VIDEO: ಆ್ಯಸಿಡ್​ ದಾಳಿಗೆ ನರಳಾಡುತ್ತಿರೋ ವಿದ್ಯಾರ್ಥಿನಿ.. ಎಂಥಾ ಕಲ್ಲೆದೆಯು ಈ ದೃಶ್ಯ ಕಂಡಾಗ ಕರಗದೆ ಇರದು!

author-image
AS Harshith
Updated On
VIDEO: ಆ್ಯಸಿಡ್​ ದಾಳಿಗೆ ನರಳಾಡುತ್ತಿರೋ ವಿದ್ಯಾರ್ಥಿನಿ.. ಎಂಥಾ ಕಲ್ಲೆದೆಯು ಈ ದೃಶ್ಯ ಕಂಡಾಗ ಕರಗದೆ ಇರದು!
Advertisment
  • ವಿದ್ಯಾರ್ಥಿನಿ ಮುಖದ ಮೇಲೆ ಏಕಾಏಕಿ ಆ್ಯಸಿಡ್​ ದಾಳಿ
  • ನರಳಾಟ, ಕೂಗಾಟ ಎಲ್ಲವೂ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆ
  • 24 ಗಂಟೆಗಳಲ್ಲಿ ಕ್ರೂರಿಯನ್ನ ಬಂಧಿಸಿದ ಪೊಲೀಸರು.. ಆತ ಯಾರು?

ಇದು ಅಕ್ಷರಶಃ ಕಣ್ಣೀರು ತರಿಸುವ ವಿಡಿಯೋ. ಎಂಥಾ ಕಡು ಪಾಪಿಗಾದರು ಕಲ್ಲೆದೆ ಕರಗದೆ ಹೋಗದು. ಅಷ್ಟರ ಮಟ್ಟಿಗೆ ಭೀಕರವಾಗಿದೆ ವಿದ್ಯಾರ್ಥಿನಿಯೊಬ್ಬಳು ಆ್ಯಸಿಡ್​ ದಾಳಿಯಿಂದ ನರಳುತ್ತಿರುವ ದೃಶ್ಯ.

ಸಹೋದರನೊಂದಿಗೆ ನೀಟ್​ ಕೌನ್ಸೆಲಿಂಗ್​ಗೆ ಹೊರಟ ವಿದ್ಯಾರ್ಥಿನಿ ಮೇಲೆ ಏಕಾಏಕಿ ಆ್ಯಸಿಡ್​ ದಾಳಿಯಾದ ಘಟನೆಯಿದು. ಅಪರಿತ ವ್ಯಕ್ತಿಯೊರ್ವ ವಿದ್ಯಾರ್ಥಿನಿ ಮುಖದ ಮೇಲೆ ಆ್ಯಸಿಡ್​ ಎರಚಿ ಪರರಾರಿಯಾಗಿದ್ದಾನೆ. ಆದರೆ ಆಕೆಯ ನರಳಾಟ, ಕೂಗಾಟ ಎಲ್ಲವೂ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಭೀಕರ ದೃಶ್ಯವನ್ನು ಕಂಡಾಗ ಎಂಥಾ ಕಲ್ಲೆದೆಗೂ ಮನಸ್ಸು ಕರಗದೆ ಇರತ್ತಾ?.


">July 4, 2024

ಇದನ್ನೂ ಓದಿ: ಬಾಕ್ಸ್​ ಆಫೀಸ್​ ಸುಲ್ತಾನನೇ ಸಿಕ್ಕಿರುವಾಗ.. ಈ ಕೊಲೆ, ಪಶ್ಚಾತ್ತಾಪ ಇರಲ್ಲ.. ಪವಿತ್ರಾ ಬಗ್ಗೆ ಹೀಗಂದ್ರಾ ಈ ಡೈರೆಕ್ಟರ್​!

ಲಕ್ನೋದಲ್ಲಿ ಜುಲೈ 2ರಂದು ನಡೆದ ಘಟನೆಯಿದು. ಸಹೋದರನೊಂದಿಗೆ ನೀಟ್​ ಕೌನ್ಸೆಲಿಂಗ್​ಗೆ ಹೊರಟ ವಿದ್ಯಾರ್ಥಿನಿ ಮುಖದ ಮೇಲೆ ಅಪರಿಚಿತನೋರ್ವ ಆ್ಯಸಿಡ್​​ ಅಟ್ಯಾಕ್​ ಮಾಡುತ್ತಾನೆ. ಈ ವೇಳೆ ಸಹೋದರನಿಗೂ ಅದರಿಂದ ಗಾಯವಾಗಿದ್ದು, ನರಳುತ್ತಿರುವ ಸಹೋದರಿಗೆ ತನ್ನ ಬ್ಯಾಗಲ್ಲಿದ್ದ ಬಾಟಲಿಯಿಂದ ಮುಖಕ್ಕೆ ನೀರು ಹಾಕುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.


">July 4, 2024

ಇದನ್ನೂ ಓದಿ: ಅಂಬಾನಿ ಮಗನ ಮದ್ವೆಗೆ ಟೀಂ ಇಂಡಿಯಾ ಆಟಗಾರರಿಗೆ ಆಹ್ವಾನ! ವಿಶ್ವಕಪ್​ ಗೆಲ್ಲಿಸಿಕೊಟ್ಟ ತ್ರಿಮೂರ್ತಿಗಳಿಗೆ ವಿಶೇಷ ಗೌರವ

ಆ್ಯಸಿಡ್​ ಅಟ್ಯಾಕ್​ ನಡೆದ ಕೆಲವೇ ನಿಮಿಷಗಳಲ್ಲಿ ಲಕ್ನೋ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಕೂಡಲೇ ತಂಡವನ್ನು ರಚಿಸಿ ಆ್ಯಸಿಡ್​ ಅಟ್ಯಾಕ್​ ಮಾಡಿದ ಕ್ರೂರಿಗಾಗಿ ಹುಡುಕಾಟ ನಡೆಸುತ್ತಾರೆ. ಕೊನೆಗೆ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುತ್ತಾರೆ.


">July 4, 2024

ಇದನ್ನೂ ಓದಿ: ಪವಿತ್ರಾಗೆ ಒಂಚೂರು ಆ್ಯಕ್ಟಿಂಗ್ ಬರಲ್ಲ‌.. ಕಿಸ್ಸಿಂಗ್ ಸೀನ್ ಇದೆ ಅಂದಾಗ ಸಿನಿಮಾ ಒಪ್ಪಿದ್ಲು; ನಿರ್ದೇಶಕಿ ಚಂದ್ರಕಲಾ

ಆ್ಯಸಿಡ್​ ಅಟ್ಯಾಕ್​ ಮಾಡಿದ ಕ್ರೂರಿಯನ್ನು ಪೊಲೀಸರು ಹಾಗೆಯೇ ಹೋಗಿ ಹಿಡಿದಿಲ್ಲ. ಆತನ ಕಾಳಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ. ಎನ್​ಕೌಂಟರ್​ ವೇಳೆ ಆರೋಪಿಯನ್ನು ಅಭಿಷೇಕ್​ ವರ್ಮಾ ಎಂದು ಗುರುತಿಸಲಾಗಿದೆ. ಈತ ಲಖಿಂಪುರ ಖೇರಿ ನಿವಾಸಿಯಾಗಿದ್ದು, ಪೊಲೀಸರು ಆತನನ್ನು ಸರಿಯಾಗಿ ಬೆಂಡೆತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment