newsfirstkannada.com

ಜಲಮಂಡಳಿ ತೋಡಿದ ಮೃತ್ಯುಕೂಪಕ್ಕೆ ಪ್ರಾಣ ತೆತ್ತ ಯುವಕ.. ಈ ಸಾವಿಗೆ ಹೊಣೆ ಯಾರು? ಅಸಲಿಗೆ ಆಗಿದ್ದೇನು?

Share :

Published April 15, 2024 at 8:47pm

Update April 15, 2024 at 8:41pm

  ಮೃತ ಯುವಕನ ಕುಟುಂಬಕ್ಕೆ ಪರಿಹಾರ ಕೊಡುವುದರ ಬಗ್ಗೆ ಮೀಟಿಂಗ್ ಮಾಡ್ತೀವಿ!

  ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರು ಯುವಕರಿಗೆ ಆಸ್ಪತ್ಸೆಯಲ್ಲಿ ಚಿಕಿತ್ಸೆ

  ಈ ಸಾವಿಗೆ ಜಲ ಮಂಡಳಿಯೇ ಕಾರಣ ಅಂತ ಆಕ್ರೋಶ ಹೊರ ಹಾಕಿದ ಸ್ಥಳೀಯರು

ಬೆಂಗಳೂರು: ಇಷ್ಟು ದಿನ ಬಿಬಿಎಂಪಿ ಗುಂಡಿಯಿಂದ ಜನ ಪ್ರಾಣ ಕಳೆದುಕೊಳ್ಳುತ್ತಿದ್ದರು. ಇದೀಗ ಈ ಪಟ್ಟಿಗೆ ಜಲಮಂಡಳಿ ಕೂಡ ಸೇರುತ್ತಾ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ಜಲಮಂಡಳಿ ಮಾಡಿದ ಅದೊಂದು ಎಡವಟ್ಟು ಒಂದು ಜೀವವನ್ನೆ ಬಲಿ ಪಡೆದಿದೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಕಣ್ಣೀರು ಸುರಿಸುವಂತಾಗಿದೆ.

ಜಲಮಂಡಳಿಯ ದಿವ್ಯ ನಿರ್ಲಕ್ಷ್ಯ! ಗುಂಡಿಗೆ ಬಿದ್ದು ಯುವಕನ ಸಾವು

ಈ ಹುಡುಗನ ಹೆಸರು ಸದ್ದಾಂ ಪಾಷಾ ಅಂತ. ಆದ್ರೀಗ ಜಲಮಂಡಳಿ ಮಾಡಿದ ಎಡವಟ್ಟಿಗೆ ಸದ್ದಾಂ ಪಾಶ ಪ್ರಾಣವೇ ಹೋಗಿರೋ ಆರೋಪ ಕೇಳಿ ಬಂದಿದೆ. ಈ ಸದ್ದಾಂ ಪಾಶ ಭಾನುವಾರ ರಾತ್ರಿ ತನ್ನ ಸ್ನೇಹಿತರ ಜೊತೆ ಬೈಕ್​​ನಲ್ಲಿ ಬರ್ತಿದ್ದ. ದುರಂತ ಏನಂದ್ರೆ ಆ ಬೈಕ್​ನಲ್ಲಿ ಮೂರು ಜನ ಇದ್ರು. ಬೈಕ್​ನಲ್ಲಿ ಬರೋವಾಗ ಮೂರು ಜನ ಕೊಮ್ಮಗಟ್ಟ ಸರ್ಕಲ್​ ಬಳಿ ಈ ದೆವ್ವದಂತ ಬೃಹತ್ ಗುಂಡಿಗೆ ಬಿದ್ದಿದ್ದಾರೆ. ಬೈಕ್ ಸಮೇತ ಗುಂಡಿಗೆ ಬಿದ್ದ ಪರಿಣಾಮ ಮೂವರ ಪೈಕಿ ಸದ್ದಾಂ ಪಾಶಾಗೆ ತೀವ್ರವಾದ ಪೆಟ್ಟಾಗಿದೆ. ಹೀಗಾಗಿ ಸದ್ದಾಂ ಜೀವ ಬಲಿಯಾಗಿ ಹೋಗಿದೆ. ಅಷ್ಟಕ್ಕೂ ಸದ್ದಾಂ ಪ್ರಾಣ ಬಲಿ ಪಡೆದ ಗುಂಡಿ ತೋಡಿದ್ಯಾರು ಅಂದ್ರೆ.

ಹೌದು, ಸದ್ದಾಂ ಪಾಶ ತನ್ನಿಬ್ಬರ ಸ್ನೇಹಿತರಾದ ಉಮ್ರಾನ್ ಪಾಷ ಮತ್ತು ಮುಬಾರಕ್ ಪಾಷ ಜೊತೆ ಸಂಬಂಧಿಕರ ಮನೆಗೆ ತೆರಳ್ತಾ ಇದ್ದ. ಆದ್ರೀಗ ಸಂಬಂಧಿಕರ ಮನೆಗೆ ಹೋಗ್ಬೇಕಾದವನು ಮಸಣದ ಮನೆ ಸೇರಿದ್ದಾನೆ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಜೈಕಾ ಹಣಕಾಸು ಸಹಯೋಗದಲ್ಲಿ ಪೈಪ್ ಲೈನ್ ಅಳವಡಿಸುವ ಸಲುವಾಗಿ ಈ ಗುಂಡಿ ತೋಡಲಾಗಿತ್ತು. ಆದ್ರೆ ರಾತ್ರಿ ಹೊತ್ತಲ್ಲಿ ಈ ಗುಂಡಿಯನ್ನ ಬೈಕ್​ನಲ್ಲಿದ್ದ ಮೂರು ಜನ ಗಮನಿಸಿಲ್ಲ. ಹೀಗಾಗಿ ಗುಂಡಿಗೆ ಬಿದ್ದ ಮೂವರ ಪೈಕಿ ಓರ್ವ ಸಾವನ್ನಪ್ಪಿದ್ದಾನೆ. ಇನ್ನುಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಇದನ್ನೂ ಓದಿ: ಹೈದರಾಬಾದ್​​​ ವಿರುದ್ಧ ರೋಚಕ ಪಂದ್ಯ; ಆರ್​​​ಸಿಬಿಯನ್ನು ಗೆಲ್ಲಿಸಲು ಅಚ್ಚರಿ ಪ್ಲೇಯರ್​ ಎಂಟ್ರಿ

ಇತ್ತ, ಯುವಕನ ಸಾವಿಗೆ ಜಲ ಮಂಡಳಿಯೇ ಕಾರಣ ಅಂತ ಜನ ಆಕ್ರೋಶ ಹೊರ ಹಾಕಿದ್ದಾರೆ. ಇಷ್ಟು ದೊಡ್ಡ ಗುಂಡಿ ಇದ್ರೂ ಕೇವಲ ಒಂದೇ ಒಂದು ಬ್ಯಾರಿಕೇಡ್ ಇಡಲಾಗಿತ್ತು. ಜೊತೆಗೆ ಸಂಪೂರ್ಣ ರಸ್ತೆಯಲ್ಲಿ ಯಾವುದೇ ಬೀದಿದೀಪಗಳೂ ಸಹ ಇಲ್ಲ. ಹೀಗಿರುವಾಗಿ ಕಾಮಗಾರಿ ನಡೆಸೋರು ಗುಂಡಿ ಕಾಣುವಂತೆ ವ್ಯವಸ್ಥೆ ಮಾಡ್ಬೇಕಿತ್ತು. ಹೀಗಾಗಿ ಜಲಮಂಡಳಿಯ ನಿರ್ಲಕ್ಷ್ಯಕ್ಕೆ ಅಮಾಯಕನ ಜೀವ ಹೋಯ್ತು ಅಂತ ಜನ ಕೆಂಡ ಕಾರಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಜಲಮಂಡಳಿ ಅಧ್ಯಕ್ಷ, ಜಲಮಂಡಳಿ ಕಡೆಯಿಂದ ಯಾವುದೇ ನಿರ್ಲಕ್ಷವಾಗಿಲ್ಲ, ನಗರಕ್ಕೆ ನೀರು ಕೊಡಬೇಕೆಂದು ಸಿನ್ಸಿಯರ್ ಆಗಿ ಕೆಲಸ ಮಾಡ್ತಾ ಇದ್ದೀವಿ, ಮಾನವೀಯತೆಯ ದೃಷ್ಟಿಯಿಂದ ಮೃತಪಟ್ಟವರಿಗೆ ಪರಿಹಾರ ಕೊಡೊದರ ಬಗ್ಗೆ ಮೀಟಿಂಗ್ ಮಾಡ್ತೀವಿ ಎಂದಿದ್ದಾರೆ. ಅದೇನೆ ಹೇಳಿ ಇಲ್ಲಿ ಹುಡುಗರು ತಪ್ಪು ಮಾಡಿದ್ರೋ. ಅಥವಾ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ರಾ ಅನ್ನೋದಕ್ಕಿಂತ ಒಂದು ಜೀವ ಹೋಗಿರೋದು ದೊಡ್ಡದು. ಹೀಗಾಗಿ ಇಂಥಾ ವಿಚಾರದಲ್ಲಿ ಜನರು ಕೂಡ ಅಲರ್ಟ್ ಆಗಿರಬೇಕು. ಹಾಗೆ ಅಧಿಕಾರಿಗಳು ಕೊಂಚ ಎಚ್ಚರಿಕೆಯಿಂದ ಕೆಲಸ ಮಾಡ್ಬೇಕು. ಆಗಲೇ ಇಂಥಾ ಘಟನೆಗಳು ಮತ್ತೆ ಮರುಕಳಿಸಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಲಮಂಡಳಿ ತೋಡಿದ ಮೃತ್ಯುಕೂಪಕ್ಕೆ ಪ್ರಾಣ ತೆತ್ತ ಯುವಕ.. ಈ ಸಾವಿಗೆ ಹೊಣೆ ಯಾರು? ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/04/death1-1.jpg

Load More