Advertisment

ಚಿನ್ನ ಗೆಲ್ಲುವ ಬಗ್ಗೆ ನೀರಜ್ ಚೋಪ್ರಾ ಹೇಳಿದ್ದೇನು..? ಇಂದು ದೊಡ್ಡ ನಿರೀಕ್ಷೆಯಲ್ಲಿ ಭಾರತ..

author-image
Ganesh
Updated On
2024 Olympics: ಬೆಳ್ಳಿ ಪದಕ ಗೆದ್ದ ಈ ನೀರಜ್​ ಯಾರು? ಅವ್ರ ಸಾಧನೆಗಳು ಎಷ್ಟು?
Advertisment
  • ಜಾವೆಲಿನ್ ಥ್ರೋ ಫೈನಲ್ ಪಂದ್ಯ ಇಂದು ನಡೆಯಲಿದೆ
  • ಫೈನಲ್ ಪ್ರವೇಶ ಮಾಡಿರುವ ಭಾರತದ ನೀರಜ್ ಚೋಪ್ರಾ
  • 89.34 ಮೀಟರ್‌ ದೂರ ಜಾವೆಲಿನ್ ಎಸೆದು ಫೈನಲ್ ಪ್ರವೇಶ

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ದೊಡ್ಡ ಭರವಸೆ, ಚಿನ್ನದ ಹುಡುಗ ನೀರಜ್ ಚೋಪ್ರಾ ಸಖತ್ ಹುಮ್ಮಸ್ಸಿನಲ್ಲಿದ್ದಾರೆ. ಕಳೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ, ಪ್ರತಿಯೊಬ್ಬ ಭಾರತೀಯನ ನಿರೀಕ್ಷೆಯನ್ನು ಈಡೇರಿಸಿದ್ದರು. ಅಂತಹದೇ ಒಂದು ಶುಭ ಸುದ್ದಿಗಾಗಿ ಇಂದು ಇಡೀ ಭಾರತ ಕಾಯುತ್ತಿದೆ.

Advertisment

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ನೀರಜ್ ಚೋಪ್ರಾ ಫೈನಲ್ ಪ್ರವೇಶ ಮಾಡಿದ್ದು ಇಂದು ಜಾವೆಲಿನ್ ಫೈನಲ್ ನಡೆಯಲಿದೆ. ಫೈನಲ್ ಪ್ರವೇಶದ ಹುಮ್ಮಸ್ಸಿನಲ್ಲಿರುವ ಚೋಪ್ರಾ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲಿಯೇ 89.34 ಮೀಟರ್‌ ದೂರ ಜಾವೆಲಿನ್‌ ಎಸೆದು ಫೈನಲ್‌ಗೆ ಅರ್ಹತೆ ಪಡೆದಿರುವ ಅವರು.. ‘ನಾನು ಫೈನಲ್‌ಗೆ ಸಿದ್ಧನಿದ್ದೇನೆ. ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇನೆ. ಇದು ನನಗೆ ಆತ್ಮವಿಶ್ವಾಸ ಮೂಡಿಸಿದೆ. ನಾನು ಸಂಪೂರ್ಣ ಫಿಟ್ ಆಗಿದ್ದೇನೆ ಮತ್ತು ಯಾವುದೇ ಗಾಯವಾಗಿಲ್ಲ. ನಾನು ಚೇತರಿಸಿಕೊಂಡಿದ್ದೇನೆ, ಹೀಗಾಗಿ ಈ ವರ್ಷವೂ ಚಿನ್ನ ಗೆಲ್ಲಲು ಸಿದ್ಧನಾಗಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ:ವಿನೇಶ್ ಫೋಗಟ್ ಅನರ್ಹ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮಾಡಿದ ಕಂಗನಾ ರಣಾವತ್

ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ
ಅರ್ಹತಾ ಸುತ್ತಿನಲ್ಲಿ ಎರಡೂ ಗುಂಪುಗಳನ್ನು ಒಟ್ಟಿಗೆ ನೋಡುವುದಾದರೆ ನೀರಜ್ ಚೋಪ್ರಾ ಮುಂಚೂಣಿಯಲ್ಲಿಯೇ ಉಳಿದರು. 89.34 ಮೀಟರ್‌ ದೂರ ಕ್ರಮಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿದ ಅವರು, 88.63 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದ ಗ್ರೆನಡಾದ ಆ್ಯಂಡರ್ಸನ್‌ ಪೀಟರ್ಸ್‌ ಎರಡನೇ ಸ್ಥಾನ ಪಡೆದರು. ಜರ್ಮನಿಯ ಜೂಲಿಯನ್ ವೆಬರ್ ಮೂರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಮ್ 86.59 ಮೀಟರ್‌ ದೂರ ಎಸೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.

Advertisment

ಕನಿಷ್ಠ 12 ಕ್ರೀಡಾಪಟುಗಳು ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಒಟ್ಟು 7 ಅಥ್ಲೀಟ್‌ಗಳು ಅರ್ಹತಾ ಸುತ್ತಿನಲ್ಲಿ 84 ಮೀಟರ್‌ಗಳನ್ನು ದಾಟುವ ಮೂಲಕ ನೇರವಾಗಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ 7 ಅಥ್ಲೀಟ್‌ಗಳ ನಂತರ ಅತ್ಯುತ್ತಮ ಥ್ರೋ ಮಾಡುವ ಐದು ಅಥ್ಲೀಟ್‌ಗಳು ಫೈನಲ್‌ಗೆ ಪ್ರವೇಶ ಪಡೆಯುತ್ತಾರೆ.

ಇದನ್ನೂ ಓದಿ:Big Updates: ಸುನಿತಾ ವಿಲಿಯಮ್ಸ್​ಗೆ ಮತ್ತೊಂದು ಸಂಕಷ್ಟ.. ಮತ್ತೆ ಏನಾಯ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment