/newsfirstlive-kannada/media/post_attachments/wp-content/uploads/2024/08/NeerajChopra.jpg)
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 2024ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ಆಸೆ ಜೀವಂತವಾಗಿದೆ. ಜಾವಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಅವರು ಇಂದು ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಜಾವಲಿನ್‌ನಲ್ಲಿ ಪದಕದ ಭರವಸೆ ಆಟ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಚಿನ್ನದ ಹಕ್ಕಿಯ ಬೇಟೆಗೆ ಹೊರಟ ನೀರಜ್ ಚೋಪ್ರಾ.. ಭಾರತೀಯ ಪುತ್ರನ ಎದುರಿಗಿದೆ ಸಾಲು ಸಾಲು ಸವಾಲು
ಫೈನಲ್ ಪ್ರವೇಹಿಸುವ ಸುತ್ತಿನಲ್ಲಿ ನೀರಜ್ ಚೋಪ್ರಾ ಅವರು 89 ಮೀಟರ್‌ವರೆಗೂ ಜಾವಲಿನ್ ಎಸೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ನೀರಜ್ ಚೋಪ್ರಾ ಅವರ ಸಾಧನೆಗೆ ಕೋಟ್ಯಾಂತರ ಭಾರತೀಯರು ಶುಭಾಶಯಗಳ ಸುರಿಮಳೆಗೈದಿದ್ದಾರೆ.
ಪ್ಯಾರಿಸ್‌ನಲ್ಲಿ ಇದೇ ಆಗಸ್ಟ್ 8ರಂದು ಜಾವಲಿನ್ ಫೈನಲ್ ಪಂದ್ಯ ನಡೆಯಲಿದೆ. ಗುರುವಾರ ನೀರಜ್ ಚೋಪ್ರಾ ಫೈನಲ್‌ನಲ್ಲಿ ಗೆದ್ದು ಪದಕ ಗೆಲ್ಲುವ ನಿರೀಕ್ಷೆ ಹೆಚ್ಚಾಗಿದೆ. ನೀರಜ್ ಚೋಪ್ರಾ ಅವರು ಕಳೆದ ಬಾರಿಯಂತೆ ಈ ಬಾರಿಯೂ ಚಿನ್ನದ ಪದಕ ಗೆದ್ದು ಬರಲಿ ಅನ್ನೋ ಶುಭ ಹಾರೈಕೆ ಜೋರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ