/newsfirstlive-kannada/media/post_attachments/wp-content/uploads/2025/03/KOHLI_ROHIT.jpg)
ಪ್ರತಿಷ್ಠೆಯ ಸರಣಿಗಾಗಿ ಇಂಗ್ಲೆಂಡ್ ಕಾಲಿಟ್ಟಿರೋ ಟೀಮ್ ಇಂಡಿಯಾವನ್ನ ಯುದ್ಧದ ಆರಂಭಕ್ಕೂ ಮುನ್ನವೇ ಹಿನ್ನಡೆಯ ಭೀತಿ ಆವರಿಸಿದೆ. ಸಮರಾಭ್ಯಾಸದ ವೇಳೆಯೇ ದಿಗ್ಗಜರ ಅಲಭ್ಯತೆ ತಂಡವನ್ನ ಕಾಡಿದೆ. ಕಿಂಗ್ ಕೊಹ್ಲಿ, ಹಿಟ್ಮ್ಯಾನ್ ರೋಹಿತ್, ಅಶ್ವಿನ್, ಶಮಿಯ ಅಲಭ್ಯತೆ ಇಂಗ್ಲೆಂಡ್ ತಂಡಕ್ಕೆ ಬಿಗ್ ರಿಲೀಫ್ ನೀಡಿದ್ರೆ, ಟೀಮ್ ಇಂಡಿಯಾಗೆ ಟೆನ್ಶನ್ ತಂದಿಟ್ಟಿದೆ.
ಇಂಡೋ-ಇಂಗ್ಲೆಂಡ್ ಮದಗಜಗಳ ನಡುವಿನ ಕಾಳಗಕ್ಕೆ ದಿನಗಣನೆ ಶುರುವಾಗಿದೆ. 5 ಪಂದ್ಯಗಳ ಟೆಸ್ಟ್ ಸರಣಿ ಜೂನ್ 20ರಿಂದ ಆರಂಭವಾಗಲಿದ್ದು ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸೋ ಕನಸು ಕಾಣ್ತಿದೆ. ಆದ್ರೆ, ಆ ಕನಸು ನನಸಾಗುತ್ತಾ.? ಯಾಕಂದ್ರೆ, ಬಲಿಷ್ಠ ಇಂಗ್ಲೆಂಡ್ ತಂಡವನ್ನ ಅವರದ್ದೇ ನೆಲದಲ್ಲಿ ಎದುರಿಸಲು ಟೀಮ್ ಇಂಡಿಯಾದಲ್ಲಿ ಬರಿ ಯುವ ಆಟಗಾರರೇ ತುಂಬಿಕೊಂಡಿದ್ದಾರೆ. ಹೀಗಾಗಿ ಸೀನಿಯರ್ಗಳ ಅಲಭ್ಯತೆ ತಂಡವನ್ನ ಕಾಡಲಿದೆ ಅನ್ನೋ ವಿಶ್ಲೇಷಣೆ ಶುರುವಾಗಿದೆ. ಅದ್ರಲ್ಲೂ ಈ ನಾಲ್ವರನ್ನಂತೂ ಟೀಮ್ ಇಂಡಿಯಾ ಅತಿ ಹೆಚ್ಚು ಮಿಸ್ ಮಾಡಿಕೊಳ್ಳಲಿದೆ.
ಕಾಡಲಿದೆ ಕಿಂಗ್ ಕೊಹ್ಲಿಯ ಅಲಭ್ಯತೆ.!
ಕ್ರಿಕೆಟ್ ಲೋಕದ ಸುಲ್ತಾನ ವಿರಾಟ್ ಕೊಹ್ಲಿ ಹೆಸರನ್ನ ಕೇಳಿದ್ರೇನೆ ಎದುರಾಳಿ ಪಡೆಗಳು ಬೆಚ್ಚಿ ಬೀಳ್ತವೆ. ಯಾವುದೇ ಟೆಸ್ಟ್ ಸರಣಿ ಆರಂಭವಾದ್ರೂ ಕೊಹ್ಲಿಯನ್ನ ಕಟ್ಟಿ ಹಾಕೋದು ಹೇಗೆ ಅನ್ನೋ ಚರ್ಚೆ ಎದುರಾಳಿ ತಂಡಗಳಲ್ಲಿ ನಡೀತಿತ್ತು. ಕೊಹ್ಲಿಯ ಆಟದ ಗತ್ತೇ ಅಂತದ್ದು. ಇಂಗ್ಲೆಂಡ್ನ ಟಫ್ ಕಂಡಿಷನ್ಸ್ನಲ್ಲೂ ಕೊಹ್ಲಿ ಸರಾಗವಾಗಿ ಬ್ಯಾಟ್ ಬೀಸಿದ್ರು. ಆಂಗ್ಲರ ನಾಡಲ್ಲಿ 33.2 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದ ಕೊಹ್ಲಿ 1096 ರನ್ಗಳಿಸಿದ್ರು. 3 ಪ್ರವಾಸಗಳಲ್ಲಿ ಆಡಿದ ಅನುಭವವಿತ್ತು. ಈ ಅನುಭವಿ ವಿರಾಟ್ ಇದೀಗ ತಂಡದಲ್ಲಿಲ್ಲ.
ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮಾತ್ರ ಮಿಸ್ ಆಗಿಲ್ಲ, ಲೀಡರ್ ವಿರಾಟ್ ಕೊಹ್ಲಿಯನ್ನೂ ಟೀಮ್ ಇಂಡಿಯಾ ಮಿಸ್ ಮಾಡಿಕೊಳ್ಳಲಿದೆ. ಆಟಗಾರರ ಪಾಲಿಗೆ ಎನರ್ಜಿ ಬೂಸ್ಟರ್ ಆಗಿದ್ದ ವಿರಾಟ್ ಕೊಹ್ಲಿ ತನ್ನ ಅಗ್ರೆಸ್ಸಿವ್ ಆ್ಯಟಿಟ್ಯೂಟ್ನಿಂದಲೇ ಎದುರಾಳಿಗಳ ಮೇಲೆ ಪ್ರೆಷರ್ ಬ್ಯುಲ್ಡ್ ಮಾಡ್ತಿದ್ರು. ಈ ಬಾರಿಯ ಪ್ರವಾಸದಲ್ಲಿ ಬಾರ್ನ್ ಲೀಡರ್ ಕೊಹ್ಲಿಯ ಅಲಭ್ಯತೆ ಟೀಮ್ ಇಂಡಿಯಾವನ್ನ ಕಾಡಲಿದೆ.
ನೋ ಹಿಟ್ಮ್ಯಾನ್.. ಇಂಗ್ಲೆಂಡ್ಗೆ ನೋ ಟೆನ್ಶನ್.!
ಆಂಗ್ಲರ ನಾಡು ಇಂಗ್ಲೆಂಡ್ನಲ್ಲೂ ಪವರ್ಫುಲ್ ಹಿಟ್ಟಿಂಗ್ನಿಂದಲೇ ರೋಹಿತ್ ಶರ್ಮಾ ಸೌಂಡ್ ಮಾಡಿದರು. 40.3ರ ಸಾಲಿಡ್ ಸರಾಸರಿಯನ್ನ ಹೊಂದಿದ್ದ ರೋಹಿತ್ 524 ರನ್ಗಳನ್ನ ಗಳಿಸಿದರು. ಅಗ್ರೆಸ್ಸಿವ್ ಆರ್ಭಟ ನಡೆಸ್ತಿದ್ದ ಹಿಟ್ಮ್ಯಾನ್, ಇಂಗ್ಲೆಂಡ್ ಬೌಲರ್ಗಳ ಪಾಲಿಗೆ ತಲೆನೋವಾಗಿದ್ರು. ಪ್ರವಾಸಕ್ಕೂ ಮುನ್ನವೇ ಟೆಸ್ಟ್ ಕ್ರಿಕೆಟ್ಗೆ ರೋಹಿತ್ ಶರ್ಮಾ ಗುಡ್ ಬೈ ಹೇಳಿರೋದು ಇಂಗ್ಲೆಂಡ್ಗೆ ಬಿಗ್ ರಿಲೀಫ್ ನೀಡಿದ್ರೆ, ಟೀಮ್ ಇಂಡಿಯಾಗೆ ಟೆನ್ಶನ್ ತಂದಿಟ್ಟಿದೆ.
ಅಶ್ವಿನ್ ಆಲ್ರೌಂಡ್ ಆಟದ ಬಲವಿಲ್ಲ.!
ಹಿಂದಿನ ಇಂಗ್ಲೆಂಡ್ ಪ್ರವಾಸಗಳಲ್ಲಿ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಆಲ್ರೌಂಡ್ ಆಟದಿಂದ ಬಲ ತುಂಬಿದರು. ಬೌನ್ಸಿ ಟ್ರ್ಯಾಕ್ನಲ್ಲೂ ಸ್ಪಿನ್ ಮ್ಯಾಜಿಕ್ ಮಾಡಿ ಬ್ಯಾಟ್ಸ್ಮನ್ಗಳಿಗೆ ಶಾಕ್ ಕೊಡ್ತಿದ್ದ ಅಶ್ವಿನ್ 18 ವಿಕೆಟ್ ಬೇಟೆಯಾಡಿದ್ರು. 23.7ರ ಸರಾಸರಿಯಲ್ಲಿ 261 ರನ್ಗಳಿಸಿ ಬ್ಯಾಟಿಂಗ್ನಲ್ಲೂ ಕಾಂಟ್ರಿಬ್ಯೂಟ್ ಮಾಡಿದ್ರು. ಆದ್ರೆ, ಈ ಬಾರಿ ಅಶ್ವಿನ್ ಆಲ್ರೌಂಡ್ ಆಟದ ಬಲ ಟೀಮ್ ಇಂಡಿಯಾಗಿಲ್ಲ.
ಇದನ್ನೂ ಓದಿ:ಜೇನುನೊಣ ನುಂಗಿ ಜೀವ ಬಿಟ್ಟ ಸಂಜಯ್ ಕಪೂರ್.. ಇಡೀ ಕಪೂರ್ ಫ್ಯಾಮಿಲಿ, ಶಾರುಖ್ಗಿಂತ ದೊಡ್ಡ ಶ್ರೀಮಂತ!
ಶಮಿಗೆ ಮಾಯದ ಗಾಯ.. ಬೂಮ್ರಾ ಮೇಲೆ ಭಾರ.!
ಅನುಭವಿ ಸ್ಟೀಡ್ಸ್ಟರ್ ಮೊಹಮ್ಮದ್ ಶಮಿ ಕೂಡ ಈ ಬಾರಿ ಇಂಗ್ಲೆಂಡ್ ಟೂರ್ನ ಟೀಮ್ನಲ್ಲಿಲ್ಲ. ಆಂಗ್ಲರ ನಾಡಲ್ಲಿ ಧಮ್ದಾರ್ ಬೌಲಿಂಗ್ ನಡೆಸಿ 42 ವಿಕೆಟ್ ಉರುಳಿಸಿದ್ದ ಅನುಭವಿಯ ಅಲಭ್ಯತೆಯಿಂದ ಬೌಲಿಂಗ್ ವಿಭಾಗದ ಬಲ ಕುಂದಿದೆ. ಫಿಟ್ನೆಸ್ ಸಮಸ್ಯೆಯಿಂದ ಹೊರಬಿದ್ದಿರೋದು ಬೂಮ್ರಾ ಮೇಲಿನ ಭಾರವನ್ನ ಹೆಚ್ಚು ಮಾಡಿದೆ. ಬೌಲಿಂಗ್ ವಿಭಾಗದಲ್ಲಿ ಅನಾನುಭವಿಗಳೇ ಇರೋದ್ರಿಂದ ಟೂರ್ನಿ ಸಾಗಿದಂತೆ ಶಮಿಯ ಕೊರತೆ ಕಾಡೋ ಸಾಧ್ಯತೆಯಿದೆ.
ಇವರಿಷ್ಟೇ ಅಲ್ಲ, ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ಗಳಾದ ಚೇತೇಶ್ವರ್ ಪೂಜಾರ, ಅಂಜಿಕ್ಯಾ ರಹಾನೆ ಆಯ್ಕೆ ಲಭ್ಯರಿದ್ರೂ ಆಯ್ಕೆ ಸಮಿತಿ ಪರಿಗಣಿಸಿಲ್ಲ. ಸೀನಿಯರ್ಸ್ ಕಡೆಗಣಿಸಿ ಯುವ ಆಟಗಾರರಿಗೆ ಮಣೆ ಹಾಕಿದೆ. ಇಂಗ್ಲೆಂಡ್ನ ಪ್ಲೇಯಿಂಗ್ ಕಂಡಿಷನ್ಸ್ ಬಗ್ಗೆ ಹೆಚ್ಚಿನ ಅರಿವಿಲ್ಲದಿರೋ ಆಟಗಾರರೇ ತಂಡದಲ್ಲಿರೋದು ಮೊದಲೇ ಆತ್ಮವಿಶ್ವಾಸವನ್ನ ಕುಗ್ಗಿಸಿದೆ. ಟೂರ್ನಿಯಲ್ಲಿ ಆರಂಭದ ಬಳಿಕ ಇನ್ನಷ್ಟು ಒತ್ತಡ ಹೆಚ್ಚಾಗಲಿದ್ದು ಅದನ್ನ ಯಂಗ್ ಇಂಡಿಯಾ ಹೇಗೆ ನಿಭಾಯಿಸುತ್ತೆ ಅನ್ನೋದು ಸದ್ಯ ದೊಡ್ಡ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ