ಪ್ರವಾಹದಲ್ಲಿ 10 ತಿಂಗಳ ಶಿಶು ಅನಾಥ; ಕಂದಮ್ಮಳಿಗಾಗಿ ಮಿಡಿದ ಸರ್ಕಾರ! ‘ರಾಜ್ಯದ ಕೂಸು’ ಎಂದು ಘೋಷಣೆ!

author-image
Ganesh
Updated On
ಪ್ರವಾಹದಲ್ಲಿ 10 ತಿಂಗಳ ಶಿಶು ಅನಾಥ; ಕಂದಮ್ಮಳಿಗಾಗಿ ಮಿಡಿದ ಸರ್ಕಾರ! ‘ರಾಜ್ಯದ ಕೂಸು’ ಎಂದು ಘೋಷಣೆ!
Advertisment
  • ಭೀಕರ ಪ್ರವಾಹದಲ್ಲಿ ಅಪ್ಪ, ಅಮ್ಮ, ಅಜ್ಜಿಯನ್ನೂ ಕಳೆದುಕೊಂಡಳು
  • ಜುಲೈ 1 ರಂದು ನಡೆದ ಘೋರ ದುರಂತ ಎಂಥದ್ದು ಗೊತ್ತಾ..?
  • ಸರ್ಕಾರದ ನಿರ್ಧಾರಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗ್ತಿದೆ..

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಧೀಡೀರ್ ಪ್ರವಾಹದಿಂದ ಹತ್ತಾರು ಮಂದಿ ಸಾ*ವನ್ನಪ್ಪಿದ್ದಾರೆ. ಅನೇಕರು ನಾಪತ್ತೆಯಾಗಿದ್ದಾರೆ. ನೂರಾರು ಕೋಟಿ ರೂಪಾಯಿ ಆಸ್ತಿಪಾಸ್ತಿ ನಷ್ಟವಾಗಿದೆ. ಮೇಘ ಸ್ಫೋಟ ಅನೇಕರ ಬಾಳನ್ನು ಅಕ್ಷರಶಃ ಕತ್ತಲಿಗೆ ದೂಡಿಬಿಟ್ಟಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಪ್ಲ್ಯಾಶ್ ಫ್ಲಡ್​ನಿಂದ 10 ತಿಂಗಳ ನವಜಾತ ಶಿಶು ಅಕ್ಷರಶಃ ಅನಾಥವಾಗಿದೆ.

ಇದನ್ನೂ ಓದಿ: ಕೆಟ್ಟದಾಗಿ ಕಮೆಂಟ್ ಮಾಡಿದವ್ರಿಗೆ ಪುಕಪುಕ.. ರಮ್ಯಾ ಒಬ್ಬರಿಂದಲೇ ಅಲ್ಲ, ಬಿತ್ತು ಮತ್ತೊಂದು ಕೇಸ್..!

publive-image

ದಿಢೀರ್​ ಪ್ರವಾಹದಲ್ಲಿ ಈ 10 ತಿಂಗಳು ಮಗು, ತಂದೆ- ತಾಯಿ ಹಾಗೂ ಇಡೀ ಕುಟುಂಬ ವರ್ಗವನ್ನು ಈ ಮಗು ಕಳೆದುಕೊಂಡಿದೆ. ಈಗ ಈ ನೀತಿಕಾ ಎಂಬ ಹೆಸರಿನ ಮಗುವನ್ನು ರಾಜ್ಯ ಸರ್ಕಾರವೇ 'ರಾಜ್ಯದ ಮಗು' ಎಂದು ಘೋಷಿಸಿದೆ. ಹೆಣ್ಣು ಮಗುವಿನ ಶಿಕ್ಷಣ ಮತ್ತು ಬೆಳವಣಿಗೆಗೆ ಸಂಪೂರ್ಣ ಬೆಂಬಲ ನೀಡಲು ಹಿಮಾಚಲ ಪ್ರದೇಶ ರಾಜ್ಯ ಸರ್ಕಾರ ನಿರ್ಧರಿಸಿದೆ.

ನೀತಿಕಾ ಎಂಬ ಹೆಣ್ಣು ಮಗು ತಂದೆ-ತಾಯಿ, ಅಜ್ಜಿಯನ್ನು ಕಳೆದುಕೊಂಡಿದೆ. ಜೂನ್ 30 ಹಾಗೂ ಜುಲೈ 1ರ ರಾತ್ರಿ ಮಂಡಿ ಜಿಲ್ಲೆಯ ತಲವಾರಾ ಗ್ರಾಮದಲ್ಲಿ ಮೇಘ ಸ್ಫೋಟ ಸಂಭವಿಸಿ ಭಾರಿ ಮಳೆ ಸುರಿದಿದೆ. ತಂದೆ ರಮೇಶ್ ಸಾವನ್ನಪ್ಪಿದ್ದಾರೆ. ತಂದೆ ರಾಧಾದೇವಿ ಹಾಗೂ ಅಜ್ಜಿ ಪೂರ್ಣೂ ದೇವಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರು ಬದುಕುಳಿದಿರುವ ಸಾಧ್ಯತೆಗಳು ತೀರಾ ಕಡಿಮೆ. 31 ವರ್ಷದ ತಂದೆ ರಮೇಶ್, ಪ್ರವಾಹದ ನೀರು ಅನ್ನು ಮನೆಯಿಂದ ಬೇರೆಡೆಗೆ ಡೈವರ್ಟ್ ಮಾಡಲು ಮನೆಯ ಹೊರಗೆ ಬಂದಿದ್ದರು. ತಾಯಿ, ಅಜ್ಜಿ ಕೂಡ ರಮೇಶ್ ಗೆ ಸಹಾಯ ಮಾಡುತ್ತಿದ್ದರು. ಆದರೇ, ಯಾರೊಬ್ಬರು ಮನೆಗೆ ಹಿಂತಿರುಗಿಲ್ಲ.

ಇದನ್ನೂ ಓದಿ: ರಕ್ಷಿತಾ ಬೆನ್ನಲ್ಲೇ ವಿಜಯಲಕ್ಷ್ಮೀ ಕೌಂಟರ್​​..? ಮಾರ್ಮಿಕ ಪೋಸ್ಟ್ ಮಾಡಿದ ದರ್ಶನ್ ಪತ್ನಿ

publive-image

ನೀತಿಕಾಳನ್ನು ಈಗ 'ರಾಜ್ಯದ ಮಗು' ಎಂದು ಮುಖ್ಯಮಂತ್ರಿ ಸುಖ ಆಶ್ರಯ ಯೋಜನೆಯಡಿ ಹಿಮಾಚಲ ಪ್ರದೇಶ ರಾಜ್ಯ ಸರ್ಕಾರ ಘೋಷಿಸಿದೆ. ರಾಜ್ಯ ಸರ್ಕಾರವೇ ನವಜಾತ ಶಿಶುವಿನ ಬೆಳವಣಿಗೆ, ಲಾಲನೆ ಪಾಲನೆ, ಶಿಕ್ಷಣ ಹಾಗೂ ದೀರ್ಘಾವಧಿಯ ಭವಿಷ್ಯದ ಪ್ಲ್ಯಾನ್​​ನ ಹೊಣೆಯನ್ನು ಹೊತ್ತಿಕೊಳ್ಳಲಿದೆ ಎಂದು ಕಂದಾಯ ಸಚಿವ ಜಗತ್ ಸಿಂಗ್ ನೇಗಿ ಹೇಳಿದ್ದಾರೆ.

ಭವಿಷ್ಯದಲ್ಲಿ ಈಗ ಹೆಣ್ಣು ಮಗು, ವೈದ್ಯೆ, ಇಂಜಿನಿಯರ್, ಅಧಿಕಾರಿಯಾಗಲು ಬಯಸಿದರೆ ಅದರ ಎಲ್ಲಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದಿದ್ದಾರೆ. ಸುಖ ಆಶ್ರಯ ಯೋಜನೆಯನ್ನು 2023ರಲ್ಲಿ ಆರಂಭಿಸಲಾಗಿದ್ದು, ಅನಾಥ ಮಕ್ಕಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತೆ. ಆಹಾರ, ಆಶ್ರಯ, ಬಟ್ಟೆ, ಉನ್ನತ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತೆ. 18 ರಿಂದ 27 ನೇ ವಯಸ್ಸಿನವರೆಗೂ ಕೌಶಲ್ಯಾಭಿವೃದ್ಧಿಗೂ ನೆರವು ನೀಡಲಾಗುತ್ತೆ ಎಂದು ಕಂದಾಯ ಸಚಿವ ಜಗತ್ ಸಿಂಗ್ ನೇಗಿ ಹೇಳಿದ್ದಾರೆ.

ಇದನ್ನೂ ಓದಿ: ಕೆಟ್ಟದಾಗಿ ಕಮೆಂಟ್ ಮಾಡಿದವ್ರಿಗೆ ಪುಕಪುಕ.. ರಮ್ಯಾ ಒಬ್ಬರಿಂದಲೇ ಅಲ್ಲ, ಬಿತ್ತು ಮತ್ತೊಂದು ಕೇಸ್..!

ರಾಜ್ಯದ ಮಗುವಿಗೆ ಬಟ್ಟೆ, ಹಬ್ಬದ ಭತ್ಯೆ, ಅಂತರ್ ರಾಜ್ಯ ಭೇಟಿಗೆ ಭತ್ಯೆ, ವೈಯಕ್ತಿಕ ಖರ್ಚುವೆಚ್ಚ ನಿಭಾಯಿಸಲು ಸ್ಟೈಫಂಡ್ ನೀಡಲಾಗುತ್ತೆ. ಉನ್ನತ ಶಿಕ್ಷಣ, ವೃತ್ತಿಪರ ತರಬೇತಿ, ಸ್ಟಾರ್ಟ್ ಅಪ್ ಆರಂಭಿಸಲು ಫಂಡ್ ಹಾಗೂ ಮನೆ ಕಟ್ಟಿಕೊಳ್ಳಳು ಹಣ ಸಹ ನೀಡಲಾಗುತ್ತದೆ.

ಜೂನ್ 31, ಜುಲೈ 1ರ ಮಧ್ಯೆರಾತ್ರಿ ನೀತಿಕಾ ಮನೆಯಲ್ಲಿ ಒಬ್ಬಳೇ ಅಳುತ್ತಿದ್ದಿದ್ದನ್ನು ನೆರೆಮನೆಯ ಪ್ರೇಮ ಸಿಂಗ್ ನೋಡಿದ್ದಾರೆ. ಬಳಿಕ ಮಗುವಿನ ಸಂಬಂಧಿ ಬಲವಂತ್ ಎನ್ನುವವರಿಗೆ ಮಾಹಿತಿ ನೀಡಿದ್ದಾರೆ. ಬಲವಂತ್ ಮಾಜಿ ಸಿಎಂ ಜೈರಾಮ ಠಾಕೂರ್ ಅವರ ಖಾಸಗಿ ಕಾರ್ಯದರ್ಶಿಯಾಗಿದ್ದಾರೆ. ಸದ್ಯ ನೀತಿಕಾ, ತನ್ನ ಸಂಬಂಧಿ ಕಿರಣಾ ದೇವಿ ಎನ್ನುವವರ ಬಳಿ ಇದೆ. ಕಿರಣಾ ದೇವಿ, ಮೃತ ರಮೇಶ್ ಸೋದರಿ. ತಲವಾರಾ ಗ್ರಾಮದಿಂದ 20 ಕಿಮೀ ದೂರದ ಶಿಖೋರಿ ಗ್ರಾಮದಲ್ಲಿ ತನ್ನ ಸೋದರತ್ತೆ ಮನೆಯಲ್ಲಿ ಈ ಅನಾಥ ಶಿಶು ನೀತಿಕಾ ಇದೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್​ ಬಿಗ್​​ ಅಪ್​ಡೇಟ್ಸ್​.. ಬುರುಡೆ ರಹಸ್ಯಕ್ಕಾಗಿ ದೂರುದಾರನ ಜೊತೆ ಕಾಡಿಗೆ ಎಂಟ್ರಿ..! ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment