/newsfirstlive-kannada/media/post_attachments/wp-content/uploads/2025/06/VIJ_NIKHIL_SONNADA.jpg)
ವಿಜಯಪುರ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) 2025ರ ಫಲಿತಾಂಶ ಪ್ರಕಟ ಮಾಡಿದೆ. ಒಟ್ಟು 12.36 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್ಗೆ ಪ್ರವೇಶ ಪಡೆದಿದ್ದಾರೆ. ಇದರಲ್ಲಿ ರಾಜಸ್ಥಾನದ ಮಹೇಶ್ ಕುಮಾರ್ ಇಡೀ ದೇಶಕ್ಕೆ ಪ್ರಥಮ ಶ್ರೇಣಿ ಪಡೆದರೆ, ಕರ್ನಾಟಕಕ್ಕೆ ನಿಖಿಲ್ ಸೊನ್ನದ ಮೊದಲ ಸ್ಥಾನ ಪಡೆದಿದ್ದಾರೆ.
ವಿಜಯಪುರ ನಗರದ ನಿಖಿಲ್ ಸೊನ್ನದ ಇಡೀ ದೇಶಕ್ಕೆ 17ನೇ ಶ್ರೇಣಿಯಲ್ಲಿ ಪಾಸ್ ಆಗಿದ್ರೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮಂಗಳೂರು ವಳಚಿಲ್‌ನ ಎಕ್ಸ್‌ಫರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ನಿಖಿಲ್ ಸೊನ್ನದ ಅವರು 720 ಅಂಕಗಳಿಗೆ 670 ಅಂಕ ಗಳಿಸಿ ಈ ಸಾಧನೆ ಮಾಡಿದ್ದಾರೆ. ವಿಜಯಪುರ ನಗರದ ಸಂಜೀವಿನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ದಂಪತಿ ಡಾ.ಸಿದ್ದಪ್ಪ ಸೊನ್ನದ ಹಾಗೂ ಡಾ.ಮೀನಾಕ್ಷಿ ಸೊನ್ನದ ಅವರ ಮಗನೇ ಈ ನಿಖಿಲ್ ಆಗಿದ್ದಾರೆ.
ಇದನ್ನೂ ಓದಿ:ವಿಮಾನಗಳ ಮೇಲೂ ಸೈಬರ್ ದಾಳಿ ನಡೆಯುತ್ತಾ.. ಅಹ್ಮದಾಬಾದ್ ದುರಂತಕ್ಕೆ ಕಾರಣ ಏನು..?
ವಿಜಯಪುರದ ಸೈನಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದ ನಿಖಿಲ್ ಅವರು ಪಿಯುಸಿಯಲ್ಲಿ ಮಂಗಳೂರಿನ ಎಕ್ಸ್‌ಫರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದರು. ಯಾವಾಗಲೂ ಓದಿನ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದ ನಿಖಿಲ್ ಸದ್ಯ ತಂದೆ, ತಾಯಿಗೆ ಘನತೆ, ಗೌರವ ತಂದಿದ್ದಾರೆ. ಇನ್ನು ಪುತ್ರನ ಸಾಧನೆಗೆ ವೈದ್ಯ ದಂಪತಿ ಸಂತಸ ಪಟ್ಟಿದ್ದು ಮಗನಿಗೆ ಸಿಹಿ ತಿನಿಸಿ ಫೋಟೋಗೂ ಪೋಸ್ ಕೊಟ್ಟಿದ್ದಾರೆ.
ದೇಶದಲ್ಲಿ ಟಾಪ್ 100ರಲ್ಲಿ ಕರ್ನಾಟಕದ ವಿದ್ಯಾರ್ಥಿಗಳು
- ನಿಖಿಲ್ ಸೊನ್ನದ- 17ನೇ ಸ್ಥಾನ
- ರುಚಿರ್ ಗುಪ್ತಾ- 22ನೇ ಸ್ಥಾನ
- ತೇಜಸ್ ಗೊಟಗಲಕರ್- 38ನೇ ಸ್ಥಾನ
- ಪ್ರಂಶು ಜಾಗೀರದಾರ್- 42ನೇ ಸ್ಥಾನ
- ಹರಿಣಿ ಶ್ರೀರಾಮ್- 72ನೇ ಸ್ಥಾನ
- ದಿಗಂತ್ ಎಸ್- 80ನೇ ಸ್ಥಾನ
- ನಿಧಿ ಕೆ.ಜಿ- 84ನೇ ಸ್ಥಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ