/newsfirstlive-kannada/media/post_attachments/wp-content/uploads/2025/04/neha-howda1.jpg)
ನೇಹಾ ಗೌಡ ಕನ್ನಡ ಸೇರಿದಂತೆ ತಮಿಳು ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರೋ ನಟಿ. ತಮಿಳು ಇಂಡಸ್ಟ್ರಿಯಲ್ಲಿ ಆತ್ಮಿಯ ಸ್ನೇಹಿತರನ್ನ ಸಂಪಾದಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಶ್ರೀದೇವಿ ಅಶೋಕ, ಶ್ರುತಿ ಶಣ್ಮುಗ ದಶಕದ ಗೆಳತಿಯರು.
ಇದನ್ನೂ ಓದಿ: ಆರ್ಸಿಬಿಗೆ ಯಾರೇ ಬರಲಿ, ಯಾರೇ ಹೋಗಲಿ.. ಕೊಹ್ಲಿಯ ಈ ದೊಡ್ಡ ಗುಣದ ಬಗ್ಗೆ ಗೊತ್ತಿರಲಿ..
ವರ್ಷದ ಅಂತರದಲ್ಲೇ ಮೂವರು ಮದುವೆ ಆಗಿದ್ರು. ಶ್ರೀದೇವಿ ಸೀಮಂತದಲ್ಲಿ ನೇಹಾ ಭಾಗಿಯಾಗಿದ್ದರು. ಅದೇ ರೀತಿ ನೇಹಾ ಸೀಮಂತಕ್ಕೆ ಕುಟುಂಬ ಸಮೇತ ಇಬ್ಬರೂ ಗೆಳತಿಯರು ಆಗಮಿಸಿದ್ರು. ಇವರ ಸ್ನೇಹ ಇಂದು ನಿನ್ನೆಯದಲ್ಲ 11 ವರ್ಷದ ಗೆಳತನ. ಹೀಗಾಗಿ ಯಾವುದೇ ಕಾರ್ಯಕ್ರಮ ನಡೆದ್ರು, ಎಲ್ಲರ ಕುಟುಂಬ ಜೊತೆಯಾಗಿತ್ತು.
ಸದ್ಯ ಸೀರಿಯಲ್ನಿಂದ ಗ್ಯಾಪ್ ತೆಗೆದುಕೊಂಡಿದ್ದಾರೆ. ಮಗಳ ಜೊತೆ ಕಾಲ ಕಳಿತಿದ್ದು, ತಾಯ್ತನದ ಪ್ರತಿ ಕ್ಷಣವನ್ನ ಆನಂದಿಸುತ್ತಿದ್ದಾರೆ. ನೇಹಾ ಹಾಗೂ ಮಗುನ ನೋಡೋಕೆ ತಮಿಳು ನಟಿ ನೇಹಾ ಗೆಳತಿ ಶ್ರುತಿ ಶಣ್ಮುಗ ಬಂದಿದ್ರು. ಸ್ನೇಹಿತೆಯರ ಸುಂದರ ಕ್ಷಣಗಳ ಜೊತೆಗೆ ಮಗಳ ತುಂಟಾಟ ವಿಡಿಯೋವನ್ನು ನಟಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಅಲ್ಲದೇ ನಟ ಚಂದನ್ ಗೌಡ ಕೂಡ ಮಗಳ ಜೊತೆಗೆ ಮುದ್ದು ಮುದ್ದಾಗಿ ಕಾಲ ಕಳೆಯುತ್ತಿದ್ದಾರೆ. ಒಟ್ಟಿನಲ್ಲಿ ಮಗಳು ಶಾರದ ಚಂದು-ನೇಹಾ ಕುಟುಂಬಕ್ಕೆ ಆನಂದದ ಕಡಲನ್ನೇ ಹೊತ್ತು ತಂದಿದ್ದಾಳೆ. ಸದ್ಯ ಇದೇ ವಿಡಿಯೋ ನೋಡಿದ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ