newsfirstkannada.com

ಪ್ರೀತ್ಸೆ ಅಂತ ಕುತ್ತಿಗೆಗೆ ಚಾಕು ಇರಿದ ಫಯಾಜ್‌ ಪೊಲೀಸರಿಗೆ ಹೇಳಿದ್ದೇನು? ನೇಹಾ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್!

Share :

Published April 19, 2024 at 9:57pm

Update April 19, 2024 at 10:34pm

    ಯಾರೇ ತಪ್ಪು ಮಾಡಿದ್ರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ- ಡಿಕೆ ಶಿವಕುಮಾರ್

    ಆರೋಪಿ ಫಯಾಜ್​ನನ್ನ ಕೋರ್ಟ್​ಗೆ ಹಾಜರುಪಡಿಸಿದ ಪೊಲೀಸ್ ಅಧಿಕಾರಿಗಳು

    ನೇಹಾ ಹತ್ಯೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ ಮಾತಿಗೆ ಎಲ್ಲೆಡೆ ಆಕ್ರೋಶ

ಒಂದು ಕಡೆ ನೇಹಾ ಹತ್ಯೆ ಹುಬ್ಬಳಿಯಲ್ಲಿ ಕಿಚ್ಚು ಹೊತ್ತಿಸಿದ್ರೆ. ಇನ್ನೊಂದೆಡೆ ರಾಜಕೀಯ ಕೆಸರೆರಾಚಾಟಕ್ಕೂ ಕಾರಣವಾಗಿದೆ. ನೇಹಾ ಹತ್ಯೆ ಬಗ್ಗೆ ಗೃಹ ಸಚಿವರು ಆಡಿದ ಮಾತುಗಳಿಗೆ ನೇಹಾ ತಂದೆ ಕುಟುಕಿದ್ದಾರೆ. ರಕ್ಕಸನ ರಕ್ತದೋಕುಳಿಗೆ ಅಮಾಯಕ ಹೆಣ್ಣು ಮಗಳೊಬ್ಬಳ ಪ್ರಾಣ ಹೋಗಿದೆ.

ಇಂತಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ!

ಹೌದು, ನೇಹಾ ಹತ್ಯೆ ವಿಚಾರದ ಬಗ್ಗೆ ಮಾತನಾಡಿರೋ ಗೃಹ ಸಚಿವ ಜಿ. ಪರಮೇಶ್ವರ ಇಂಥಾದೊಂದು ಹೇಳಿಕೆಯನ್ನ ನೀಡಿದ್ದಾರೆ. ಹುಬ್ಬಳಿಯಲ್ಲಿ ನಡೆದಿರೋ ಘಟನೆ ಇಬ್ಬರ ನಡುವೆ ಪರಸ್ಪರ ಪ್ರೀತಿ ಉಂಟಾಗಿ ನಡೆದಿದೆ, ಯಾವಾಗ ಆ ಹೆಣ್ಣು‌ಮಗಳು ದೂರ ಹೋಗಲು ಶುರು ಮಾಡಿದ್ದಳೋ ಆ ಹುಡುಗ ಹೋಗಿ ಚುಚ್ಚಿದ್ದಾನೆ. ಇಂಥಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ ಎಂದಿದ್ರು.

23 ವರ್ಷದ ನೇಹಾ ಹಿರೇಮಠ್ ತನ್ನನ್ನು ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಲು ನಿರಾಕರಿಸಿದ ನಂತರ, ಆರೋಪಿ ಫಯಾಜ್ ಚಾಕುವಿನಿಂದ ಅನೇಕ ಬಾರಿ ಇರಿದು ಆಕೆಯನ್ನು ಹತ್ಯೆ ಮಾಡಿದ್ದಾನೆ. ಇಂತಹ ಘಟನೆಗಳು ಆಕಸ್ಮಿಕವಾಗಿ ಸಂಭವಿಸುತ್ತವೆ. ತಾನು ಪ್ರೀತಿಸುತ್ತಿದ್ದ ಹುಡುಗಿ ಬೇರೆಯವರನ್ನು ಮದುವೆಯಾಗುತ್ತಾಳೆ ಎಂಬ ಕೋಪದ ಭರದಲ್ಲಿ ಯುವಕ ಆಕೆಯನ್ನು ಕೊಂದಿದ್ದಾನೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

– ಗೃಹ ಸಚಿವ ಜಿ. ಪರಮೇಶ್ವರ

ಗೃಹ ಸಚಿವರ ಹೇಳಿಕೆಗೆ ನೇಹಾ ತಂದೆ ಸಿಡಿಮಿಡಿ!

ಗೃಹ ಸಚಿವರ ಡಾ. ಜಿ ಪರಮೇಶ್ವರ್ ಹೇಳಿಕೆ ಬಗ್ಗೆ ಹತ್ಯೆಯಾಗಿರೋ ನೇಹಾ ತಂದೆ ನಿರಂಜನ್ ಹಿರೇಮಠ ಕೆಂಡ ಕಾರಿದ್ದಾರೆ. ಆರೋಪಿ ಇಷ್ಟ ಪಟ್ಟರೆ ಅದು ಒನ್ ಸೈಡ್ ಲವ್ ಆಗುತ್ತೆ. ನನ್ನ ಮಗಳು ಇಷ್ಟ ಪಟ್ಟಿದ್ರೆ ಆಕೆ ಯಾಕೆ ಸಾಯುತ್ತಿದ್ದಳು? ಅಂತ ಪ್ರಶ್ನೆ ಮಾಡಿದ್ದಾರೆ. ಜವಬ್ದಾರಿಯುತ ಸ್ಥಾನದಲ್ಲಿರೋರೆ ಈ ರೀತಿ ಹೇಳಿಕೆ ಕೊಟ್ಟರೆ ಎಲ್ಲಿ ಹೋಗಿ ಸಾಯೋದು. ನಾನು ಒಬ್ಬ ಕಾಂಗ್ರೆಸ್ ಕಾರ್ಪೊರೇಟರ್, ನನ್ನ ಪರಿಸ್ಥಿತಿಯೇ ಹೀಗಾದ್ರೆ ಜನ ಸಾಮನ್ಯರ ಪರಿಸ್ಥತಿ ಹೇಗೆ? ಪ್ರೀತಿ ನಿರಾಕರಿಸಿದ್ದಕ್ಕೆ ಆ ಪಾಪಿ ನನ್ನ ಮಗಳ ಪ್ರಾಣ ಬಲಿ ಪಡೆದಿದ್ದಾನೆ ಅಂತ ಆಕ್ರೋಶ ಹೊರ ಹಾಕಿದ್ದಾರೆ.

ನಮ್ಮ ಮನೆತನಕ್ಕೆ ಅವಮಾನ ಮಾಡಬೇಡಿ ಎಂದಿರೋ ನಿರಂಜನ್ ಹಿರೇಮಠ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರು ಇದನ್ನಲ್ಲ ನೋಡುತ್ತಿದ್ದಾರೆ. ಪ್ಲಾನ್ ಮಾಡಿಯೇ ನನ್ನ ಮಗಳನ್ನ ಹತ್ಯೆ ಮಾಡಿದ್ದಾರೆ. ಇದ್ಯಾವ ಆಕಸ್ಮಿಕ್ ಘಟನೆ ಅಂತ ಕಿಡಿ ಕಾರಿದ್ದಾರೆ. ಇನ್ನು, ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಇದೆಲ್ಲದರ ಮಧ್ಯೆ ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ನೇಹಾ ಹತ್ಯೆ ಸಂಬಂಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಾತನಾಡಿರುವ ಕಮಿಷನರ್​ ರೇಣುಕಾ ಸುಕುಮಾರ್​, ಕಾನೂನು ಪ್ರಕಾರ ಯಾವ ಶಿಕ್ಷೆ ಆಗಬೇಕು ಅದು ಆಗುತ್ತೆ ಈಗಾಗಲೇ ತನಿಖೆ ನಡೆಸುತ್ತಿದೆ. ಆರೋಪಿ ಫಯಾಜ್​ ಇಬ್ಬರು ಲವ್ ಮಾಡ್ತಿದ್ವಿ ಅಂತ ಹೇಳಿಕೆ ನೀಡಿದ್ದಾನೆ ಎಂದಿದ್ದಾರೆ.

ಸದ್ಯ ಆರೋಪಿ ಫಯಾಜ್​ನನ್ನ ಕೋರ್ಟ್​ಗೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಹತ್ಯೆ ಆರೋಪಿ ಫಯಾಜ್​ನನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹುಬ್ಬಳ್ಳಿ ಘಟನೆ ಸಂಬಂಧ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ಪೋಲಿಸ್ ಆಯುಕ್ತರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿರೋ ಸಿಎಂ, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳೋದಕ್ಕೆ ತಾಕೀತು ಮಾಡಿದ್ದಾರೆ.

ಉಪ ಮುಖ್ಯಂತ್ರಿ ಡಿಕೆ ಶಿವಕುಮಾರ್ ಕೂಡ ಮಾತನಾಡಿ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರೇ ತಪ್ಪು ಮಾಡಿದ್ರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಮತ್ತೊಂದೆಡೆ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ನೇಹಾ ಅಂತಿಮ ಸಂಸ್ಕಾರ ನೇರವೇರಿಸಲಾಗಿದೆ. ವೀರಶೈವ ಲಿಂಗಾಯತ ಪದ್ಧತಿಯಂತೆ ಅಂತಿಮ ವಿಧಿವಿಧಾನ ನೇರವೇರಿಸಿದ್ದು, ಬಾಳಬೇಕಾಗಿದ್ದ ಸುಂದರ ಹೂವೊಂದು ಅರಳುವ ಮುನ್ನವೇ ಮಣ್ಣಲಿ ಮಣ್ಣಾಗಿ ಹೋಗಿದ್ದು ನಿಜಕ್ಕೂ ದುರಂತವೇ ಸರಿ. ಒಟ್ಟಿನಲ್ಲಿ ಪರಮ ಪಾಪಿಯ ಸ್ವಾರ್ಥಕ್ಕೆ, ದುಷ್ಟನ ಹೇಯ ಕೃತ್ಯದಿಂದ ಇಂದು ಅಮಾಯಕ ಹೆಣ್ಣು ಮಗಳೊಬ್ಬಳು ಅತ್ಯಂತ ಭೀಕರವಾಗಿ ಕೊಲೆಯಾಗಿ ಹೋಗಿದ್ದಾಳೆ. ಮಗಳನ್ನ ಕಳೆದುಕೊಂಡು ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗಿದೆ. ಆದ್ರೆ ಅತ್ಯಾಚಾರ ಅನಾಚಾರ ಕೊಲೆ ಮೋಸ ವಂಚನೆಗಳಿಗೆಲ್ಲಾ ಹೆಣ್ಣೆ ಬಲಿಯಾಗಬೇಕೆ? ಈ ದೌರ್ಜನ್ಯಕ್ಕೆ ಕೊನೆ ಎಂಬುದು ಇಲ್ವಾ? ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತ್ಸೆ ಅಂತ ಕುತ್ತಿಗೆಗೆ ಚಾಕು ಇರಿದ ಫಯಾಜ್‌ ಪೊಲೀಸರಿಗೆ ಹೇಳಿದ್ದೇನು? ನೇಹಾ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್!

https://newsfirstlive.com/wp-content/uploads/2024/04/death-case2.jpg

Load More