/newsfirstlive-kannada/media/post_attachments/wp-content/uploads/2024/08/Neeraj-Chopra1.jpg)
ಪ್ಯಾರಿಸ್ ಒಲಿಂಪಿಕ್ಸ್​​​ನಲ್ಲಿ ಭಾರತಕ್ಕೆ 5ನೇ ಪದಕ ದಕ್ಕಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಸತತ 2ನೇ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದ್ರೆ ಭಾರತಕ್ಕೆ ಲಭಿಸಬೇಕಿದ್ದ ಚಿನ್ನದ ಪದಕ ಈ ಬಾರಿ ಮಿಸ್ ಆಗಿದೆ.
/newsfirstlive-kannada/media/post_attachments/wp-content/uploads/2024/08/Neeraj-Chopra2.jpg)
ಭಾರತದ ಗೋಲ್ಡನ್ ಬಾಯ್ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್​​​ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಆದರೆ ಭಾರತಕ್ಕೆ ಪ್ರಸಕ್ತ ಕ್ರೀಡಾಕೂಟದಲ್ಲಿ ಮೊದಲ ಬೆಳ್ಳಿ ಪದಕವನ್ನು ತಂದು ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/08/Neeraj-Chopra-2.jpg)
ನೀರಜ್, ಆರು ಪ್ರಯತ್ನಗಳಲ್ಲಿ ಎರಡನೇ ಎಸೆತ ಅತ್ಯುತ್ತಮವಾಗಿತ್ತು. ಅವರ ಮೊದಲ, ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಎಸೆತಗಳು ಫೌಲ್ ಆದವು. ಇನ್ನೂ ನೀರಜ್ ಪ್ರಯತ್ನಕ್ಕೆ ಪ್ರಧಾನಿ ಮೋದಿ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
/newsfirstlive-kannada/media/post_attachments/wp-content/uploads/2024/08/Neeraj-Chopra6.jpg)
ಇನ್ನು ನೀರಜ್ ಚೋಪ್ರಾ ಯಾವತ್ತಿದ್ರು ಭಾರತದ ಚಿನ್ನದ ಹುಡುಗ. ಕೈಯಲ್ಲಿ ಜಾವಲೀನ್ ಹಿಡಿದು ಓಡಿ ಬಂದು ಗುರಿಯತ್ತ ಎಸೆದರೇ, ಗಾಳಿಯಲ್ಲಿ ಮಿಂಚಿನ ವೇಗದಲ್ಲಿ ಸಾಗುವ ಆ ಭರ್ಚಿ ಚಿನ್ನಕ್ಕೆ ಮುತ್ತಿಡದೇ ಇರುವುದಿಲ್ಲ. ಆದರೆ ಈ ಬಾರಿ ಮಾತ್ರ ನಿರೀಕ್ಷೆ ಕೊಂಚ ಹುಸಿಗೊಳಿಸಿದೆ. ಸತತ ಪ್ರಯತ್ನ ಮಾಡಿದರೂ ಚಿನ್ನಕ್ಕೆ ಗುರಿ ಮುಟ್ಟಲಾಗದೆ ನೀರಜ್​ ಬೆಳ್ಳಿ ಗೆದ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us