/newsfirstlive-kannada/media/post_attachments/wp-content/uploads/2025/05/Neeraj_Chopra_NEW-1.jpg)
ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಅವರು ದೋಹಾ ಡೈಮಂಡ್ ಲೀಗ್ 2025ರಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಜಾವೆಲಿನ್ ಎಸೆತದಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದ್ದು ಅಲ್ಲದೇ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ದೋಹಾ ಡೈಮಂಡ್ ಲೀಗ್ 2025ರಲ್ಲಿ ಲೆಫ್ಟಿನೆಂಟ್ ಕರ್ನಲ್ ನೀರಜ್ ಚೋಪ್ರಾ ಅವರು ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಯಾವಾಗಲು 90 ಮೀಟರ್ ದೂರ ಭರ್ಜಿ ಎಸೆಯಬೇಕು ಎನ್ನುವುದು ನೀರಜ್ ಚೋಪ್ರಾ ಅವರ ದೊಡ್ಡ ಆಸೆ ಆಗಿತ್ತು. ಅದರಂತೆ ದೋಹಾ ಡೈಮಂಡ್ ಲೀಗ್ನಲ್ಲಿ ಅದನ್ನು ಈಡೇಸಿಕೊಂಡಿದ್ದಾರೆ. 90.23 ಮೀಟರ್ ದೂರ ಭರ್ಜಿ ಎಸೆದರೂ 2ನೇ ಸ್ಥಾನ ಪಡೆದಿರುವುದು ಕೊಂಚ ನಿರಾಶೆ ಮೂಡಿಸಿದೆ.
ಇದನ್ನೂ ಓದಿ:ISRO 101ನೇ ಮಹತ್ವಾಕಾಂಕ್ಷೆಯ ಉಪಗ್ರಹ EOS-09 ವಿಫಲ
ನೀರಜ್ ಚೋಪ್ರಾಕ್ಕಿಂತ ಜರ್ಮನಿಯ ಜೂಲಿಯನ್ ವೆಬರ್ 91.06 ಮೀಟರ್ ದೂರ ಭರ್ಜಿ ಎಸೆದು ಪ್ರಥಮ ಸ್ಥಾನ ಗಳಿಸಿ ಚಿನ್ನಕ್ಕೆ ಕೊರೊಳೊಡ್ಡಿದರು. ಇದರಿಂದ ನೀರಜ್ ಚೋಪ್ರಾ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು. ಇನ್ನು ವೈಯಕ್ತಿಕವಾಗಿ ಅತಿ ಹೆಚ್ಚು ದೂರ ಭರ್ಜಿ ಎಸೆದಿದ್ದಕ್ಕೆ ನೀರಜ್ ಚೋಪ್ರಾ ಅವರಿಗೆ ಪ್ರಧಾನಿ ಮೋದಿ ಸೇರಿದಂತೆ ಎಲ್ಲರೂ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಕತಾರ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನೀರಜ್ ಚೋಪ್ರಾ ಮೊದಲ ಎಸೆತದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದರು. 88.44 ಮೀಟರ್ ದೂರ ಜಾವೆಲಿನ್ ಎಸೆದಿದ್ದರು. 2ನೇ ಎಸೆತದಲ್ಲಿ ಚೋಪ್ರಾ ವಿಫಲವಾಗಿದ್ದರು. ಆದರೆ 3ನೇ ಎಸೆತದಲ್ಲಿ ಯಾರು ಊಹಿಸದ ರೀತಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಈ ಹಿಂದೆ ಯಾವಾತ್ತೂ ಕೂಡ ಎಸೆಯದಷ್ಟು ದೂರ ಜಾವೆಲಿನ್ ಎಸೆದರು. ಕೊನೆ ಎಸೆತದಲ್ಲಿ ನೀರಜ್ ಚೋಪ್ರಾ ಅವರು 90.23 ಮೀಟರ್ ದೂರ ಭರ್ಜಿ ಎಸೆದು ಹೊಸ ಇತಿಹಾಸ ಬರೆದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ