/newsfirstlive-kannada/media/post_attachments/wp-content/uploads/2024/08/NEERAJ-CHOPRA-1.jpg)
Neeraj Chopra: ಭಾರತದ ಸ್ಟಾರ್ ಅಥ್ಲೀಟ್ ಜಾವೆಲಿನ್ ಎಸೆತಗಾರ ( Javelin thrower) ನೀರಜ್ ಚೋಪ್ರಾ ತಮ್ಮ ಎರಡನೇ ಒಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ತುದಿಗಾಲಲ್ಲಿ ನಿಂತಿದ್ದಾರೆ. 140 ಕೋಟಿ ಭಾರತೀಯರು ಚೋಪ್ರಾ ಅವರಿಂದ ಚಿನ್ನದ ಪದಕವನ್ನು ನಿರೀಕ್ಷಿಸುತ್ತಿದ್ದಾರೆ. ಇಂದು ಅರ್ಹತಾ ಸುತ್ತಿಗೆ ಪ್ರವೇಶಿಸಲಿದ್ದು, ಆಗಸ್ಟ್ 8 ರಂದು ಜಾವೆಲಿನ್ ಎಸೆತದ ಫೈನಲ್ ಪಂದ್ಯ ನಡೆಯಲಿದೆ.
ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರೆ, ಒಲಿಂಪಿಕ್ಸ್ ಇತಿಹಾಸದಲ್ಲಿ ಪ್ರಶಸ್ತಿ ಉಳಿಸಿಕೊಂಡ ಐದನೇ ಜಾವೆಲಿನ್ ಎಸೆತಗಾರ ಎನಿಸಿಕೊಳ್ಳಲಿದ್ದಾರೆ. ಜೊತೆಗೆ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಎರಡು ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ಇದನ್ನೂ ಓದಿ:BSNL 5G ಮೂಲಕ ಮೊದಲ ಕರೆ.. ಇದು ಜಿಯೋ, ಏರ್ಟೆಲ್ಗಿಂತ ಎಷ್ಟು ಕಮ್ಮಿಗೆ ರೀಚಾರ್ಜ್ ಸಿಗುತ್ತೆ..?
ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ, ಇಲ್ಲಿಯವರೆಗೆ ಎರಿಕ್ ಲ್ಯಾಮಿಂಗ್ (1908 ಮತ್ತು 1912), ಜಾನಿ ಮೈರಾ (1920 ಮತ್ತು 1924), ಜಾನ್ ಝೆಲೆಂಜಿ (1992 ಮತ್ತು 1996) ಮತ್ತು ಆಂಡ್ರಿಯಾಸ್ ಟಿ (2004 ಮತ್ತು 2008) ಮಾತ್ರ ಪ್ರಶಸ್ತಿಯನ್ನು ಎರಡನೇ ಬಾರಿಗೆ ಉಳಿಸಿಕೊಂಡಿದ್ದಾರೆ.
ನೀರಜ್ ಚೋಪ್ರಾ ಈ ವರ್ಷ ಮೂರು ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿದ್ದರು. ಆದರೆ ಅವರ ಇತರೆ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಮೇ ತಿಂಗಳಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ 88.36 ಮೀಟರ್ ದೂರ ಎಸೆದಿದ್ದರು. ಅಡ್ಕಕ್ಟರ್‌ನಲ್ಲಿ ನಡೆದ ಸ್ಫರ್ಧೆಯಲ್ಲಿ ಅನಾರೋಗ್ಯದ ಕಾರಣ ಅವರು ಆಡಲಿಲ್ಲ. ಜೂನ್‌ನಲ್ಲಿ ಫಿನ್‌ಲ್ಯಾಂಡ್‌ನಲ್ಲಿ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ 85.97 ಮೀಟರ್ ಎಸೆದು ಚಿನ್ನ ಗೆದ್ದಿದ್ದರು.
ಇದನ್ನೂ ಓದಿ:6 ದಿನದ ಬಳಿಕ ಒಂದಾದ ಕತೆ.. ಮಾಲಕಿ ಮತ್ತು ಶ್ವಾನದ ದೃಶ್ಯ ಕಂಡು ಕಣ್ಣೀರಿಟ್ಟ ಜನ -VIDEO
ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅವರು ಬರೋಬ್ಬರಿ 32 ಜಾವೆಲಿನ್ ಎಸೆತಗಾರರನ್ನು ಎದುರಿಸಲಿದ್ದಾರೆ. ನೀರಜ್ B ಗ್ರೂಪ್ನಲ್ಲಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ 87.54 ಮೀಟರ್ ದೂರ ಎಸೆದು ಅರ್ಹತೆ ಪಡೆದಿರುವ ಭಾರತದ ಮತ್ತೋರ್ವ ಅಥ್ಲೀಟಿ ಕಿಶೋರ್ ಜೆನಾ (Kishore Jena) A ಗ್ರೂಪ್ನಲ್ಲಿದ್ದಾರೆ. ನೀರಜ್ಗೆ ಕಿಶೋರ್ ಕೂಡ ಪ್ರಬಲ ಸ್ಪರ್ಧಿಯೇ. ಇನ್ನು ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಾಲಾಚ್ (Jakub Vadlejch), ಜರ್ಮನಿಯ ಜೂಲಿಯನ್ ವೆಬರ್ (Jakub Vadlejch) ಮತ್ತು ಮಾಜಿ ವಿಶ್ವ ಚಾಂಪಿಯನ್ ಗ್ರೆನಡಾದ ಆಂಡರ್ಸನ್ ಪೀಟರ್ಸ್ ಅವರಿಗೆ ಮತ್ತೊಮ್ಮೆ ಸವಾಲು ಹಾಕಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ