ಶಿಕ್ಷಕರ ಮಗ ಫಯಾಜ್; ನೇಹಾ ಹಿರೇಮಠ್​​ರನ್ನು​​ ಕೊಂದ ಆರೋಪಿ ಯಾರು?

author-image
Ganesh
Updated On
ಶಿಕ್ಷಕರ ಮಗ ಫಯಾಜ್; ನೇಹಾ ಹಿರೇಮಠ್​​ರನ್ನು​​ ಕೊಂದ ಆರೋಪಿ ಯಾರು?
Advertisment
  • ಆರೋಪಿ ಸ್ವಗ್ರಾಮ ಸಂಪೂರ್ಣ ಬಂದ್, ಆತಂಕದ ವಾತಾವರಣ
  • ವಿಷಯ ತಿಳಿಯುತ್ತಿದ್ದಂತೆಯೇ ಮನೆ ಖಾಲಿ ಮಾಡಿರುವ ಪೋಷಕರು
  • ಆರೋಪಿ ಮನೆಗೆ ಮುಂಜಾಗೃತ ಕ್ರಮವಾಗಿ ಪೊಲೀಸ್ ಭದ್ರತೆ

ಬೆಳಗಾವಿ: ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾ ಕೊಲೆ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಫಯಾಜ್​ನನ್ನು (23) ಬಂಧಿಸಿದ್ದಾರೆ.

ಫಯಾಜ್ ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿ. ಫಯಾಜ್ ತಂದೆ ಬಾಬಾ ಸಾಹೇಬ್, ತಾಯಿ ಮುಮತಾಜ್ ಇಬ್ಬರು ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಕಾಲೇಜಿನಲ್ಲಿ ಫೇಲ್ ಆಗಿದ್ದರಿಂದ ಫಯಾಜ್ ಆರು ತಿಂಗಳಿನಿಂದ ಮನೆಯಲ್ಲಿಯೇ ಇದ್ದ. ನಿನ್ನೆ ನೇಹಾ ಹಿರೇಮಠ್ ಅವರನ್ನು ಕೊಲೆ ಮಾಡುವುದಕ್ಕಾಗಿಯೇ ಹುಬ್ಬಳ್ಳಿಗೆ ಹೋಗಿದ್ದ ಎನ್ನಲಾಗುತ್ತಿದೆ. ಹತ್ಯೆಯಾದ ನೇಹಾ ತಂದೆ ಹಿರೇಮಠ್ ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಫಯಾಜ್ ಬಿಸಿಎನಲ್ಲಿ ನೇಹಾಗೆ ಹಳೆಯ ಸಹಪಾಠಿ ಎನ್ನಲಾಗಿದೆ.

ಇದನ್ನೂ ಓದಿ:ಇವರು ಆಡಿದ್ದು ಕೇವಲ ಎರಡು ಟಿ-20I ಪಂದ್ಯ ಮಾತ್ರ..! RCBಯಲ್ಲಿ ಕೊಹ್ಲಿ, ಮ್ಯಾಕ್ಸಿಗೆ ಏನ್ ಟಿಪ್ಸ್ ಕೊಟ್ಟಾರು..?

publive-image

ಮನೆಬಿಟ್ಟ ಆರೋಪಿ ಪೋಷಕರು
ಪ್ರಕರಣ ಬೆನ್ನಲ್ಲೇ ಆರೋಪಿ ಸ್ವಗ್ರಾಮ ಮುನವಳ್ಳಿಯಲ್ಲಿ ಆಕ್ರೋಶ ಭುಗಿಲ್ಲೆದ್ದಿದೆ. ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮವನ್ನು ಹಿಂದೂ ಪರ ಸಂಘಟನೆಗಳು ಬಂದ್ ಮಾಡಿವೆ. ಸವದತ್ತಿ ತಾಲೂಕಿನ ಮುನವಳ್ಳಿಯ ಆರೋಪಿ ಮನೆಗೆ ಪೋಲಿಸ್ ಭದ್ರತೆ ನೀಡಲಾಗಿದೆ. ಪಟ್ಟಣದ ಗಾಂಧಿನಗರ ಬಡಾವಣೆಯಲ್ಲಿ ಆರೋಪಿ ಮನೆ ಇದೆ. ಇತ್ತ ಆರೋಪಿಯ ಪೋಷಕರು ಮನೆ ಖಾಲಿ ಮಾಡಿದ್ದಾರೆ. ಮಾತ್ರವಲ್ಲ ಅಕ್ಕಪಕ್ಕದ ಮನೆಯವರೂ ಸಹ ತಾತ್ಕಾಲಿಕವಾಗಿ ಮನೆ ಖಾಲಿ ಮಾಡಿದ್ದಾರೆ.

ಇದನ್ನೂ ಓದಿ:ಮಂಡ್ಯದಲ್ಲಿ ಗಾಳಿ ಸಹಿತ ಭಾರೀ ಮಳೆ; ದೊಡ್ಡ ಅನಾಹುತದಿಂದ KSRTC ಬಸ್​ ಜಸ್ಟ್ ಮಿಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment