newsfirstkannada.com

‘ವಿನೇಶ್ ಫೋಗಟ್ ಅನರ್ಹತೆ ನನಗೆ..’ ಬೆಳ್ಳಿಗೆದ್ದ ಹೀರೋ ನೀರಜ್ ಚೋಪ್ರಾ ಫಸ್ಟ್​ ರಿಯಾಕ್ಷನ್..!

Share :

Published August 9, 2024 at 2:41pm

    ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್​ನಿಂದ ಅನರ್ಹ

    ನನಗೆ ತುಂಬಾ ದುಃಖವಾಗಿದೆ ಎಂದ ನೀರಜ್ ಚೋಪ್ರಾ

    ಜಾವೆಲಿನ್ ಸ್ಪರ್ಧೆಯಲ್ಲಿ ಬೆಳ್ಳಿಗೆ ಮುತ್ತಿಟ್ಟಿರುವ ನೀರಜ್ ಚೋಪ್ರಾ

ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ, ವಿನೇಶ್ ಫೋಗಟ್ ಅವರ ಅನರ್ಹ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿನೇಶ್ ಪರ ಬ್ಯಾಟ್ ಬೀಸಿರುವ ಅವರು.. ಅವರು ತುಂಬಾ ಆತ್ಮವಿಶ್ವಾಸದಲ್ಲಿದ್ದರು. ಅನರ್ಹ ಮಾಡಿರೋದು ತುಂಬಾ ನೋವಿನ ಸಂಗತಿ ಎಂದಿದ್ದಾರೆ.

ಮುಂದುವರಿದು ಮಾತನಾಡಿರುವ ಅವರು.. ಅವರು ಫೈನಲ್ ಪ್ರವೇಶ ಮಾಡಿರೋದೇ ದೊಡ್ಡ ಸಾಧನೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿರುವ ಯುಯಿ ಸುಸಾಕಿಯನ್ನು ಸೋಲಿಸಿರುವುದು ಸಾಮಾನ್ಯದ ವಿಚಾರ ಅಲ್ಲ. ನನಗೆ ಕುಸ್ತಿಯ ನಿಯಮಗಳ ಬಗ್ಗೆ ಆಳವಾಗಿ ಮಾಹಿತಿ ಇಲ್ಲ. ಆದರೆ ಅವರು ಅನರ್ಹ ಆಗಿರೋದ್ರಿಂದ ನೋವಿದೆ ಎಂದಿದ್ದಾರೆ.

ಇದನ್ನೂ ಓದಿ:ವಿನೇಶ್ ಫೋಗಟ್ ವಿವಾದಕ್ಕೆ ಹೊಸ ಟ್ವಿಸ್ಟ್; ನಿವೃತ್ತಿ ಘೋಷಣೆ ನಂತರವೂ ಪದಕದ ಭರವಸೆ ಮತ್ತೆ ಚಿಗುರಿದೆ..!

ವಿನೇಶ್ ಅವರ ಕುಸ್ತಿ ಜರ್ನಿ ಕಲ್ಲು ಮುಳ್ಳುಗಳಿಂದ ಕೂಡಿದೆ. 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಗಾಯದ ಸಮಸ್ಯೆ ಎದುರಿಸಿದ್ದರು.  2020ರಲ್ಲೂ ಅವರಿಗೆ ಗಾಯದ ಸಮಸ್ಯೆ ಕಾಡಿತ್ತು. ಅದರ ಜೊತೆಗೆ ಅನೇಕ ವೈಯಕ್ತಿಕ ತೊಂದರೆಗಳನ್ನು ಎದುರಿಸಿದ್ದಾರೆ. ಆದರೂ ಅವರು ಈ ಹಂತವನ್ನು ತಲುಪಿದ್ದೂ ನಿಜಕ್ಕೂ ಗ್ರೇಟ್ ಎಂದಿದ್ದಾರೆ.

ಬೆಳ್ಳಿ ತಂದುಕೊಟ್ಟ ಚೋಪ್ರಾ..
ಪ್ಯಾರಿಸ್ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಮ್‌ ವಿರುದ್ಧ ಕಠಿಣ ಪೈಪೋಟಿ ಎದುರಿಸಿದ್ದರು. ಅರ್ಷದ್ ನದೀಮ್ ಎರಡನೇ ಸೆಟ್​ನಲ್ಲಿ 92.97 ಮೀಟರ್ ದೂರ ಎಸೆದು ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡರು. ನೀರಜ್ ಚೋಪ್ರಾ 89.45 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿಗೆ ಮುತ್ತಿಟ್ಟರು.

ಇದನ್ನೂ ಓದಿ: ಪದಕದ ಕನಸು ಇನ್ನೂ ಜೀವಂತ; ವಿನೇಶ್​ಗೆ ಬೆಳ್ಳಿ ಪದಕ ಕೊಡಿಸಲು ಬಂದ ಭಾರತದ ಅಗ್ರಮಾನ್ಯ ವಕೀಲ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ವಿನೇಶ್ ಫೋಗಟ್ ಅನರ್ಹತೆ ನನಗೆ..’ ಬೆಳ್ಳಿಗೆದ್ದ ಹೀರೋ ನೀರಜ್ ಚೋಪ್ರಾ ಫಸ್ಟ್​ ರಿಯಾಕ್ಷನ್..!

https://newsfirstlive.com/wp-content/uploads/2024/08/NEERAJ-CHOPRA-3.jpg

Load More