newsfirstkannada.com

ಚಿನ್ನದ ಹಕ್ಕಿಯ ಬೇಟೆಗೆ ಹೊರಟ ನೀರಜ್​ ಚೋಪ್ರಾ.. ಭಾರತೀಯ ಪುತ್ರನ ಎದುರಿಗಿದೆ ಸಾಲು ಸಾಲು ಸವಾಲು

Share :

Published August 6, 2024 at 8:49am

Update August 6, 2024 at 9:29am

    2ನೇ ಬಾರಿಗೆ ಚಿನ್ನ ಪದಕಕ್ಕೆ ಮುತ್ತಿಡುವ ಕನಸು

    ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ ಮೇಲೆ ಎಲ್ಲರ ಕಣ್ಣು

    ಒಟ್ಟು 32 ಅಥ್ಲೀಟ್​​​ಗಳು ಜಾವೆಲಿನ್​​ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ

ಪ್ಯಾರಿಸ್​ನಲ್ಲಿ ಈ ಬಾರಿಯ ಒಲಿಂಪಿಕ್ಸ್​ ನಡೆಯುತ್ತಿದೆ. ಈಗಾಗಲೇ ಭಾರತಕ್ಕೆ ಮೂರು ಕಂಚಿನ ಪದಕ ಸಿಕ್ಕಿದೆ. ಆದರೆ ಚಿನ್ನದ ಪದಕಕ್ಕೆ ಮುತ್ತಿಡುವ ಸಂಭ್ರಮಕ್ಕಾಗಿ ಭಾರತೀಯರು ಕಾಯುತ್ತಿದ್ದಾರೆ. ಹೀಗಾಗಿ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ ಮೇಲೆ ಎಲ್ಲರ ನಿರೀಕ್ಷೆಯಿದೆ.

ನೀರಜ್​ ಚೋಪ್ರಾ ಈ ಹಿಂದೆಯೂ ಒಲಿಂಪಿಕ್ಸ್​ನಲ್ಲಿ ಚಾಂಪಿಯನ್​ ಆಗಿ ಗುರುತಿಸಿಕೊಂಡಿದ್ದಾರೆ. ಭಾರತಕ್ಕೆ ಚಿನ್ನ ಗೆಲ್ಲುವ ಮೂಲಕ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿದವರಿವರು. ಮಾತ್ರವಲ್ಲದೆ, ಏಷ್ಯನ್​ ಗೇಮ್ಸ್​, ಡೈಮಂಡ್​​ ಲೀಗ್​, ಕಾಮನ್​​ ವೆಲ್ತ್​​ ಕ್ರೀಡಾಕೂಟದಲ್ಲೂ ಗೆದ್ದ ಪರಾಕ್ರಮಿ.

ಚಿನ್ನ ಗೆಲುವ ಕನಸು

ಸದ್ಯ ಭಾರತೀಯರ ಕಣ್ಣು ನೀರಜ್​ ಚೋಪ್ರಾ ಅವರ ಮೇಲಿದೆ. ಚಿನ್ನ ಗೆಲ್ಲುತ್ತಾರೆ ಎಂಬ ನಿರೀಕ್ಷೆಯಿದೆ. ಆದರೆ ಕಣದಲ್ಲಿ ಹಲವಾರು ಸ್ಪರ್ಧಿಗಳಿದ್ದು, ಸಾಕಷ್ಟು ಸವಾಲುಗಳು ಇವೆ. ಮಾಹಿತಿ ಪ್ರಕಾರ, 2 ಗುಂಪುಗಳಲ್ಲಿ ಒಟ್ಟು 32 ಅಥ್ಲೀಟ್​​​ಗಳು ಜಾವೆಲಿನ್​​ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಒಂದು ವೇಳೆ ನೀರಜ್​ ಬಿ ಗುಂಪಿನಲ್ಲಿ ಸ್ಥಾನ ಪಡೆದರೆ, ಮತ್ತೋರ್ವ ಕಿಶೋರ್​​ ಜೆನಾ ಅವರು ಎ ಗ್ರೂಪ್​ನಲ್ಲಿರಲಿದ್ದಾರೆ.

ನೀರಜ್​ಗೆ ಪೈಪೋಟಿ ನೀಡುವ ಸ್ಪರ್ಧಿಗಳು

ಪ್ಯಾರಿಸ್​​ ಒಲಿಂಪಿಕ್ಸ್​ನಲ್ಲಿ ನೀರಜ್​ಗೆ ಪ್ರಬಲ ಪೈಪೋಟಿ ನೀಡುವ ಆರು ಕ್ರೀಡಾಪಟುಗಳಿದ್ದಾರೆ. ಅವರೆಲ್ಲರು ಉತ್ತಮ ವೈಯಕ್ತಿಕ ದಾಖಲೆಗಳನ್ನು ಹೊಂದಿದ್ದಾರೆ. ನೀರಜ್​ಗೆ ಜೆಕಿಯಾದ ಜಾಕುಬ್​​ ವಡ್ಲೆಜ್ಚ್​​ ಪೈಪೋಟಿ ನೀಡಲಿದ್ದಾರೆ.

ಜಾಕುಬ್​​ ವಡ್ಲೆಜ್ಚ್ ಹಿಂದಿನ ಎರಡು ವರ್ಷಗಳಲ್ಲಿ ಎದುರಿಸಿದ 19 ಇವೆಂಟ್​​ಗಳಲ್ಲಿ ಮೊದಲ 3 ಸ್ಥಾನವನ್ನು ಪಡೆದಿದ್ದಾರೆ. ಜರ್ಮನಿಯ ಜೂಲಿಯನ್​ ವೆಬರ್ ಅಗ್ರ ಜಾವೆಲಿನ್​ ಎಸೆತಗಾರರಾಗಿ ಗುರುತಿಸಿಕೊಂಡಿದ್ದಾರೆ. ಮತ್ತೋರ್ವ ಜರ್ಮನ್​ನ ಮ್ಯಾಕ್ಸ್​​ ಡೆಹ್ನಿಂಗ್​​ ಕೂಡ ನೀರಜ್​ಗೆ ಪೈಪೋಟಿ ನೀಡುವ ಸ್ಪರ್ಧಿಯಾಗಿದ್ದಾರೆ. ಅಚ್ಚರಿಯೆಂದರೆ ಇವರು 2024ರ ಫೆಬ್ರವರಿಯಲ್ಲಿ 90 ಮೀ ಮಾರ್ಕನ್ನು ದಾಟಿದ್ದಾರೆ. ಆದರೆ ನೀರಜ್​ ಈ ದಾಖಲೆಯನ್ನು ಮಾಡಬೇಕಿದೆ.​

2022ರಲ್ಲಿ ಕಾಮನ್​ವೆಲ್ತ್​​​ ಗೇಮ್ಸ್​ನಲ್ಲಿ ಪಾಕಿಸ್ತಾನದ ಅರ್ಷದ್​​ ನದೀಮ್​​ 90 ಮೀಟರ್​​ ದಾಟಿದ್ದಾರೆ. ಸದ್ಯ ಅವರು ಗಾಯದಿಂದ ವಾಪಸ್ಸಾಗುತ್ತಿದ್ದಾರೆ.

ಆಂಡರ್ಸನ್​​ ಪೀಟರ್ಸ್​ ಮತ್ತೊಬ್ಬ ಸ್ಪರ್ಧಿಯಾಗಿದ್ದು, 2023ರಲ್ಲಿ ಕಳಪೆ ಫಾರ್ಮ್​ನಲ್ಲಿದ್ದರು. ಆದರೆ 2022ರಲ್ಲಿ ಪ್ರಬಲ ಪೈಪೋಟಿ ನೀಡಿದ್ದರು. ಅಂದಹಾಗೆಯೇ ಇವರು 2 ಬಾರಿ ವಿಶ್ವ ಚಾಂಪಿಯನ್​​ ಆಗಿದ್ದಾರೆ.

ಜಾವೆಲಿನ್​ ಎಸೆತ ಯಾವಾಗ?

ಆಗಸ್ಟ್​ 8ರಂದು ನೀರಜ್​ ಚೋಪ್ರಾ ಜಾವೆಲಿನ್​ ಎಸೆತದಲ್ಲಿ ಭಾಗವಹಿಸಲಿದ್ದಾರೆ. ಭಾರತೀಯರು ನೀರಜ್​ ಸ್ಪರ್ಧೆಯನ್ನು ಕಾಣುವ ತವಕದಲ್ಲಿದ್ದಾರೆ. ಭಾರತೀಯರ ನಿರೀಕ್ಷೆಯಂತೆ ನೀರಜ್​ ಈ ಬಾರಿಯೂ ಚಿನ್ನ ಗೆದ್ದು ಮತ್ತೊಂದು ದಾಖಲೆ ನಿರ್ಮಿಸುವಲ್ಲಿ ರೆಡಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿನ್ನದ ಹಕ್ಕಿಯ ಬೇಟೆಗೆ ಹೊರಟ ನೀರಜ್​ ಚೋಪ್ರಾ.. ಭಾರತೀಯ ಪುತ್ರನ ಎದುರಿಗಿದೆ ಸಾಲು ಸಾಲು ಸವಾಲು

https://newsfirstlive.com/wp-content/uploads/2024/08/Biraj-Chopra.jpg

Load More