ನೀರಜ್ ಚೋಪ್ರಾ, ಮನು ಭಾಕರ್ ಓದಿದ್ದು ಏನು.. ಡಿಗ್ರಿಯಾದರೂ ಮುಗಿಸಿದ್ದಾರಾ..?

author-image
Bheemappa
Updated On
ನೀರಜ್ ಚೋಪ್ರಾ, ಮನು ಭಾಕರ್ ಓದಿದ್ದು ಏನು.. ಡಿಗ್ರಿಯಾದರೂ ಮುಗಿಸಿದ್ದಾರಾ..?
Advertisment
  • ಶಾಲಾ ದಿನಗಳಲ್ಲಿ ರೇಗಿಸಿದ್ದಕ್ಕೆ ಸಾಧನೆ ಮಾಡಿದ್ರಾ ನೀರಜ್​ ಚೋಪ್ರಾ?
  • ಮನು ಭಾಕರ್ ಶಾಲಾ ದಿನಗಳಿಂದಲೇ ಸ್ಪೋರ್ಟ್ಸ್​​ನಲ್ಲಿ ಆಸಕ್ತಿ ಇತ್ತು
  • ನೀರಜ್ ಚೋಪ್ರಾ, ಮನು ಭಾಕರ್ ವಿದ್ಯಾಭ್ಯಾಸದ ಹಿನ್ನೆಲೆ ಏನು?

ನೀರಜ್ ಚೋಪ್ರಾ ಹಾಗೂ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೂರು ಮೆಡಲ್​ಗಳನ್ನ ತಂದು ಕೊಟ್ಟ ಶ್ರೇಷ್ಠ ಸ್ಪರ್ಧಿಗಳು. ಇವರ ಸಾಧನೆಗೆ ದೇಶವೇ ಹೆಮ್ಮೆ ಪಡುತ್ತಿದೆ. ಬೆನ್ನಲ್ಲೇ ಇವರಿಬ್ಬರ ಮದುವೆ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದ್ದು ಇದು ಎಷ್ಟು ಸತ್ಯವೋ ಎಂಬುದು ನಿಖರವಾಗಿಲ್ಲ. ನೀರಜ್ ಚೋಪ್ರಾ, ಮನು ಭಾಕರ್ ವಿದ್ಯಾಭ್ಯಾಸದ ಹಿನ್ನೆಲೆ ಏನು ಎಂದು ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ:ದರ್ಶನ್​ ಗ್ಯಾಂಗ್​ ಪ್ರಕರಣದ ಮತ್ತೊಂದು ಮಹತ್ವದ ವರದಿ ಬಯಲು.. ಕಾರಿನಲ್ಲಿ ನಡೆದಿದ್ದು ಏನು?

publive-image

ನೀರಜ್ ಚೋಪ್ರಾ ಓದಿನ ಜೊತೆಗೆ ಬಂದ ಜಾವೆಲಿನ್
ಹರಿಯಾಣದ ಪಾಣಿಪತ್​​ ಜಿಲ್ಲೆಯ ಖಂದ್ರ ಗ್ರಾಮದಲ್ಲಿ 24 ಡಿಸೆಂಬರ್ 1997ರಂದು ನೀರಜ್ ಚೋಪ್ರಾ ಜನಿಸಿದರು. ಪಾಣಿಪತ್​ನ BVN ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ಇವರು ಮೊದಲು ದಪ್ಪವಾಗಿದ್ದರಿಂದ ಎಲ್ಲರೂ ಇವರನ್ನು ರೇಗಿಸುತ್ತಿದ್ದರು. ಇದರ ಅವಮಾನ ತಡೆಯಲಾಗದೇ ಜಿಮ್​ಗೆ ಸೇರಿಕೊಂಡರು. ಇದೇ ವೇಳೆ ಅಲ್ಲೇ ಪಕ್ಕದಲ್ಲಿದ್ದ ಶಿವಾಜಿ ಸ್ಟೇಡಿಯಂನಲ್ಲಿ ಜಾವೆಲಿನ್ ಅನ್ನು ಕೆಲವರು ಅಭ್ಯಾಸ ಮಾಡುವುದನ್ನ ನೋಡಿ ಸ್ಪೋರ್ಟ್ಸ್​​ಗೆ ಸೇರಿಕೊಂಡರು. 2010ರಲ್ಲಿ ತನ್ನ 13ನೇ ವಯಸ್ಸಿನಲ್ಲಿ ಪಂಚಕುಲದ ತು ದೇವಿ ಲಾಲ್ ಸ್ಪೋರ್ಟ್ಸ್​​ ಕಾಂಪ್ಲೇಕ್ಸ್​ಗೆ ಸೇರಿ ಜಾವೇಲಿನ್ ಎಸೆಯಲು ಆರಂಭಿಸಿದರು.

ಬಳಿಕ ಚಂಢೀಘರ್​ನ ದಯಾನಂದ್ ಆಂಗ್ಲೋ ವೇದಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಈ ಓದು ಇಲ್ಲಿಗೆ ಸ್ಟಾಪ್ ಮಾಡಿ 2012-2014ರಲ್ಲಿ ರಾಷ್ಟ್ರೀಯ ಜಾವೆಲಿನ್​ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡರು. ಚೋಪ್ರಾ ಅವರ ಕ್ರೀಡಾ ಸಾಧನೆಯ ಆಧಾರದ ಮೇಲೆ 2016ರಲ್ಲಿ ಇಂಡಿಯನ್ ಆರ್ಮಿ ಸುಬೇದರ್ ಹುದ್ದೆಗೆ ನೇಮಕ ಮಾಡಿಕೊಂಡಿತು. 2021ರಲ್ಲಿ ಪಂಜಾಬ್‌ನ ಜಲಂಧರ್‌ನಲ್ಲಿನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಗೆ ನೀರಜ್​ ಚೋಪ್ರಾ ಅಡ್ಮಿಷನ್ ಆಗಿದ್ದರು. ಪ್ರಸ್ತುತ ಬ್ಯಾಚುಲರ್ ಆಫ್ ಆರ್ಟ್ಸ್‌ನಲ್ಲಿ (ಬಿಎ) ನೀರಜ್​ ಚೋಪ್ರಾ ಪದವಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: 2 ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ಘೋಷಣೆ.. ಕರ್ನಾಟಕದ 3 ಕ್ಷೇತ್ರಗಳಿಗೆ ಬೈ-ಎಲೆಕ್ಷನ್ ಅನೌನ್ಸ್ ಸಾಧ್ಯತೆ

publive-image

ಮನು ಭಾಕರ್ ಕುಟುಂಬವೇ ಎಜುಕೇಶನ್ ಫ್ಯಾಮಿಲಿ
ಇದೇ ಮೊದಲ ಬಾರಿಗೆ ಮಹಿಳಾ ವಿಭಾಗದ ಶೂಟಿಂಗ್​ನಲ್ಲಿ ಮನು ಭಾಕರ್ ಅವರು 2 ಕಂಚಿನ ಪದಕ ಭಾರತಕ್ಕೆ ತಂದುಕೊಟ್ಟು ಸಾಧನೆ ಮಾಡಿದ್ದಾರೆ. ಇವರು ಹರಿಯಾಣದ ಝಜ್ಜಾರ್ ಜಿಲ್ಲೆಯ ಗೋರಿಯಾ ಗ್ರಾಮದಲ್ಲಿ 2002 ಫೆಬ್ರವರಿ 18ರಂದು ಜನಿಸಿದರು. ತಂದೆ ಚೀಫ್ ಇಂಜಿನಿಯರ್ ಆಗಿದ್ರೆ, ತಾಯಿ ಸಂಸ್ಕೃತದಲ್ಲಿ ಮಾಸ್ಟರ್ ಡಿಗ್ರಿ ಪಡೆದು ಪ್ರಿನ್ಸಿಪಾಲ್ ಆಗಿದ್ದಾರೆ.

ಮನು ಭಾಕರ್ ಗ್ರಾಮದಲ್ಲಿ ಶಾಲೆಗೆ ಹೋಗುತ್ತಲೆ ಟೆನ್ನಿಸ್, ಸ್ಕೇಟಿಂಗ್, ಮಣಿಪುರಿ ಮಾರ್ಷಲ್-ಆರ್ಟ್ ಥಾಂಗ್-ಟಾ ಮತ್ತು ಬಾಕ್ಸಿಂಗ್‌ನಂತಹ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡರು. ಮನು ಭಾಕರ್ ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಬಿಎ ಆನರ್ಸ್ ಪದವಿ ಮುಗಿಸಿದ್ದಾರೆ. ಪ್ರಸ್ತುತ ಅವರು ಚಂಡೀಗಢದ ಡಿಎವಿ ಕಾಲೇಜಿನಲ್ಲಿ Public administrationನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment