newsfirstkannada.com

ನೇಹಾ, ಚಂದು ಪ್ರೇಮ್ ಕಹಾನಿ ಶುರುವಾಗಿದ್ದೇಗೆ? ಲಕ್ಷ, ಲಕ್ಷ ಸಂಬಳದ ಕೆಲಸ ಬಿಟ್ಟು ಭಾರತದಲ್ಲೇ ಸೆಟ್ಲ್

Share :

Published June 1, 2024 at 12:26pm

Update June 1, 2024 at 12:27pm

  ರಾಜಾ ರಾಣಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡ ಜೋಡಿ

  ಬಾಲ್ಯದಲ್ಲಿ ಶುರುವಾದ ಸ್ನೇಹ ಹಾಗೂ ಪ್ರೀತಿಗೆ ಇದೀಗ 30 ವರ್ಷ

  ನೇಹಾ ಹಾಗೂ ಚಂದನ್​ ಕುಟುಂಬಸ್ಥರಲ್ಲಿ ಸಂಭ್ರಮದ ವಾತಾವರಣ

ಕಿರುತೆರೆಯ ಮುದ್ದಾದ ಜೋಡಿ ಅಂದ್ರೆ ಚಂದು-ನೇಹಾ. ಈ ಇಬ್ಬರ ಪ್ರೇಮ್​ ಕಹಾನಿನೇ ವಿಭಿನ್ನವಾಗಿದೆ. ಮಕ್ಕಳಿದ್ದಾಗ ಶುರುವಾದ ಮದುರವಾದ ಆ ಸ್ನೇಹ ಪ್ರೀತಿಯಾಗಿ ಆ ಪ್ರೀತಿ, ವಿಶ್ವಾಸ ದಾಂಪತ್ಯಕ್ಕೆ ಮುನ್ನುಡಿ ಬರೆಯಿತು. ಪ್ರೇಮ ಬರಹ ಅಂತಾ ಮತ್ತೊಂದು ಆವೃತ್ತಿ ಏನಾದ್ರೂ ಬಂದ್ರೆ ಅದು ಈ ಇಬ್ಬರ ಲವ್​​ ಸ್ಟೋರಿ ಹಾಕಬಹುದು ಅಷ್ಟು ಇಂಟ್ರೆಸ್ಟಿಂಗ್​ ಆಗಿದೆ.

ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟ ಗೊಂಬೆ.. ಸಂಭ್ರಮದಲ್ಲಿ ನೇಹಾ-ಚಂದನ್​.. ಅಭಿಮಾನಿಗಳಿಂದ ಶುಭ ಹಾರೈಕೆ

ಕನ್ನಡ ಕಿರುತೆರೆಯಲ್ಲಿ ಲಕ್ಷ್ಮಿ ಬಾರಮ್ಮ ಸೀರಿಯಲ್​​ ಮೂಲಕ ಫ್ಯಾನ್ಸ್​ಗಳಿಗೆ ಗೊಂಬೆ ಅಂತಲೇ ಪರಿಚಿತರಾಗಿರೋ ನಟಿ ನೇಹಾ ಗೌಡ ಕುಟುಂಬದಲ್ಲಿ ಸಂತಸ ಮನೆಮಾಡಿದೆ. ನೇಹಾ ಗೌಡ ಅವರು ಗೊಂಬೆ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದ್ದಾರೆ. ಇದೀಗ ಮದುವೆಯಾಗಿ 6 ವರ್ಷಗಳ ಬಳಿಕ ಈ ಸ್ಟಾರ್​ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ವಿಚಾರವನ್ನು ಸ್ಟಾರ್​ ದಂಪತಿ ಅಭಿಮಾನಿಗಳೊಟ್ಟಿಗೆ ಶೇರ್ ಮಾಡಿಕೊಂಡಿದ್ದಾರೆ.

ನಟಿ ನೇಹಾಗೆ 33 ವರ್ಷ. ಆದರೆ ಈ ಇಬ್ಬರ ಲವ್​ ಸ್ಟೋರಿಗೆ 30 ವರ್ಷ ಆಗಿದೆ. ಅಕ್ಕಪಕ್ಕದ ಮನೆಯಲ್ಲಿ ಅರಳಿದ ಪ್ರೀತಿ ಇದು. ಚಂದು-ನೇಹಾ ಬಾಲ್ಯ ಸ್ನೇಹಿತರು. ನರ್ಸರಿಯಿಂದಾನೂ ಒಟ್ಟಿಗೆ ಓದಿ ಆಡಿ ಬೆಳದ ಜೋಡಿ. ಇವರ ಲವ್​ ಸ್ಟೋರಿಗೆ ಫ್ರೆಬವರಿಗೆ 30 ವರ್ಷ ತುಂಬಿದೆ. ನೇಹಾ ಕಲಾವಿದೆ ಆಗಿದ್ದರಿಂದ ಫಾರಿನ್​ನಲ್ಲಿ ಲಕ್ಷ ಲಕ್ಷ ಸಂಬಳ ಇದ್ದ ಕೆಲಸವನ್ನ ಬಿಟ್ಟು ಪ್ರೀತಿಯ ಪತ್ನಿಗಾಗಿ ಭಾರತದಲ್ಲೇ ಸೆಟ್ಲ್​ ಆಗಿದ್ದು ಚಂದು ಗೌಡ.

ನೇಹಾ ಒತ್ತಾಯಕ್ಕೆ ರಾಜಾ ರಾಣಿ ಶೋ ಮಾಡಿದ್ರು. ಈ ಶೋ ಮೂಲಕ ಜನಪ್ರಿಯತೆ ಪಡೆದ ಜೋಡಿಗೆ ಟೈಟಲ್​ ಗೆಲ್ಲೋ ಅವಕಾಶ ಕೂಡ ಸಿಕ್ತು. ಇಲ್ಲಿಂದ ಚಂದನ್​ ಹೊಸ ಜರ್ನಿ ಶುರುವಾಯ್ತು. ಸದ್ಯ ಅಂತರಪಟ ಧಾರಾವಾಹಿಯಲ್ಲಿ ಚಂದು ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಅಭಿನಯದ ಬಗ್ಗೆ ಆಸಕ್ತಿಯಿಲ್ಲದ ಚಂದನ್​ ನೇಹಾ ಪ್ರೀತಿಗಾಗಿ ಕಷ್ಟನ ಇಷ್ಟಪಟ್ಟು ಸದ್ಯ ಕರ್ನಾಟಕದ ಕ್ರಶ್​ ಆಗಿದ್ದಾರೆ. ಕೊನೆಗೂ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್​ ಮಾಡಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇಹಾ, ಚಂದು ಪ್ರೇಮ್ ಕಹಾನಿ ಶುರುವಾಗಿದ್ದೇಗೆ? ಲಕ್ಷ, ಲಕ್ಷ ಸಂಬಳದ ಕೆಲಸ ಬಿಟ್ಟು ಭಾರತದಲ್ಲೇ ಸೆಟ್ಲ್

https://newsfirstlive.com/wp-content/uploads/2024/06/neha-gowda4.jpg

Load More