಡಕ್ಕೆ ಸೇರ್ಪಡೆಗೊಂಡರು. ಬಳಿಕ ಟೀಮ್ ಇಂಡಿಯಾದಲ್ಲಿ ಪ್ರಮುಖ ವೇಗಿ ಎನಿಸಿಕೊಂಡಿದ್ದಾರೆ. 2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿರುವ ಮೊಹಮ್ಮದ್ ಸಿರಾಜ್​ಗೆ ಬಿಸಿಸಿಐ ಮೂಲಕ ₹5 ಕೋಟಿ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಆರ್​ಸಿಬಿ ಪರವಾಗಿ ಆಡೋ ಸಿರಾಜ್​ಗೆ ಒಂದು ಸೀಸನ್‌ಗೆ 7 ಕೋಟಿ ಸಂಭಾವನೆ ನೀಡಲಾಗುತ್ತದೆ. ಸಿರಾಜ್ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಎ ದರ್ಜೆಯಲ್ಲಿದ್ದು, ವಾರ್ಷಿಕವಾಗಿ 5 ಕೋಟಿ ರೂ. ಪಡೆಯುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್