NEET-UG ಫಲಿತಾಂಶ.. ರಾಜಸ್ಥಾನದ ಮಹೇಶ್ ಕುಮಾರ್‌ಗೆ ಮೊದಲ ಸ್ಥಾನ; ಟಾಪ್ 10 ಪಟ್ಟಿ ಇಲ್ಲಿದೆ

author-image
admin
Updated On
NEET-UG ಫಲಿತಾಂಶ.. ರಾಜಸ್ಥಾನದ ಮಹೇಶ್ ಕುಮಾರ್‌ಗೆ ಮೊದಲ ಸ್ಥಾನ; ಟಾಪ್ 10 ಪಟ್ಟಿ ಇಲ್ಲಿದೆ
Advertisment
  • ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET-UG ಫಲಿತಾಂಶ
  • ಮೆಡಿಕಲ್ ಪ್ರವೇಶ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳು
  • ಒಟ್ಟು 12 ಲಕ್ಷದ 36 ಸಾವಿರ ಅಭ್ಯರ್ಥಿಗಳಿಗೆ ಅರ್ಹತೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇಂದು NEET-UG 2025ರ ಫಲಿತಾಂಶ ಪ್ರಕಟ ಮಾಡಿದೆ. ದೇಶಾದ್ಯಂತ ಒಟ್ಟು 12 ಲಕ್ಷದ 36 ಸಾವಿರ ಅಭ್ಯರ್ಥಿಗಳು ಈ ಬಾರಿಯ ಮೆಡಿಕಲ್ ಪ್ರವೇಶ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.

ರಾಜಸ್ಥಾನ ಮೂಲದ ಮಹೇಶ್ ಕುಮಾರ್ ಅವರು NEET-UG 2025ರಲ್ಲಿ ಇಡೀ ಭಾರತದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ. ಮಧ್ಯಪ್ರದೇಶದ ಉತ್ಕರ್ಷ್ ಅವಧಿಯಾ ದ್ವಿತೀಯ ಸ್ಥಾನದಲ್ಲಿದ್ದಾರೆ. ದೆಹಲಿಯ ಅವಿಕಾ ಅಗರ್ವಾಲ್ ಅವರು ಮಹಿಳೆಯರಲ್ಲೇ ಅಗ್ರಸ್ಥಾನ ಹಾಗೂ ಇಡೀ ಭಾರತದಲ್ಲಿ AIR 5ನೇ ಸ್ಥಾನಗಳಿಸಿದ್ದಾರೆ.

publive-image

ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಟಾಪ್ 10 ಅಭ್ಯರ್ಥಿಗಳು ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಗುಜರಾತ್, ಪಂಜಾಬ್ ರಾಜ್ಯಗಳ ಪಾಲಾಗಿದೆ. ಫಲಿತಾಂಶವನ್ನು NEET ಅಧಿಕೃತ ವೆಬ್‌ಸೈಟ್ ಆದ neet.nta.nic.in ಅಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ: ಇಸ್ರೇಲ್ ಮೇಲೆ ಮಿಸೈಲ್​ ಮಳೆ ಸುರಿಸಿದ ಇರಾನ್; ಟೆಲ್ ಅವೀವ್ ನಗರದ ದೊಡ್ಡ, ದೊಡ್ಡ ಕಟ್ಟಡಗಳು ಧ್ವಂಸ 

ಅಧಿಕೃತ ವೆಬ್‌ಸೈಟ್‌ನಲ್ಲಿ ‘NEET UG 2025 Result’ ಅನ್ನು ಕ್ಲಿಕ್ ಮಾಡಬೇಕು. ನಂತರ ಅಪ್ಲಿಕೇಷನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ದಾಖಲಿಸಿದರೆ ನಿಮ್ಮ NEET-UG 2025 ಫಲಿತಾಂಶ ಲಭ್ಯವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment