newsfirstkannada.com

NEET- PG ಎಕ್ಸಾಂ ಮುಂದೂಡಿಕೆ.. ಪರೀಕ್ಷೆಯಲ್ಲಿ ಅಕ್ರಮ ವಾಸನೆ, ಸುಬೋಧ್ ಕುಮಾರ್ ಸಿಂಗ್ ವಜಾ

Share :

Published June 23, 2024 at 6:52am

    ಕೊನೆ ಕ್ಷಣದಲ್ಲಿ ನೀಟ್-ಪಿಜಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ

    ಹೊಸ ಪರೀಕ್ಷೆಯ ದಿನಾಂಕಗಳನ್ನು ಪ್ರಕಟ ಮಾಡುವುದು ಯಾವಾಗ?

    ಪರೀಕ್ಷೆಗಳ ಪಾವಿತ್ರ್ಯತೆಗೆ ಭಂಗ, ಅಭ್ಯರ್ಥಿಗಳನ್ನು ಕಂಗೆಡಿಸಿದ ಅಕ್ರಮ

ದೇಶದ ಅತ್ಯಂತ ಕಠಿಣಾತಿ ಕಠಿಣ ಪರೀಕ್ಷೆ ನೀಟ್​​​ನಲ್ಲೂ ಗೋಲ್​​ಮಾಲ್ ನಡೆದೋಯ್ತು. ಬಳಿಕ ನೆಟ್​​​ಪರೀಕ್ಷೆಗೂ ಅಕ್ರಮದ ವಾಸನೆ ಬಡಿದಿದ್ದರಿಂದ ಪರೀಕ್ಷೆ ರದ್ದಾಗಿದೆ. ಪರೀಕ್ಷೆಗಳ ಅಕ್ರಮದ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಅಕ್ರಮಗಳ ಗದ್ದಲದಲ್ಲಿರುವ ಕೇಂದ್ರ ಸರ್ಕಾರ ಇಂದು ನಡೆಯಬೇಕಿದ್ದ ನೀಟ್-ಪಿಜಿ ಪರೀಕ್ಷೆಯನ್ನು ಕೂಡ ಮುಂದೂಡಿಕೆ ಮಾಡಿ ಆದೇಶಿಸಿದೆ.

ಇದು ಲೀಕಾಸುರರ ಲೋಕ. ಇದು ಅಕ್ರಮಗಳ ಜಮಾನ. ಸರ್ಕಾರಿ ನೇಮಕಾತಿಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗ್ತಿದ್ದು ಇತಿಹಾಸ. ಇದನ್ನೂ ಮೀರಿ ಈಗ ಕಠಿಣ ಪರೀಕ್ಷೆಗಳಾದ ನೀಟ್-ನೆಟ್​ ಕೂಡ ಅಕ್ರಮದ ಗೂಡುಗಳಾಗಿ ಮಾರ್ಪಟ್ಟಿವೆ. ಲಕ್ಷ ಲಕ್ಷ ಹಣಕ್ಕೆ ಪ್ರಶ್ನೆ ಪತ್ರಿಕೆಗಳು ಬಿಕರಿಯಾಗಿರುವ ಆರೋಪ ಕೇಳಿಬಂದಿದೆ. ಪರೀಕ್ಷೆಗಳ ಪಾವಿತ್ರ್ಯತೆಗೆ ಭಂಗ ತಂದಿದ್ದು ಅಭ್ಯರ್ಥಿಗಳನ್ನು ಕಂಗೆಡಿಸಿವೆ.

ಕೊನೇ ಕ್ಷಣದಲ್ಲಿ ನೀಟ್-ಪಿಜಿ ಪರೀಕ್ಷೆ ಮುಂದೂಡಿಕೆ

ನೀಟ್‌-ಯುಜಿ ಹಾಗೂ ಯಜಿಸಿ-ನೆಟ್‌ ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ಗದ್ದಲದಲ್ಲಿ ಮುಳುಗೇಳುತ್ತಿರುವ ಕೇಂದ್ರ ಸರಕಾರ ಇದೀಗ ನೀಟ್-ಪಿಜಿ ಪರೀಕ್ಷೆಯನ್ನು ಕೊನೇ ಕ್ಷಣದಲ್ಲಿ ಮುಂದೂಡಿಕೆ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಇಂದು ನಡೆಯಬೇಕಿದ್ದ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಆದೇಶ ನೀಡಿದೆ. ವಿದ್ಯಾರ್ಥಿಗಳಿಗೆ ಉಂಟಾದ ಅನನುಕೂಲತೆಗೆ ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಅಂತ ತಿಳಿಸಿದೆ.

ನೀಟ್​-ನೆಟ್​ ಪರೀಕ್ಷೆಯಲ್ಲಿ ಅಕ್ರಮಗಳ ಬೆನ್ನಲ್ಲೇ ಇಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ಹೊಸ ಪರೀಕ್ಷೆಯ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ನೀಟ್-ಪಿಜಿ ಪರೀಕ್ಷೆ ಮುಂದೂಡಿಕೆ

  • ಇಂದು ದೇಶದ 270 ಕೇಂದ್ರಗಳಲ್ಲಿ ಪರೀಕ್ಷೆ ನಿಗದಿಯಾಗಿತ್ತು
  • 2.2 ಲಕ್ಷ ಅಭ್ಯರ್ಥಿಗಳು ಇಂದು ಪರೀಕ್ಷೆ ಬರೆಯಬೇಕಿತ್ತು
  • ನೀಟ್, ನೆಟ್ ಪರೀಕ್ಷೆಗಳಲ್ಲಿ ಅಕ್ರಮ ಹಿನ್ನೆಲೆ ಈ ಕ್ರಮ
  • ಹೊಸ ಪರೀಕ್ಷೆಯ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟ
  • ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿರ್ಧಾರ ಎಂದ ಕೇಂದ್ರ

ಎನ್​ಟಿಎ ಮುಖ್ಯಸ್ಥ ಸುಬೋಧ್ ಕುಮಾರ್ ಸಿಂಗ್ ವಜಾ

ನೀಟ್-ನೆಟ್ ಪರೀಕ್ಷೆಗಳಲ್ಲಿ ಅಕ್ರಮಗಳ ಬೆನ್ನಲ್ಲೇ ಎನ್​ಟಿಎ ಮುಖ್ಯಸ್ಥ ಸುಬೋಧ್ ಕುಮಾರ್ ಸಿಂಗ್​​​ ವಜಾಗೊಳಿಸಿ ಕೇಂದ್ರ ಆದೇಶಿಸಿದೆ. ಸುಭೋದ್ ಕುಮಾರ್ ಜಾಗಕ್ಕೆ ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಸಂಪಾದಕರಾಗಿರುವ ಪ್ರದೀಪ್‌ ಸಿಂಗ್‌ ಖರೋಲಾ ನೇಮಿಸಿದ್ದು ಹೆಚ್ಚುವರಿಯಾಗಿ ಎನ್‌ಟಿಎ ಮಹಾನಿರ್ದೇಶಕ ಜವಾಬ್ದಾರಿ ನೀಡಲಾಗಿದೆ. ಖರೋಲ ಈ ಹಿಂದೆ ನಮ್ಮ ಮೆಟ್ರೋದ ಬಿಎಂಆರ್‌ಸಿಎಲ್‌ ಸಂಸ್ಥೆಯ ಮುಖ್ಯಸ್ಥರೂ ಆಗಿದ್ದರು.

ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮ ತಡೆಗಟ್ಟಲು ಪಬ್ಲಿಕ್ ಎಕ್ಸಾಮಿನೇಷನ್ ಅಕ್ರಮ ತಡೆ ಕಾಯಿದೆ-2024 ಅನ್ನು ದೇಶಾದ್ಯಂತ ಜಾರಿಗೊಳಿಸಿದೆ.

ಇದನ್ನೂ ಓದಿ: ಇಸ್ಲಾಂ ಧರ್ಮಕ್ಕೆ ಮತಾಂತರ ಆಗ್ತಾರಾ ಸೋನಾಕ್ಷಿ ಸಿನ್ಹಾ? ಮದುವೆ ದಿನವೇ ದೊಡ್ಡ ವಿವಾದ; ಏನದು? 

ಹೊಸ ಕಾಯ್ದೆ ಏನು?

  • ಕಾಪಿ ಮಾಡುವಾಗ ಸಿಕ್ಕಿಬಿದ್ರೆ 5 ವರ್ಷ ಜೈಲು, 10 ಲಕ್ಷ ದಂಡ
  • ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾದರೆ 10 ವರ್ಷ ಜೈಲು
  • ಒಂದು ಕೋಟಿವರೆಗೂ ದಂಡ ವಿಧಿಸುವ ಅವಕಾಶ ಇದೆ
  • ಪರೀಕ್ಷಾ ಅಕ್ರಮ ಸಾಬೀತಾದ್ರೆ ವಾರೆಂಟ್​ ಇಲ್ಲದೇ ಬಂಧನ

ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕಾಯ್ದೆ ಜಾರಿಗೊಳಿಸಿದೆ. ಈಗಲಾದ್ರೂ ಪರೀಕ್ಷಾ ಅಕ್ರಮಗಳು ಕಡಿಮೆ ಆಗುತ್ತಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

NEET- PG ಎಕ್ಸಾಂ ಮುಂದೂಡಿಕೆ.. ಪರೀಕ್ಷೆಯಲ್ಲಿ ಅಕ್ರಮ ವಾಸನೆ, ಸುಬೋಧ್ ಕುಮಾರ್ ಸಿಂಗ್ ವಜಾ

https://newsfirstlive.com/wp-content/uploads/2024/06/NEET_EXAM.jpg

Load More