newsfirstkannada.com

ಮಗಳು ಹೊಲಸು ಕೆಲಸ ಮಾಡಲ್ಲ- ಫಯಾಜ್ ತಾಯಿ ಪ್ರೀತಿ ಪ್ರೇಮ ಹೇಳಿಕೆಗೆ ನೇಹಾ ಅಮ್ಮ ಹೇಳಿದ್ದೇನು..?

Share :

Published April 20, 2024 at 1:33pm

Update April 20, 2024 at 1:36pm

  ಮಗಳಿಗೆ ಶಾಂತಿ ಸಿಗಬೇಕು ಅಂದ್ರೆ ಅವನು ಬದುಕಬಾರದು

  ನನ್ನ ಕಣ್ಣ ಮುಂದೆ ಕೊಲೆ ನಡೆದಿದೆ. ಹತ್ತು ಹೆಜ್ಜೆ ನಾನು ದೂರ ಇದ್ದೆ

  ಕಲಿಯೋಕೆ ಕಳಸಿದ್ರೆ ಹೆಣ ಆಗಿ ಬರ್ತಾರೆ ಎಂದ ನೇಹಾ ತಾಯಿ ಗೀತಾ

ಹುಬ್ಬಳ್ಳಿಯಲ್ಲಿ ಸ್ನೇಹಿತ ಫಯಾಜ್​ನಿಂದ ಕೊಲೆಯಾದ ಮಗಳು ನೇಹಾ ಹಿರೇಮಠ್​ ಬಗ್ಗೆ ಆಕೆಯ ತಾಯಿ ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ್ದಾರೆ. ‘ನನ್ನ ಮಗಳು ಹೊಲಸು ಕೆಲಸ ಮಾಡಲ್ಲ. ಬೆನ್ನು ಬಿದ್ದಿದ್ದಾನೆ ಎಂದು ಹೇಳಿದ್ರು. ಕ್ಷಮೆ ತಗೊಂಡು ಏನು ಮಾಡಲಿ’ ಎಂದ ನೇಹಾ ತಾಯಿ ಗೀತಾ ಹೇಳಿದ್ದಾರೆ.

ಫಯಾಜ್​ ತಾಯಿ ಮುಮ್ತಾಜ್​, ಅವರು ಕಾಲೇಜಿನಲ್ಲಿ ಭೇಟಿಯಾಗ್ತಾ ಇದ್ರು. ಆದರೆ ಈತ ರೂಂ ಮಾಡಿ ಕೂಡ ಇದ್ದ. ಅಲ್ಲಿ ಹೋಗ್ತಾ ಇದ್ರಾ ಗೊತ್ತಿಲ್ಲ. ಒಂದೇ ಕ್ಯಾಂಪಸ್​ ಅವ್ರು. ಭೇಟಿ ಮಾಡ್ತಾ ಇದ್ರು, ಮಾತಾಡ್ತಾ ಇದ್ರು. ಮದುವೆ ಆಗೋಕು ರೆಡಿ ಇದ್ರು ಎಂದು ಹೇಳಿದ್ದರು. ಇದಕ್ಕೆ ಮಾಧ್ಯಮ ಮೂಲಕ ನೇಹಾ ತಾಯಿ ಪ್ರತಿಕ್ರಿಯಿಸಿದ್ದಾರೆ.

ಮದುವೆ ಬಗ್ಗೆ ಮಾತಾಡಿಲ್ಲ

‘ಮಗಳು ಕಾಲೇಜ್ ಹೋಗುತ್ತಿದ್ಲು ಬೋಲ್ಡ್ ಆಗಿದ್ಲು, ನಮ್ಮ ಮಗಳು ಅಂತವಳು ಅಲ್ಲ. ಮದುವೆ ಬಗ್ಗೆ ಮಾತಾಡಿಲ್ಲ. ಒಂದೇ ಕಾಲೇಜ್ ನಲ್ಲಿ ಓದುತಿದ್ರು’ ಎಂದು ನೇಹಾ ತಾಯಿ ಹೇಳಿದ್ದಾರೆ.

ಬಳಿಕ ‘ಫೊಟೋ ಹೇಗೆ ಬೇಕೆ ಹಾಗೆ ಎಡಿಟ್ ಮಾಡ್ತಾರೆ. ಅವಳ ಚೆನ್ನಾಗಿ ಸ್ಟಡಿ ಮಾಡುತ್ತಿದ್ದಳು. ಮಗಳಿಗೆ ಶಾಂತಿ ಸಿಗಬೇಕು ಅಂದ್ರೆ ಅವನು ಬದುಕಬಾರದು. ಅವನನ್ನ ಜನರ ಕೈಗೆ ಕೊಡಿ’ ಎಂದು ನೇಹಾ ತಾಯಿ ಹೇಳಿದ್ದಾರೆ.

ಇದನ್ನೂ ಓದಿ: ನೇಹಾ ಕೊಲೆಗೆ ನಟ ರಚಿತಾ ರಾಮ್​ ಗರಂ.. ಆರೋಪಿಯನ್ನ ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ಡಿಂಪಲ್​ ಕ್ವೀನ್​

‘ಕಾಲೇಜ್ ಗೆ ಮೂರು ಗೇಟ್ ಇದೆ. ಯಾರಾದರೂ ಬರ್ತಾರೆ ಹೋಗುತ್ತಾರೆ. ಘಟನೆ ನನ್ನ ಕಣ್ಣ ಮುಂದೆ ನಡೆದಿದೆ. ಹತ್ತು ಹೆಜ್ಜೆ ನಾನು ದೂರ ಇದ್ದೆ, ಕಲಿಯೋಕೆ ಕಳಸಿದ್ರೆ ಹೆಣ ಆಗಿ ಬರ್ತಾರೆ ಅಂದ್ರೆ ಹೇಗೆ. ಹೆಣ್ಣು ಮಕ್ಕಳಿಗೆ ಸೇಪ್ಟಿ ಇಲ್ಲ’ ಎಂದು ಹೇಳುತ್ತಾ ನೇಹಾ ತಾಯಿ ಗೀತಾ ಕಣ್ಣೀರು ಸುರಿಸಿದ್ದಾರೆ.

ಫಯಾಜ್​ ತಾಯಿ ಏನಂದ್ರು?

ಫಯಾಜ್​ ತಾಯಿ ಮಮ್ತಾಜ್​, ​‘ಸಾಕಷ್ಟು ಕ್ರೂರವಾಗಿ ನೇಹಾಳನ್ನು ಕೊಂದಿದ್ದಾನೆ. ಆ ಮಗುಗೆ (ನೇಹಾ) ಪಾಪ ಇಂಥ ಅನ್ಯಾಯ ಆಗಬಾರದಿತ್ತು. ಆಗಿದೆ. ಕೆಟ್ಟ ಘಳಿಗೆ ಆ ಮಗು ಎಷ್ಟೊಂದು ವಿಲವಿಲವಾಗಿ ಒದ್ದಾಡಿತೊ.. ಆ ಮಗು ಪ್ರಾಣ ಬಿಡುವಾಗ ಎಷ್ಟು ಕಷ್ಟ ಆಗಿರುತ್ತೋ.. ನನಗೆ ಅದನ್ನು ಟಿವಿಯಲ್ಲಿ ನೋಡಿ ಅಲ್ಲೇ ಕುಸಿದು ಬಿದ್ದೆ. ಪಕ್ಕದ ಮನೆಯವರು ನನಗೆ ನೀರು ಕೊಟ್ಟು ಎಬ್ಬಿಸಿದರು. ಅವನು ಮಾಡೊರೋದು ತಪ್ಪು’ ಎಂದು ಹೇಳಿದ್ದಾರೆ.

ಬಳಿಕ ಮಾತು ಮುಂದುವರೆಸಿದ ಅವರು, ‘ಮನೆಯಿಂದ ಹೋಗಿ 5 ದಿನ ಆಗಿತ್ತು. 13ನೇ ತಾರೀಖಿಗೆ ಹೋಗಿದ್ದಾನೆ. ಏನಾದ್ರು ಕೆಲಸ ಹುಡುಕಿಕೊಂಡು ಹೋಗುತ್ತೇನೆ. ಮನೆಯಲ್ಲಿ ಕುಳಿತು ಬೇಜಾರಾಗಿದ್ದೇನೆ ಎಂದು ಹೋದವನನ್ನು ಟಿವಿಯಲ್ಲಿ ನೋಡಿ ಗಾಬರಿಯಾಗಿಬಿಟ್ಟಿದ್ದೇನೆ. ನನ್ನ ಮಗ ಇಂತಹ ಕೃತ್ಯವೆಸಗಿದನಾ ನಾವು ಬೇರೆಯವರ ಮಕ್ಕಳನ್ನು ಟಿವಿಯಲ್ಲಿ ನೋಡುತ್ತೇವೆ. ನನ್ನ ಮಗ ಟಿವಿಯಲ್ಲಿ ಬರೋವಂತೆ ತಲೆ ತಗ್ಗಿಸೋ ಕೆಲಸ ಮಾಡಿಬಿಟ್ಟನಲ್ಲ ನನ್ನ ಮಗ ಎಂದು ನನಗೆ ತುಂಬಾ ನೋವಾಯ್ತು’ ಎಂದು ಹೇಳಿದ್ದಾರೆ.

ಅವರು ಒಳ್ಳೆಯ ಫ್ರೆಂಡ್ಸ್​ ಆಗಿದ್ದರು. ನೇಹಾ ಕೂಡ ಅಷ್ಟೇ ಒಳ್ಳೆಯ ಹುಡುಗಿ. ಒಳ್ಳೆಯ ಫ್ರೆಂಡ್​​ಶಿಪ್​ ಇತ್ತು. ನಾನು ಹೇಳಿದೆ. ನೋಡ್ರಪ್ಪಾ ಫ್ರೆಂಡ್ಲಿಯಾಗಿ ಇರಿ. ಫ್ರೆಂಡ್​ಶಿಪ್​ ಇಟ್ಕೊಳ್ಳಿ. ಯಾವುದಕ್ಕೂ ದುಡುಕೋಕೆ ಹೋಗಬೇಡ. ಅವಳು ಜಾಣೆ ಇದ್ದಾಳೆ, ನೀನು ಜಾಣೆ ಇದ್ದೀಯಾ. ಇಬ್ರೂ ಐಎಎಸ್​​ ಮಾಡಿ ಎಂದು ಹೇಳಿದ್ದೆ.

ಕರ್ನಾಟಕ ಈ ಘಟನೆಯನ್ನ ಖಂಡಿಸ್ತಾ ಇದೆ. ನನ್ನ ಮಗ ಮಾಡಿರೋದು ಬಹಳ ದೊಡ್ಡ ಅಪರಾಧ. ಉಪ್ಪು ತಿಂದವ್ನು ನೀರು ಕುಡಿಯಲೇ ಬೇಕು. ಅವನು ತಪ್ಪು ಮಾಡಿದ್ದಾನೆ. ಈ ನೆಲ ಕಾನೂನು ಏನು ಕ್ರಮ ಕೊಡುತ್ತೋ ಆ ಶಿಕ್ಷೆ ಕೊಡಲಿ. ಆ ಶಿಕ್ಷೆಯನ್ನ ಅವನು ಅನುಭವಿಸಲಿ ಎಂದು ಫಯಾಜ್​ ತಾಯಿ ಮಮ್ತಾಜ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗಳು ಹೊಲಸು ಕೆಲಸ ಮಾಡಲ್ಲ- ಫಯಾಜ್ ತಾಯಿ ಪ್ರೀತಿ ಪ್ರೇಮ ಹೇಳಿಕೆಗೆ ನೇಹಾ ಅಮ್ಮ ಹೇಳಿದ್ದೇನು..?

https://newsfirstlive.com/wp-content/uploads/2024/04/WhatsApp-Image-2024-04-20-at-1.19.12-PM.jpeg

Load More