Advertisment

ನೀರಜ್ ಚೋಪ್ರಾ ಕೋಟಿ ಕೋಟಿ ಆಸ್ತಿ ಒಡೆಯ.. ಚಿನ್ನ ಗೆದ್ದ ನದೀಮ್ ಬಳಿ ಎಷ್ಟು ಕೋಟಿ ಆಸ್ತಿ ಇದೆ..?

author-image
Ganesh
Updated On
ನೀರಜ್ ಚೋಪ್ರಾ ಕೋಟಿ ಕೋಟಿ ಆಸ್ತಿ ಒಡೆಯ.. ಚಿನ್ನ ಗೆದ್ದ ನದೀಮ್ ಬಳಿ ಎಷ್ಟು ಕೋಟಿ ಆಸ್ತಿ ಇದೆ..?
Advertisment
  • ನೀರಜ್ ಚೋಪ್ರಾ ಹೆಂಗೆಲ್ಲ ಹಣ ಸಂಪಾದನೆ ಮಾಡ್ತಾರೆ..?
  • ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚಿನ್ನ, ಬೆಳ್ಳಿ ತಂದುಕೊಟ್ಟಿರುವ ಚೋಪ್ರಾ
  • ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿರುವ ಚೋಪ್ರಾ

ನೀರಜ್ ಚೋಪ್ರಾ ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್-2024ರಲ್ಲಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ದೇಶಕ್ಕೆ ಬೆಳ್ಳಿ ಪದಕವನ್ನು ತಂದುಕೊಟ್ಟಿದ್ದಾರೆ. ಇದಕ್ಕೂ ಮೊದಲು ಚೋಪ್ರಾ ಅವರು 2021ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲಿಂದ ಅವರು ಗೋಲ್ಡನ್ ಬಾಯ್ ಎಂದೇ ಪ್ರಸಿದ್ಧರಾದರು.

Advertisment

ನೀರಜ್ ಚೋಪ್ರಾ ಹರಿಯಾಣದ ಪಾಣಿಪತ್ ನಗರದ ಖಂಡ್ರಾ ಗ್ರಾಮವರು. ನೀರಜ್ ಡಿಸೆಂಬರ್ 24, 1997 ರಂದು ಜನಿಸಿದರು. ನೀರಜ್ ಬಾಲ್ಯದಲ್ಲಿ ದಢೂತಿ ದೇಹವನ್ನು ಹೊಂದಿದ್ದರು. ಹೀಗಾಗಿ ಅವರ ಚಿಕ್ಕಪ್ಪನ ಜೊತೆ ಮೈದಾನದಲ್ಲಿ ನಿತ್ಯ ಓಡಲು ಶುರುಮಾಡಿದ್ದರು. ಈ ವೇಳೆ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಆಟವನ್ನು ನೋಡಿ ಮನಸೋತರು. ಇಂದು ನೀರಜ್ ಚೋಪ್ರಾ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರರಾಗಿದ್ದಾರೆ. ಹೀಗಾಗಿ ಜಗತ್ತಿನ ಬಹುತೇಕರು ಅವರ ಬಗ್ಗೆ ತಿಳಿದುಕೊಳ್ಳಲು ಶುರುಮಾಡಿದ್ದಾರೆ.

publive-image

ಐಷಾರಾಮಿ ಮನೆಯಲ್ಲಿ ವಾಸ!
ಹರಿಯಾಣದ ಪಾಣಿಪತ್‌ನಲ್ಲಿ ನೀರಜ್ ಚೋಪ್ರಾಗೆ ಐಷಾರಾಮಿ ಮನೆ ಇದೆ. ಇದು ಮೂರು ಅಂತಸ್ತಿನ ಮನೆಯಾಗಿದ್ದು, ಕೋಟಿ, ಕೋಟಿ ರೂಪಾಯಿಗೆ ಬೆಲೆ ಬಾಳುತ್ತದೆ. ಜೊತೆಗೆ ಚಿನ್ನ, ಬೆಳ್ಳಿ ಗೆದ್ದುಕೊಟ್ಟ ಚೋಪ್ರಾ ಅವರ ಆಸ್ತಿ ಕೂಡ ಕೋಟಿ ಲೆಕ್ಕದಲ್ಲಿದೆ. 2024ರಲ್ಲಿ ನೀರಜ್ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 38 ಕೋಟಿ ರೂಪಾಯಿ. ನೀರಜ್ ತಮ್ಮ ಹೆಚ್ಚಿನ ಆದಾಯವನ್ನು ಜಾಹೀರಾತುಗಳ ಮೂಲಕ ಗಳಿಸುತ್ತಾರೆ. ಅನೇಕ ದೊಡ್ಡ, ದೊಡ್ಡ ಕಂಪನಿಗಳಿಗೆ ಜಾಹೀರಾತುಗಳನ್ನು ಮಾಡುತ್ತಾರೆ. ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಹೆಚ್ಚು ಹಣ ಗಳಿಸುವ ಭಾರತೀಯ ಕ್ರೀಡಾಪಟುಗಳಲ್ಲಿ ನೀರಜ್ ಕೂಡ ಒಬ್ಬರು.

ಇದನ್ನೂ ಓದಿ:ದ್ರಾವಿಡ್ ಯಾವತ್ತೂ ಇವರನ್ನು ಬೇಸರಗೊಳಿಸಿಲ್ಲ.. ಮತ್ತೊಮ್ಮೆ ಹೃದಯಗೆದ್ದ ಸಿಂಪಲ್​ ಮ್ಯಾನ್..!

Advertisment

ನೀರಜ್ ವಾರ್ಷಿಕವಾಗಿ ಸುಮಾರು 4 ಕೋಟಿ ರೂಪಾಯಿ ಅಂದರೆ ತಿಂಗಳಿಗೆ ಸುಮಾರು 30 ಲಕ್ಷ ರೂಪಾಯಿ ಪಡೆಯುತ್ತಾರೆ. 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ, ನೀರಜ್ ಚೋಪ್ರಾ ವಿವಿಧ ನಗದು ಪ್ರಶಸ್ತಿಗಳನ್ನು ಪಡೆದರು. ಹರಿಯಾಣ ಸರ್ಕಾರ ನೀರಜ್‌ಗೆ ಗರಿಷ್ಠ ಮೊತ್ತ 6 ಕೋಟಿ ರೂಪಾಯಿ ನೀಡಿದೆ. ಇದಲ್ಲದೆ ನೀರಜ್‌ಗೆ ಭಾರತೀಯ ರೈಲ್ವೆ 3 ಕೋಟಿ, ಪಂಜಾಬ್ ಸರ್ಕಾರ 2 ಕೋಟಿ, ಬೈಜು 2 ಕೋಟಿ, ಬಿಸಿಸಿಐ 1 ಕೋಟಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ 1 ಕೋಟಿ ಹಣವನ್ನು ನೀಡಿದೆ.

ಇದನ್ನೂ ಓದಿ:ವಿನೇಶ್ ಫೋಗಟ್​ ಬಳಿ ಕೋಟಿ ಕೋಟಿ ಆಸ್ತಿ.. ಕಾರಿನ ಮೇಲೆ ಭಾರೀ ಕ್ರೇಜ್.. ಎಷ್ಟು ಕೋಟಿ ಒಡತಿ ಗೊತ್ತೇ..?

publive-image

ಇನ್ನು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿರುವ ಪಾಕಿಸ್ತಾನದ ಅರ್ಷದ್ ನದೀಮ್ ಆಸ್ತಿ, ಒಂದು ಕೋಟಿಗಿಂತ ಕಡಿಮೆ ಎಂದು ವರದಿಯಾಗಿದೆ. ಅಂದರೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಅವರು ಚಿನ್ನ ಗೆಲ್ಲುವ ಮೊದಲು ಒಂದು ಕೋಟಿಗಿಂತ ಕಡಿಮೆ. ಚೆನ್ನ ಗೆದ್ದ ಬೆನ್ನಲ್ಲೇ ಅವರ ಮೌಲ್ಯ ಹೆಚ್ಚಾಗಿದ್ದು, ಭಾರೀ ಮೊತ್ತದ ಬಹುಮಾನವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಅವರ ಆಸ್ತಿ ಸಹಜವಾಗಿಯೇ ಏರಿಕೆ ಆಗಲಿದೆ.

Advertisment

ಇದನ್ನೂ ಓದಿ:ವಿದೇಶಿ IPL ಆಟಗಾರರ ವಿರುದ್ಧ ರೊಚ್ಚಿಗೆದ್ದ ಅಶ್ವಿನ್.. ದುಬಾರಿ ಆಟಗಾರರ ಅಸಲಿ ತಂತ್ರ ರಿವೀಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment