newsfirstkannada.com

ಮೂರು ತಿಂಗಳ ಹಿಂದೆ ಸ್ವಂತ ತಂದೆಯ ಮೇಲೆ ಹಲ್ಲೆ ನಡೆಸಿ ಠಾಣೆಗೆ ಹೋಗಿದ್ದ ಫಯಾಜ್..!

Share :

Published April 20, 2024 at 1:34pm

    ಫಯಾಜ್ ಸ್ವಂತ ಅಪ್ಪನ ಮೇಲೆ ಹಲ್ಲೆ ನಡೆಸಿದ್ದು ಯಾಕೆ?

    ಅಂದು ಪೊಲೀಸ್ ಠಾಣೆಯೊಳಗೆ ಏನೆಲ್ಲ ಘಟನೆ ನಡೆಯಿತು?

    ನೇಹಾ ಹತ್ಯೆಗೂ ಮೊದಲು ಮತ್ತೊಂದು ಕೃತ್ಯಕ್ಕೆ ಕೈಹಾಕಿದ್ದ ಫಯಾಜ್

ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಪ್ರಕರಣದ ಆರೋಪಿ ಫಯಾಜ್​ಗೆ ಸಂಬಂಧಿಸಿ ಮತ್ತೊಂದು ಭಯಾನಕ ಮಾಹಿತಿ ಲಭ್ಯವಾಗಿದೆ. ಮಾಹಿತಿ ಪ್ರಕಾರ, ನೇಹಾಳನ್ನು ಕೊಲೆ ಮಾಡುವುದಕ್ಕೂ ಮೊದಲು ಆಸ್ತಿ ವಿಚಾರಕ್ಕೆ ತಂದೆಯನ್ನೇ ಕೊಲೆ ಮಾಡಲು ಹೋಗಿದ್ದನಂತೆ.

ಏನಿದು ಪ್ರಕರಣ..?
ಫಯಾಜ್ ಆಸ್ತಿ ವಿಚಾರಕ್ಕೆ ತಂದೆಯ ಮೇಲೆಯೇ ಹಲ್ಲೆ ಮಾಡಿದ್ದ. ಮಗನ ಕೃತ್ಯದಿಂದ ಸವದತ್ತಿ ಪೊಲೀಸ್ ಠಾಣೆಗೆ ಬಂದು ಫಯಾಜ್ ತಂದೆ ಬಾಬಾ ಸಾಹೇಬ ದೂರು ನೀಡಿದ್ದರು. ಮಗನಿಂದ ನನಗೆ ರಕ್ಷಣೆ ಕೊಡಿಸಿ ಅಂತಾ ಠಾಣೆ ಮೆಟ್ಟಿಲೇರಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ಸೂರ್ಯ vs ಎಬಿಡಿ..!! ಇವರ ಕೆಲ ಶಾಟ್ಸ್​ಗೆ ಕ್ರಿಕೆಟ್​ ಬುಕ್​ನಲ್ಲೂ ಇಲ್ಲ ನೇಮ್..!

ಈ ವೇಳೆ ಫಯಾಜ್​ರನ್ನು ಕರೆಸಿಕೊಂಡು ಪೊಲೀಸರು ಬುದ್ಧಿ ಹೇಳಿದ್ದರು. ಮೂರು ತಿಂಗಳ ಹಿಂದೆ ಬುದ್ದಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಪೊಲೀಸ್ ಅಧಿಕಾರಿಗಳು ಕಳುಹಿಸಿದ್ದರು. ಮತ್ತೆನಾದ್ರೂ ತಂದೆ ಮೇಲೆ ಹಲ್ಲೆ ಮಾಡಿದ್ರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದರು. ತಂದೆ-ತಾಯಿ ಜಗಳದ ನಡುವೆ ತಾಯಿ ಪರವಾಗಿ ನಿಂತು ಫಯಾಜ್ ಜಗಳವಾಡಿದ್ದ. ಗಂಡ-ಹೆಂಡತಿ,ಮಕ್ಕಳು ಜಗಳವಾಡಬೇಡಿ ಎಂದು ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದರು. ಅಂದ್ಹಾಗೆ ನೇಹಾ ಹಿರೇಮಠ್ ಕೊಲೆಗೆಗೈ ಆರೋಪಿ ಬೆಳಗಾವಿ ಮೂಲದವ. ಮುನವಳ್ಳಿಯಲ್ಲಿ ಫಯಾಜ್ ತಂದೆ, ತಾಯಿ ವಾಸವಿದ್ದಾರೆ. ಇಬ್ಬರು ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ.

ಇದನ್ನೂ ಓದಿ: ನೇಹಾ ಹಿರೇಮಠ್ ಕೊಲೆ ಕೇಸ್; ರಾಜ್ಯದ ಕ್ಷಮೆ ಕೇಳಿ ಗಳಗಳನೇ ಕಣ್ಣೀರಿಟ್ಟ ಆರೋಪಿ ಫಯಾಜ್ ತಾಯಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೂರು ತಿಂಗಳ ಹಿಂದೆ ಸ್ವಂತ ತಂದೆಯ ಮೇಲೆ ಹಲ್ಲೆ ನಡೆಸಿ ಠಾಣೆಗೆ ಹೋಗಿದ್ದ ಫಯಾಜ್..!

https://newsfirstlive.com/wp-content/uploads/2024/04/NEHA-CASE.jpg

Load More