/newsfirstlive-kannada/media/post_attachments/wp-content/uploads/2025/04/Neeraj_Chopra.jpg)
ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ತಮ್ಮ ಭುಜಬಲದಿಂದ ದೇಶದ ಕೀರ್ತಿ ಪತಾಕೆ ಹಾರಿಸಿದವರು. ಭಾರತದ ಹೆಮ್ಮೆಯ ಜಾವೆಲಿನ್ ಪ್ಲೇಯರ್ ಆಗಿರುವ ನೀರಜ್ ಚೋಪ್ರಾ ಮತ್ತೊಮ್ಮೆ ಸಾಧನೆ ಮಾಡಿದ್ದಾರೆ. 2025ರ ವರ್ಷದಲ್ಲಿ ಗೆಲುವಿನ ಮೂಲಕ ಶುಭಾರಂಭ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಪೊಚ್ ಇನ್ವಿಟೇಷನಲ್ ಟ್ರ್ಯಾಕ್ ಈವೆಂಟ್ (Potch Invitational Track event)ನಲ್ಲಿ ನೀರಾಜ್ ಚೋಪ್ರಾ ಮಹತ್ತದ ಸಾಧನೆ ಮಾಡಿದ್ದಾರೆ. ಎಲ್ಲರಿಗಿಂತಲೂ ದೂರ ಭರ್ಚಿ ಎಸೆಯುವ ಮೂಲಕ ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಚಾಲೆಂಜರ್​ (World Athletics Continental Tour Challenger) ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಸೇರಿ 6 ಸ್ಪರ್ಧಿಗಳ ನಡುವೆ ಪೈಪೋಟಿ ಇತ್ತು. ಇದರಲ್ಲಿ ನೀರಜ್ ಚೋಪ್ರಾಗೆ ಸೌತ್ ಆಫ್ರಿಕಾದ 25 ವರ್ಷದ ಯುವ ಜಾವೆಲಿನ್ ಎಸೆತಗಾರ ಡೌ ಸ್ಮಿತ್ ಕಠಿಣ ಪೈಪೋಟಿ ಕೊಟ್ಟರು. ಆದರೆ ಕೊನೆಯಲ್ಲಿ ನೀರಜ್ ಚೋಪ್ರಾ ಸನಿಹಕ್ಕೂ, ಸ್ಮಿತ್​ ಬರಲಾಗಲಿಲ್ಲ. ಏಕೆಂದರೆ ನೀರಜ್ ಚೋಪ್ರಾ ಎಸೆದಿರುವುದು ಈ ಹಿಂದಿಗಿಂತಲೂ ಅಧಿಕವಾದ ದೂರವಾಗಿದೆ.
ಇದನ್ನೂ ಓದಿ: ತನ್ನ ಗರಡಿಯಲ್ಲಿ ಆಡಿದ ಮಾಜಿ ಆಟಗಾರರೇ RCBಗೆ ವಿರೋಧಿಗಳು ಆಗ್ತಾರಾ.. ಹೇಗೆ ಗೊತ್ತಾ?
/newsfirstlive-kannada/media/post_attachments/wp-content/uploads/2025/04/Neeraj_Chopra_NEW.jpg)
ನೀರಜ್ ಚೋಪ್ರಾ ಅವರು ಸ್ಪರ್ಧೆಯಲ್ಲಿ ಒಟ್ಟು 84.52 ಮೀಟರ್​ ದೂರ ಈಟಿ ಎಸೆಯುವ ಮೂಲಕ ಗೋಲ್ಡ್​ ಮೆಡಲ್​ಗೆ ಮುತ್ತಿಕ್ಕಿದರು. ಅದರಂತೆ ಆಫ್ರಿಕಾದ ಡೌ ಸ್ಮಿತ್ ಅವರು 82.44 ಮೀಟರ್ ದೂರ ಎಸೆದು ಚೋಪ್ರಾಗೆ ಸವಾಲಾಗಿದ್ದರು. ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಚಾಲೆಂಜರ್​ನಲ್ಲಿ ಈ ಇಬ್ಬರು ಮಾತ್ರ 80 ಮೀಟರ್​ ಗಡಿ ದಾಟಿಸಿದ ಜಾವೆಲಿನ್ ಆಟಗಾರರು ಆಗಿದ್ದಾರೆ.
ಮೇ 16 ರಂದು ದೋಹಾ ಡೈಮಂಡ್ ಲೀಗ್​ ಮಟ್ಟದಲ್ಲಿ ಚೋಪ್ರಾ ತಮ್ಮ ಅಭಿಯಾನ ಆರಂಭಿಸಿದರು. 2020ರ ಟೋಕಿಯೊ ಒಲಿಂಪಿಕ್‌ನಲ್ಲಿ ಚಿನ್ನ ಪದಕ ಹಾಗೂ 2024ರ ಪ್ಯಾರಿಸ್ ಒಲಿಂಪಿಕ್‌ನಲ್ಲಿ ಬೆಳ್ಳಿ ಪದಕಕ್ಕೆ ನೀರಜ್ ಚೋಪ್ರಾ ಕೊರಳೊಡ್ಡಿದ್ದರು. 2022ರಲ್ಲಿ ನೀರಜ್ ಚೋಪ್ರಾ ವೈಯಕ್ತಿಕ ಅತ್ಯುತ್ತಮ ಸಾಧನೆ ಎಂದರೆ 89.94 ಮೀಟರ್ ದೂರ ಈಟಿ ಎಸೆದಿದ್ದರು. ಅಂದಿನಿಂದ ಅವರು 90 ಮೀಟರ್ ಗಡಿ ದಾಟಲು ಯತ್ನಿಸುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us