/newsfirstlive-kannada/media/post_attachments/wp-content/uploads/2025/07/NEHA-RAO-2.jpg)
ಬೆಂಗಳೂರಿನ ಯುವತಿಯೊಬ್ಬಳು ಒಡಿಶಾದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ನೇಹಾ ರಾವ್ (23) ಒಡಿಶಾದಲ್ಲಿ ಜೀವ ಕಳೆದುಕೊಂಡ ಹೆಣ್ಮಗಳು.
ಇದನ್ನೂ ಓದಿ: ಬೆಂಗಳೂರಲ್ಲಿ ಕೇವಲ ನಿದ್ದೆ ಮಾಡಿಯೇ 9 ಲಕ್ಷ ರೂಪಾಯಿ ಗೆದ್ದ ಮಹಿಳಾ IPS ಆಕಾಂಕ್ಷಿ.. ಹೇಗೆ?
ನೇಹಾ ಕುಟುಂಬವು ಬೆಂಗಳೂರಿನ ಕಮಲಾ ನಗರದಲ್ಲಿ ವಾಸವಿದೆ. ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳಾಗಿದ್ದ ನೇಹಾ ರಾವ್, ಒಡಿಶಾದ ಜಿಂದಾಲ್ ಸ್ಟೀಲ್ ಅಂಡ್ ಪವರ್ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದಳು. ಕಳೆದ ಸೋಮವಾರ ಬೆಳಗ್ಗೆ ಅಮ್ಮನಿಗೆ ‘ಗುಡ್​ ಮಾರ್ನಿಂಗ್ ಅಮ್ಮ’ ಎಂದು ಮೆಸೇಜ್ ಮಾಡಿದ್ದಳು. ಸಂಜೆ ವೇಳೆಗೆ ನಿಧನರಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಮೃತದೇಹ ಕೊಳೆಯಲು ಶುರುವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ದೇಹವನ್ನು ಬೆಂಗಳೂರಿಗೆ ತರಲು ನಿರ್ಧರಿಸಿಲ್ಲ. ಒಡಿಶಾದ ಪುರಿಯಲ್ಲಿ ಮಗಳ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದಾರೆ. ಕೇವಲ 23 ವರ್ಷಕ್ಕೆ ಜೀವಬಿಟ್ಟ ನೇಹಾ ಪ್ರಕರಣದ ಬಗ್ಗೆ ಹಲವು ಅನುಮಾನಗಳು ಶುರುವಾಗಿದೆ.
ಹೆತ್ತವರ ನೆನಪು.. ಬೆಂಗಳೂರಲ್ಲಿ ಕೆಲಸದ ಕನಸು..
ನೇಹಾ ರಾವ್ ಇದ್ದ ಜಾಗದಲ್ಲಿ ಪತ್ರವೊಂದು ಸಿಕ್ಕಿದ್ದು, ಈ ಬಗ್ಗೆ ತನಿಖೆ ಆಗಬೇಕಿದೆ. ಇನ್ನು, ಕುಟುಂಬದ ಮೂಲಗಳ ಪ್ರಕಾರ ನೇಹಾಳಿಗೆ ಅಪ್ಪ-ಅಮ್ಮನ ಜೊತೆಯಲ್ಲಿ ಬೆಂಗಳೂರಿನಲ್ಲಿರಲು ಆಸೆ ಇತ್ತು. ಇದೇ ಕಾರಣಕ್ಕೆ ಬೆಂಗಳೂರಲ್ಲಿ ಕೆಲಸ ಹುಡುಕಿದ್ದಳು. ಆದರೆ ನೇಹಾಳಿಗೆ ಕೆಲಸ ಸಿಕ್ಕಿರಲಿಲ್ಲ. 2022-23ರಲ್ಲಿ ಒಡಿಶಾದ ಜಿಂದಾಲ್​ನಲ್ಲಿ ಕೆಲಸ ಶುರು ಮಾಡಿದ್ದಳು.
ಇದನ್ನೂ ಓದಿ: ಸ್ಮೃತಿ ಇರಾನಿಗೆ ಅಂದು ಸೀರಿಯಲ್​ನಲ್ಲಿ ನಟನೆಗೆ 1,800 ಸಂಭಾವನೆ.. ಆದ್ರೆ ಇಂದು 14 ಲಕ್ಷ ರೂಪಾಯಿ!
ಮೂರು ವರ್ಷದ ಅಗ್ರಿಮೆಂಟ್​ ಆಧಾರದಲ್ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಒಂದೂವರೆ ವರ್ಷಕ್ಕೆ ನೇಹಾ ಕೆಲಸಕ್ಕೆ ಗುಡ್ ಬೈ ಹೇಳಿದ್ದಳು. ಬೆಂಗಳೂರಲ್ಲಿ ಕೆಲಸ ಮಾಡುತ್ತೇನೆ ಅಂತಾ ಓಡಿಶಾದಿಂದ ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಲ್ಲಿ ಕೆಲಸಕ್ಕಾಗಿ 8 ತಿಂಗಳು ಅಲೆದಾಟ ನಡೆಸಿದ್ದಳು. ಆದರೆ ಕೆಲಸ ಸಿಗದೆ ನೇಹಾ ನಿರಾಸೆಗೆ ಒಳಗಾಗಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: ಐಸಿಸಿ ಅಂಪೈರ್ ಪಾಕಿಸ್ತಾನದಲ್ಲಿ ಹಠಾತ್ ನಿಧನ.. ವಯಸ್ಸು ಕೇವಲ 41.. ಅಸಲಿಗೆ ಆಗಿದ್ದೇನು?
ಇದೇ ವೇಳೆ ಜಿಂದಾಲ್ ಕಂಪನಿಯಿಂದ ಮತ್ತೆ ಆಕೆಗೆ ಆಫರ್ ಬಂದಿದೆ. ಈ ಹಿಂದೆ ಉತ್ತಮ ಕೆಲಸಗಾರ್ತಿಯಾಗಿ ಗುರುತಿಸಿಕೊಂಡಿದ್ದ ಕಾರಣಕ್ಕೆ ಮತ್ತೆ ಕೆಲಸಕ್ಕೆ ಬಾ ಎಂದು ಕರೆದಿದ್ದರು. ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಮರು ನೇಮಕಗೊಂಡಿದ್ದರು. 2024ರ ಆಗಸ್ಟ್​ನಲ್ಲಿ ಒಡಿಶಾಗೆ ನೇಹಾ ಹೋಗಿದ್ದರು. ಸ್ವತಃ ತಂದೆಯೇ ಮಗಳನ್ನು ಕಾರಿನಲ್ಲಿ ಓಡಿಶಾಗೆ ಡ್ರಾಪ್ ಮಾಡಿದ್ದರು. ಊರಲ್ಲಿ ಕೆಲಸ ಆಗಿಲ್ಲ, ಹೆತ್ತವರಿಂದ ದೂರ ಇದ್ದ ಕಾರಣ ಬೇಜಾರಿನಲ್ಲಿದ್ದಳು ಅಂತಾ ನೇಹಾರಾವ್ ತಂದೆ ಸುಧೀರ್ ರಾವ್ ನ್ಯೂಸ್​ಫಸ್ಟ್​ಗೆ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ