ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಕೇಸ್​.. ಕೈ ಮುಗಿದು ಕರ್ನಾಟಕಕ್ಕೆ ಕ್ಷಮೆ ಕೇಳಿದ ನೇಹಾ ಬಿಸ್ವಾಲ್; ಹೇಳಿದ್ದೇನು?

author-image
Veena Gangani
Updated On
ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಕೇಸ್​.. ಕೈ ಮುಗಿದು ಕರ್ನಾಟಕಕ್ಕೆ ಕ್ಷಮೆ ಕೇಳಿದ ನೇಹಾ ಬಿಸ್ವಾಲ್; ಹೇಳಿದ್ದೇನು?
Advertisment
  • ಕನ್ನಡಿಗರು ಕೆರಳುವಂತೆ ಮಾಡಿದ್ದ ಹೊರ ರಾಜ್ಯದ ಯುವತಿ
  • ಕೆಟ್ಟ ಪದಗಳನ್ನ ಬಳಸಿ ಆಕ್ರೋಶ ಹೊರ ಹಾಕಿದ್ದ ನೇಹಾ ಬಿಸ್ವಾಲ್
  • ಐ ಲವ್ ಬೆಂಗಳೂರು, ಕರ್ನಾಟಕದ ಬಗ್ಗೆ ಗೌರವ ಇದೆ ಎಂದ ನೇಹಾ

ಬೆಂಗಳೂರು: ಮೊನ್ನೆಯಷ್ಟೇ ಉತ್ತರ ಭಾರತದ ಯುವತಿ ಬೆಂಗಳೂರಿಗರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಳು. ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ಧಿ ಇಲ್ಲ ಎಂದು ದುರಹಂಕಾರ ಮಾತನ್ನು ಆಡಿದ್ದಳು. ಇದೀಗ ಆ ಯುವತಿ ಮತ್ತೊಂದು ವಿಡಿಯೋವನ್ನು ಶೇರ್ ಮಾಡಿ ಕರ್ನಾಟಕಕ್ಕೆ ಕ್ಷಮೆ ಕೇಳಿದ್ದಾಳೆ.

ಇದನ್ನೂ ಓದಿ:‘ಇಲ್ಲಿರೋರು ಅನಕ್ಷರಸ್ಥರು’.. ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಉತ್ತರ ಭಾರತದ ಯುವತಿ.. ಕಾರಣವೇನು?

ಒಡಿಶಾ ಮೂಲದ ನೇಹಾ ಬಿಸ್ವಾಲ್ ಎಂಬ ಯುವತಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಪಿಜಿಯಲ್ಲಿದ್ದಾಳೆ. ಯುವತಿ ಶೇರ್ ಮಾಡಿದ್ದ ವಿಡಿಯೋದಲ್ಲಿ, ಚಾಲಕನೊಬ್ಬ ಮಳೆ ಬರುತ್ತಾ ಇದ್ದರೂ ಕಾರನ್ನು ಜೋರಾಗಿ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಆಗ ರಸ್ತೆ ಮೇಲೆ ಬಿದ್ದ ನೀರು ಆಕೆಯ ಮೈಮೇಲೆ ಹಾರಿದೆ. ಇದಕ್ಕೆ ಸಿಟ್ಟಿಗೆದ್ದ ಆಕೆ, ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ಧಿ ಇಲ್ಲ, ಜೋರು‌ ಮಳೆ ಬರ್ತಿದ್ರೂ, ವಾಹನವನ್ನ ಜೋರಾಗಿ ಓಡಿಸ್ತಾರೆ. ಬೆಂಗಳೂರಲ್ಲಿರೋರು ಅನಕ್ಷರಸ್ಥರೆಂದು ಎಂದು ಕೋಪದಲ್ಲಿ ಮಾತಾಡಿದ್ದಾಳೆ. ಆವೇಶದಲ್ಲಿ ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಯುವತಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಳು.

ಆ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಈಕೆಗೆ ಪೋಸ್ಟ್​ಗೆ ಕಾಮೆಂಟ್ಸ್​ ಮಾಡುವ ಮೂಲಕ ಕನ್ನಡಿಗರು ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಮೊನ್ನೆ ಮಾತಿನ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದ ನೇಹಾ ಬಿಸ್ವಾಲ್ ಈಗ ಸ್ವಾಫ್ಟ್ ಆಗಿ ರಿಯಾಕ್ಟ್​ ಮಾಡಿದ್ದಾಳೆ. ಘಟನೆಯ ಬಗ್ಗೆ ಸ್ವಾಫ್ಟ್ ಆಗಿಯೇ ರಿಯಾಕ್ಟ್ ಮಾಡಿ ಆಗ ಆದ ಘಟನೆ ಬಗ್ಗೆ ವಿವರಿಸಿದ್ದಾಳೆ. ಐ ಲವ್ ಬೆಂಗಳೂರು, ಕರ್ನಾಟಕದ ಬಗ್ಗೆ ಗೌರವ ಇದೆ ಅಂತ ಕೆಲವೊಂದು ಸಲಹೆಗಳನ್ನ ಕೊಟ್ಟಿದ್ದಾರೆ.

ಇದನ್ನೂ ಓದಿ:ಮಹಿಳೆಯರಿಗಾಗಿ ಸರ್ಕಾರದ ಯೋಜನೆ.. ಆದ್ರೆ ಕೋಟಿ ಕೋಟಿ ಹಣ ನುಂಗಿದ ರಾಜ್ಯದ ಪುರುಷರು!

publive-image

ನೇಹಾ ಬಿಸ್ವಾಲ್ ಹೇಳಿದ್ದೇನು?

ಬೆಂಗಳೂರಿಗರಿಂದ ಯಾವುದೇ ಸಮಸ್ಯೆ ಇಲ್ಲ. ಐ ಲವ್ ಬೆಂಗಳೂರು, ಕೆಲಸ, ಅನ್ನ ಕೊಡ್ತಿರುವ ಜಾಗ ಇದು. ಕೆಲವೊಂದು‌ ವಿಚಾರಗಳನ್ನು ಬದಲಾವಣೆ ಮಾಡಿಕೊಂಡರೆ ಒಳ್ಳೆದು. ಜೋರು ಮಳೆ ಬರುವಾಗ, ರಸ್ತೆಯಲ್ಲಿ ನೀರು‌ ನಿಂತಿದ್ದಾಗ ವಾಹನವನ್ನ ನಿಧಾನವಾಗಿ ಓಡಿಸಿ, ಇಲ್ಲದಿದ್ರೆ ಸಮಸ್ಯೆಯಾಗುತ್ತೆ. ನನ್ ಬಟ್ಟೆ ಮೇಲೆ ನೀರು ಬಿದ್ರೆ ನನ್ ಹತ್ರ ಬೇರೆ ಬಟ್ಟೆ ಇದೆ. ನಾನು ಬದಲಾಗಿ ಬೇರೆ ಬಟ್ಟೆಯನ್ನ ಹಾಕಬಲ್ಲೆ. ಆದ್ರೆ ರಸ್ತೆ ಬದಿ ಕೆಲ ಬಡವರು ಇರ್ತಾರೆ. ರಸ್ತೆ ಪಕ್ಕ ಮಲಗಿಕೊಂಡು ಇರುತ್ತಾರೆ. ಅಂತವರಿಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment