Advertisment

ನೇಹಾ ಹಿರೇಮಠ ಪ್ರಕರಣ; ಆರೋಪಿ ಫಯಾಜ್​ ವಿಚಾರದಲ್ಲಿ CID ಇಂದು ಮಹತ್ವದ ನಿರ್ಧಾರ

author-image
Ganesh
Updated On
ನೇಹಾ ಹಿರೇಮಠ ಪ್ರಕರಣ; ಆರೋಪಿ ಫಯಾಜ್​ ವಿಚಾರದಲ್ಲಿ CID ಇಂದು ಮಹತ್ವದ ನಿರ್ಧಾರ
Advertisment
  • ನೇಹಾ ಹಿರೇಮಠ್​ ಹತ್ಯೆ ಕೇಸ್​ನಲ್ಲಿ ಸಿಐಡಿ ತನಿಖೆ ಚುರುಕು
  • ನೇಹಾ ಹತ್ಯೆಗೆ ಖಂಡನೆ, ರಾಜ್ಯಾದ್ಯಂತ ನಿಲ್ಲದ ಪ್ರತಿಭಟನೆ
  • ಬೆಂಗಳೂರಿನಲ್ಲಿ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಪ್ರತಿಭಟನೆ

ನೇಹಾ ಹತ್ಯೆ ಪ್ರಕರಣ ಎಲ್ಲೆಡೆ ಭಾರೀ ಸಂಚಲನ ಮೂಡಿದೆ. ಈ ಬೆನ್ನಲ್ಲೇ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರೋ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

Advertisment

ನೇಹಾ ಹಿರೇಮಠ್​ ಹತ್ಯೆ ಕೇಸ್​ನಲ್ಲಿ ಸಿಐಡಿ ತನಿಖೆ ಚುರುಕು
ಹುಬ್ಬಳ್ಳಿ ನೇಹಾ ಹಿರೇಮಠ್​ ಹತ್ಯೆ ಖಂಡಿಸಿ, ಇಡೀ ರಾಜ್ಯಾಧ್ಯಂತ ಆಕ್ರೋಶ ಹೆಚ್ಚಾಗ್ತಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ನೇಹಾ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ಮೊನ್ನೆ ರಾತ್ರಿಯೇ ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ಎಸ್ಪಿ ವೆಂಕಟೇಶ್​ ನೇತ್ರತ್ವದ ತಂಡ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

ಇದನ್ನೂ ಓದಿ: ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಬಹಿರಂಗ ಮತಯಾಚನೆಗೆ ತೆರೆ, ಸ್ಪರ್ಧಾ ಕಣದಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆ ಗೊತ್ತಾ?

publive-image

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಥಳೀಯ ಪೊಲೀಸರಿಂದ ಸಿಐಡಿ ಅಧಿಕಾರಿಗಳ ತಂಡ ದಾಖಲೆಗಳನ್ನು ಪಡೆದುಕೊಂಡಿದೆ. ಇವತ್ತು ಆರೋಪಿ ಫಯಾಜ್​ನನ್ನು ಕೋರ್ಟ್​ ಮುಂದೆ ಹಾಜರು ಪಡಿಸಿ, ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ. ವಶಕ್ಕೆ ಪಡೆದ ಬಳಿಕ ಆರೋಪಿಯನ್ನು ಸ್ಥಳ ಮಹಜರಿಗೆ ಸಿಐಡಿ ಅಧಿಕಾರಿಗಳು ಕರೆದೊಯ್ಯುವ ಸಾಧ್ಯತೆ ಇದೆ.

Advertisment

ನೇಹಾ ಹತ್ಯೆಗೆ ಖಂಡನೆ, ರಾಜ್ಯಾದ್ಯಂತ ನಿಲ್ಲದ ಪ್ರತಿಭಟನೆ
ರಾಜ್ಯಾದ್ಯಂತ ನೇಹಾ ಹಿರೇಮಠ್​ ಹತ್ಯೆ ಖಂಡಿಸಿ ಪ್ರತಿಭಟನಾ ಱಲಿ ಮಾಡುತ್ತಿದ್ದಾರೆ. ಕಳೆದ ರಾತ್ರಿ ಎಬಿವಿಪಿ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಸಲಾಗಿದೆ. ನೇಹಾ ಕೊಲೆ ನಡೆದ ಬಿವಿಬಿ ಕಾಲೇಜಿನಿಂದ ಆರಂಭಗೊಂಡ ಪಂಜಿನ ಮೆರವಣಿಗೆ ಕಿಮ್ಸ್ ಆಸ್ಪತ್ರೆವರೆಗೂ ಸಾಗಿತು. ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದರು.. ನೇಹಾಳ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು ಅಂತ ಆಗ್ರಹಿಸಿದ್ದಾರೆ. ಹಾಗೂ ನೇಹಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ರು.

ಇದನ್ನೂ ಓದಿ:ದೇಶಕ್ಕಾಗಿ ನನ್ನ ತಾಯಿಯ ಮಂಗಲಸೂತ್ರ ಬಲಿದಾನ -ಮೋದಿ ಹೇಳಿಕೆ ಖಂಡಿಸಿ ಪ್ರಿಯಾಂಕ ಗಾಂಧಿ ಎಮೋಷನಲ್

Advertisment

ಬೆಂಗಳೂರಿನಲ್ಲಿ ಶೋಭಾ ಕರಂದ್ಲಾಜೆ ಪ್ರತಿಭಟನೆ
ನೇಹಾ ಹತ್ಯೆ ಖಂಡಿಸಿ, ಬೆಂಗಳೂರಿನಲ್ಲೂ ಮೆಣದಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಯ್ತು. ಕೇಂದ್ರಸಚಿವ ಶೋಭಾ ಕರಂದ್ಲಾಹೆ ಸಮ್ಮುಖದಲ್ಲಿ ನೂರಾರು ಜನರು ಮೇಣದ ಬತ್ತಿ ಬೆಳಗುವ ಮೂಲಕ ನೇಹಾ ಹತ್ಯೆಯ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ರು. ಈ ವೇಳೆ ಮಾತನಾಡಿದ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಒಟ್ಟಾರೆ. ನೇಹಾ ಹತ್ಯೆ ಪ್ರಕರಣ ಇಡೀ ರಾಜ್ಯಾಧ್ಯಂತ ಆಕ್ರೋಶದ ಜ್ವಾಲೆಯನ್ನು ಎಬ್ಬಿಸಿದೆ. ಒಂದೆಡೆ ಪ್ರತಿಭಟನೆ ತೀವ್ರಗೊಂಡಿದ್ರೆ, ಮತ್ತೊಂದೆಡೆ ಸಿಐಡಿ ತಂಡ ತನಿಖೆಯನ್ನು ಚುರುಕುಗೊಳಿಸಿದೆ.

ಇದನ್ನೂ ಓದಿ:ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕದ ಎಚ್ಚರಿಕೆ; ಎಬೋಲಾ ವೈರಸ್​ನ ಮೂಲ ‘ಕಿಟಮ್ ಗುಹೆ’ಯಿಂದ ಭಯಾನಕ ಸುದ್ದಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment