/newsfirstlive-kannada/media/post_attachments/wp-content/uploads/2024/08/Neeraj-Chopra-1-1.jpg)
ಭಾರತದ ಚಿನ್ನದ ಹುಡುಗನ ಮೇಲಿಟ್ಟ ಭರವಸೆ ಹುಸಿ ಆಗಿಲ್ಲ. ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಮೊದಲ ಎಸೆತದಲ್ಲೇ ಫೈನಲ್‌ಗೆ ಎಂಟ್ರಿ ಹೊಡೆದಿದ್ದಾರೆ.
ನಿನ್ನೆ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ 89.34 ಮೀಟರ್ ಎಸೆದ ನೀರಜ್ ಚೋಪ್ರಾ, ನೇರವಾಗಿ ಫೈನಲ್‌ಗೆ ಜಂಪ್ ಆಗಿದ್ದಾರೆ. ಮೇನಲ್ಲಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ 88.36 ಮೀಟರ್ ಎಸೆದಿದ್ರು. ಇನ್ನು ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 87.58 ಮೀಟರ್ ಜಾವೆಲಿನ್ ಎಸೆದು ಚಿನ್ನಕ್ಕೆ ಕೊರಳೊಡ್ಡಿದ್ದರು.
ಪ್ಯಾರಿಸ್‌ನಲ್ಲಿ ಇದೇ ಆಗಸ್ಟ್ 8ರಂದು ಜಾವಲಿನ್ ಫೈನಲ್ ಪಂದ್ಯ ನಡೆಯಲಿದೆ. ಗುರುವಾರ ನೀರಜ್ ಚೋಪ್ರಾ ಫೈನಲ್‌ನಲ್ಲಿ ಗೆದ್ದು ಪದಕ ಗೆಲ್ಲುವ ನಿರೀಕ್ಷೆ ಹೆಚ್ಚಾಗಿದೆ. ನೀರಜ್ ಚೋಪ್ರಾ ಅವರು ಕಳೆದ ಬಾರಿಯಂತೆ ಈ ಬಾರಿಯೂ ಚಿನ್ನದ ಪದಕ ಗೆದ್ದು ಬರಲಿ ಅನ್ನೋ ಶುಭ ಹಾರೈಕೆ ಜೋರಾಗಿದೆ.
ಇದನ್ನೂ ಓದಿ: ಒಂದೇ ದಿನ 3 ಪಂದ್ಯ ಗೆಲುವು, ಫೈನಲ್ ತಲುಪಿದ ವಿನೇಶ್ ಫೋಗಾಟ್.. ಇಂದು ಚಿನ್ನಕ್ಕಾಗಿ ಬೇಟೆಯಾಡಲಿದ್ದಾರೆ ದಂಗಲ್ ಹುಡುಗಿ
ಇನ್ನು ನೀರಜ್ ಚೋಪ್ರಾಗೆ ಫೈನಲ್‌ನಲ್ಲಿ 11 ಜನ ಎದುರಾಳಿಗೆ ಸಿಗಲಿದ್ದಾರೆ. ಜೆ. ವಡ್ಲೆಜ್ಚ್, ಎ. ಪೀಟರ್ಸ್, ಕೆ. ವಾಲ್ಕಾಟ್, ಎ. ನದೀಮ್, ಜೆ. ವೆಬರ್, ಜೆ. ಯೆಗೊ, ಎಲ್. ಎಟೆಲಾಟಾಲೊ, ಎ. ಮರ್ದಾರೆ, ಹೆಲ್ಯಾಂಡರ್, ಎಲ್.ಎಂ.ಡಾ ಸಿಲ್ವಾ, T. ಕೆರಾನೆನ್ ನಾಳಿನ ಫೈನಲ್‌ನಲ್ಲಿ ಚೋಪ್ರಾಗೆ ಎದುರಾಳಿಗಳಾಗಿದ್ದಾರೆ. ಇವರೆಲ್ಲರನ್ನು ದಾಟಿ ನೀರಜ್ ಚಿನ್ನದ ಮುತ್ತಿಡುವ ನಿರೀಕ್ಷೆ ಇದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಮನೆಗೆ ನುಗ್ಗಿದ್ದ ಕಳ್ಳ; ಸೈಲೆಂಟ್ ಆಗಿ ಖದೀಮನ ಹಿಡಿದ ಸಲ್ಲು ಭಾಯ್ ಏನ್ ಮಾಡಿದ್ರು?
ಇತ್ತ ಚಿನ್ನದ ಪದಕ ಗೆಲ್ಲುವ ಭಾರತ ಪುರುಷರ ಹಾಕಿ ತಂಡದ ಕನಸು ಭಗ್ನವಾಗಿದೆ. ಸೆಮಿಫೈನಲ್ ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ಭಾರತ ತಂಡ 2-3 ಅಂತರದಲ್ಲಿ ಜರ್ಮನಿ ವಿರುದ್ಧ ಸೋಲು ಅನುಭವಿಸಿತು.. ಇದೀಗ ಭಾರತ ತಂಡ ಆಗಸ್ಟ್ 8 ರಂದು ಕಂಚಿನ ಪದಕಕ್ಕಾಗಿ ಸ್ಪೇನ್ ವಿರುದ್ಧ ಕಾದಾಟ ನಡೆಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ