Advertisment

10 ಪತ್ನಿಯರು, 350 ಪ್ರೇಯಸಿಯರು, 88 ಮಕ್ಕಳು; ರಸಿಕತೆಯನ್ನೇ ಉಸಿರಾಡಿದ ಆ ರಾಜ ಯಾರು ಗೊತ್ತಾ?

author-image
Gopal Kulkarni
Updated On
10 ಪತ್ನಿಯರು, 350 ಪ್ರೇಯಸಿಯರು, 88 ಮಕ್ಕಳು; ರಸಿಕತೆಯನ್ನೇ ಉಸಿರಾಡಿದ ಆ ರಾಜ ಯಾರು ಗೊತ್ತಾ?
Advertisment
  • ಪಟಿಯಾಲಾದ ಈ ಮಹಾರಾಜನ ವೈಭೋಗದ ಜೀವನಕ್ಕೆ ಸಾಟಿ ಇನ್ನೊಬ್ಬರಿಲ್ಲ
  • 10 ಮಹಾರಾಣಿಯರ ಜೊತೆಗೆ ಈತನಿಗೆ ಇದ್ದರು ವರ್ಷಕ್ಕೊಂದಂತೆ ಪ್ರೇಯಸಿಯರು
  • ಈ ಮಹಾರಾಜ ನಡೆಸಿದ ಮೋಜು ಮಸ್ತಿಯ ಜೀವನವೇ ಒಂದು ವರ್ಣರಂಜಿತ

ಇತಿಹಾಸದ ಪುಟಗಳನ್ನು ನಾವು ತೆರೆಯುತ್ತಾ ಹೋದರೆ ನಮಗೆ ಅಲ್ಲಿ ಸಿಗೋದೆ ರಾಜ ಮಹಾರಾಜ, ರಾಣಿ ಮಹಾರಾಣಿಯರ ಅತಿರಂಜಿತ ಹಾಗೂ ವಿಲಾಸಿ ಬದುಕು. ಅವರು ಬದುಕಿದಷ್ಟು ವಿಲಾಸಿ ಬದುಕು, ವೈಭೋಗದ ಜೀವನ, ಅವರು ಅಸ್ತಿತ್ವಕ್ಕೆ ತಂದ ಕೆಲವು ಬ್ರ್ಯಾಂಡ್​ಗಳು ಇಂದಿಗೂ ಇಂದಿನ ತಲೆಮಾರು ಕೂಡ ಮೆಲುಕು ಹಾಕುತ್ತಲೇ ಇರುತ್ತದೆ. ಅದರಲ್ಲಿಯೂ ಪಟಿಯಾಲದ ಮಹಾರಾಜ ಭೂಪಿಂದರ್​ ಸಿಂಗ್​ ಅವರ ಬದುಕು ಇದೆಯಲ್ಲಾ ಯಾವ ಮೊಘಲ ದೊರೆಯ, ರೋಮ್ ದೊರೆಯ ಗ್ರೀಕ್ ದೊರೆಯ ಐಷಾರಾಮಿಗಿಂತಲೂ ಒಂದಿಂಚೂ ಕಡಿಮೆಯಿಲ್ಲ. ಅಂತಹ ಬದುಕನ್ನು ಬದುಕಿ ಹೋದ, ರಸಿಕತೆಯನ್ನೇ ಹಾಸಿ ಹೊದ್ದು ಮಲುಗಿದ ಬದುಕು ಅದು.

Advertisment

ಇದನ್ನೂ ಓದಿ: ₹50 ಕೋಟಿ ಇದ್ರೂ ಬಾಡಿಗೆ ಮನೆಯೇ ಬೆಸ್ಟ್.. ಸ್ವಂತ ಮನೆ ಬೇಡ; ಕೋಟ್ಯಾಧಿಪತಿ ಪ್ಲಾನ್ ಏನು ಗೊತ್ತಾ? VIDEO

ಇಂದು ಮದ್ಯಲೋಕದಲ್ಲಿ ಅತಿಹೆಚ್ಚು ಇಷ್ಟ ಪಡುವ ಪಟಿಯಾಲಾ ಪೆಗ್​ ಇದೇ ಭೂಪಿಂದರ್ ಮಹಾರಾಜರಿಂದ ಶುರುವಾಆಗಿದ್ದು, ಐಕಾನಿಕ್ ಪಟಿಯಾಲಾ ನಕ್ಲೇಸ್​ ಕೂಡ ಇದೇ ಭೂಪಿಂದರ್ ಸಿಂಗ್ ಅವರ ಕಾಲದಲ್ಲಿ ಅತಿ ದುಬಾರಿ ಬೆಲೆಯ ನಕ್ಲೇಸ್ ಎಂದು ಪ್ರಸಿದ್ಧಿ ಪಡೆದಿತ್ತು. ಮಹಾರಾಜ ಭೂಪಿಂದರ್ ಸಿಂಗ್ ಅವರ ವೈಭೋಗದ ಬದುಕಿನ ಒಂದೊಂದು ಕ್ಷಣಗಳನ್ನು ಅಕ್ಷರವಾಗಿಸಿ ಮಹಾರಾಜ ಎಂಬ ಪುಸ್ತಕ ರಚಿಸಿದ್ದಾರೆ ಭೂಪಿಂದರ್ ಸಿಂಗ್ ಅವರ ಆಸ್ಥಾನಿಕ, ದಿವಾನ್​ ಜಾರ್ಮನಿ ದಾಸ್​
ಮಹಾರಾಜ ಭೂಪಿಂದರ್​ ಸಿಂಗ್​ ಹುಟ್ಟಿದ್ದು 1891ರಲ್ಲಿ. ಜಾಟ್​ ಸಿಖ್​ನ ಪುಲ್ಕಿಯನ್ ಎಂಬ ರಾಜವಂಶದಲ್ಲಿ ಜನಿಸಿದ ಈ ಮಹಾರಾಜ ಪಟ್ಟಕ್ಕೆ ಏರಿದ್ದು ಅತ್ಯಂತ ಕಡಿಮೆ ವಯಸ್ಸಿನಲ್ಲಿ. ಇವರು ಮಹಾಸಿಂಹಾಸನ ಏರಿದಾಗ ಅವರಿಗೆ 9 ವರ್ಷ.

publive-image

ಅವರ ಬದುಕಲ್ಲಿ ಅತ್ಯಂತ ಪ್ರಮುಖವಾದ ಕಾರ್ಯ ಅಂದ್ರೆ ಅದು ಲೀಲಾ ಭವನ ನಿರ್ಮಾಣ ಮಾಡಿದ್ದು. ಈ ಒಂದು ಭವನ ಐಷಾರಾಮಿ ಪಾರ್ಟಿಗಳಿಗೆ ಮೋಜು ಮಸ್ತಿಗಳಿಗೆ ಅಂತಲೇ ನಿರ್ಮಾಣವಾದ ಭವನ. ಈ ಭವನ ಮತ್ತೊಂದು ವಿಷಯಕ್ಕೆ ತುಂಬಾ ಅನನ್ಯವಾಗಿದ್ದು ಅದರ ಕಠಿಣ ನಿಯಮಗಳಿಂದ ಈ ಪ್ಯಾಲೇಸ್ ಒಳಗಡೆ ಹೋಗಬೇಕಾದರೇ ಯಾವ ಅತಿಥಿಯೂ ಕೂಡ ಬಟ್ಟೆಯನ್ನು ಧರಿಸುವಂತಿರಲಿಲ್ಲ. ಪ್ಯಾಲೇಸ್​ವೊಳಗೆ ಒಂದು ದೊಡ್ಡ ಸ್ವಿಮ್ಮಿಂಗ್ ಫೂಲ್ ಕೂಡ ಇತ್ತು. ಅಲ್ಲಿ ಮಹಾರಾಜರು ತಮ್ಮ ಸಹಚಾರಿಣಿಯರೊಂದಿಗೆ ಕಾಲ ಕಳೆಯುತ್ತಿದ್ದರು ಎಂದು ಮಹಾರಾಜ ಪುಸ್ತಕದಲ್ಲಿ ಉಲ್ಲೇಖವಾಗಿದೆ.

Advertisment

ಇನ್ನು ಭೂಪಿಂದರ್ ಸಿಂಗ್ ಮಹಾರಾಜರ ವೈಯಕ್ತಿಕ ಬದುಕು ಕೂಡ ಅತಿರಂಜಿತವಾಗಿತ್ತಂತೆ. ಇವರು ಹತ್ತು ಬಾರಿ ಮದುವೆಯನ್ನು ಆಗಿದ್ದಾರೆ. ವರ್ಷಕ್ಕೆ ಒಂದರಂತೆ ತಮ್ಮ ತೆಕ್ಕೆಗೆ ಒಬೊಬ್ಬ ರಾಣಿ ಅಂದ್ರೆ ಸಹಚಾರಿಯನ್ನನು ಎಳೆದುಕೊಂಡಿದ್ದಾರೆ. ಇವರಿಗೆ ಒಟ್ಟು 10 ಪತ್ನಿಯರು ಹಾಗೂ 365 ಸಹಚಾರಿಣಿಯರು ಇದ್ದರಂತೆ. ಇವರಿಗೆ ಒಟ್ಟು 88 ಮಕ್ಕಳು ಇದ್ದರು ಅಂತಲೂ ಆ ಪುಸ್ತಕದಲ್ಲಿ ಉಲ್ಲೇಖವಿದೆ.  ಅವರ ತಾವಂದುಕೊಂಡಂತೆಯೇ ಬದುಕಿಬಿಟ್ಟರು. ಟೀಕೆಗಳಿಗೆ ವಿಮರ್ಶೆಗಳಿಗೆ ಕಿವುಡಾಗಿ ಇಡೀ ಬದುಕನ್ನು ಎಷ್ಟು ಸಾಧ್ಯವೋ ಅಷ್ಟು ವಿಲಾಸಿಯಾಗಿ ಕಳೆದುಬಿಟ್ಟರು. ಇವರ ಬಳಿ ಒಟ್ಟು 44 ರೋಲ್ಸ್ ರಾಯ್ಸ್ ಕಾರ್​ಗಳು ಇದ್ದವಂತೆ. ಪ್ರೈವೇಟ್ ಏರೋಪ್ಲೇನ್ ಕೂಡ ಇತ್ತು .

publive-image

ಇನ್ನು ಇವರ ತಾತ ಮಹಾರಾಜ ನರೇಂದ್ರ ಸಿಂಗ್​ ಪಟಿಯಾಲಾವನ್ನು ಕಂಡ ಬ್ರಿಟಿಷ್ ಅಧಿಕಾರಿಗಳೇ ದಂಗಾಗಿ ಹೋಗಿದ್ದರು. ಒಂದು ಬಾರಿ ಬ್ರಿಟಿಷ್ ಸೊಷಲೈಟ್ ಯವೋನ್ ಫಿಟ್ಜ್ರಾಯ್ ಈ ಮೋತಿ ಭಾಗ್ ಪ್ಯಾಲೇಸ್​ನ್ನು ಹಾಡಿ ಹೊಗಳಿದ್ರು. ಇದೊಂದು ಅದ್ಭುತವಾದ ಪ್ಯಾಲೇಸ್ ಎಂದು ವರ್ಣಿಸಿದ್ದರು. ಅದಕ್ಕೆ ಉತ್ತರ ನೀಡಿದ ಮಹಾರಾಜ ಭೂಪಿಂದರ್ ಸಿಂಗ್​, ಈ ಜನಾನಾದಲ್ಲಿ ಸುಮಾರು 332 ಮಹಿಳೆಯರು ಇದ್ದಾರೆ. ಅವರಲ್ಲಿ ಕೇವಲ 10 ಮಂದಿ ಮಾತ್ರ ಮಹಾರಾಣಿ ಎಂಬ ಪಟ್ಟವನ್ನು ಉಳಿಸಿಕೊಂಡಿದ್ದರೆ. ವಿಶ್ರಾಂತಿಗೆಂದು ಓದಾಗ 50 ರಾಣಿಯರು ಜೊತೆಗೆ ಇರುತ್ತಾರೆ ಇಲ್ಲವಾದಲ್ಲಿ ಪ್ರೇಯಸಿರು ಹಾಗೂ ಸೇವಕಿಯರು ಇರುತ್ತಾರೆ ಎಂದು ಹೇಳಿದ್ದರು. ಈ ಮಹಾರಾಜರ ವಿಲಾಸಿ, ರಸಿಕತೆಯನ್ನೇ ತುಂಬಿಕೊಂಡ ಬದುಕು ಇಷ್ಟಕ್ಕೆ ಮುಗಿಯುವುದಿಲ್ಲ. ಅವರು ತಾಂತ್ರಿಕ ಲೈಂಗಿಕ ಪದ್ಧತಿಯನ್ನೂ ಕೂಡ ಕರಗತ ಮಾಡಿಕೊಂಡಿದ್ದರು ಎಂಬ ಗುಸುಗುಸು ಆ ಕಾಲದಲ್ಲಿ ಪಟಿಯಾಲಾದಲ್ಲಿ ಕೇಳಿಬರುತ್ತಿತ್ತು.

ಇದನ್ನೂ ಓದಿ:38 ಪ್ಲೇನ್..300 ಕಾರ್​.. ಅದಾನಿ, ಅಂಬಾನಿಯಷ್ಟು ಶ್ರೀಮಂತನಲ್ಲದಿದ್ದರೂ ಐಷಾರಾಮಿ ಬದುಕಿನ ‘ರಾಜ’ ಈತ

Advertisment

ಜೇಮ್ಸ್​ ಶೇರ್​ವೂಡ್ ಎಂಬುವವರು ಬರೆದ ಹೆನ್ರಿ ಪೂಲ್​ ಅಂಡ್ ಕಂಪನಿ ಎಂಬ ಅಂಕಣದಲ್ಲಿ ಈ ಮಹಾರಾಜರ ಮತ್ತೊಂದು ರಸಿಕತೆಯ ಬದುಕು ಕೂಡ ಕಾಣಿಸಿಕೊಳ್ಳುತ್ತೆ. ಮಹಾರಾಜ ಭೂಪಿಂದರ್ ಸಿಂಗ್​ ಒಂದು ಬಾರಿ ಪ್ಯಾಲೇಸ್​ನ ಈಜುಗೊಳದಲ್ಲಿ ಇಳಿದರೆ ಮುಗಿತು. ಅದರ ಸುತ್ತಲೂ ವಿಲಾಸಿಣಿಯರು, ಸಹಚಾರಿಣಿಯರು ಜಮಾಯಿಸುತ್ತಿದ್ದರಂತೆ. ಈಜಾಡುವಾಗ ಕೊಂಚ ವಿಶ್ರಾಂತಿ ಪಡೆದುಕೊಳ್ಳುವ ವೇಳೆ ಇಡೀ ಸಹಚಾರಣಿಯರ ತಂಡ ಇವರನ್ನು ಮುದ್ದಿಸಲು ಸಜ್ಜಾಗುತ್ತಿದ್ದಂತೆ. ಅದರ ಜೊತೆಗೆ ಒಂದು ಸಿಪ್ ವಿಸ್ಕಿಯನ್ನು ಕೂಡ ಕುಡಿಸುತ್ತಿದ್ದಂತೆ ಇದು ಮಹಾರಾಜ ಭೂಪಿಂದರ್ ಸಿಂಗ್ ಅವರ ಐಶ್ವರ್ಯ ಹಾಗೂ ವೈಭೋಗದ ಪ್ರದರ್ಶನದ ಇವವರ ಎಂದು ಬರೆದಿದ್ದಾರೆ ಜೇಮ್ಸ್​ ಶೇರ್​ವೂಡ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment