/newsfirstlive-kannada/media/post_attachments/wp-content/uploads/2024/12/EDWINA-MOUNTBATTEN.jpg)
ಎಡ್ವಿನಾ ಮೌಂಟ್​ಬ್ಯಾಟನ್ ಹಾಗೂ ನೆಹರು ನಡುವಿನ ಸ್ನೇಹ ಅನೇಕ ವಿವಾದಗಳನ್ನು ಹೊಂದಿವೆ.ಅನೇಕ ವೇದಿಕೆಗಳಲ್ಲಿ ಅವರ ಸಂಬಂಧದ ಬಗ್ಗೆ ಚರ್ಚೆಯಾಗಿವೆ. ಎಡ್ವಿನಾ ಅವರ ಪುತ್ರಿ ಲೇಡಿ ಪಮೇಲಾ ಹಿಕ್ಸ್​ ಬರೆದ ‘ಡಾಟರ್ ಆಫ್​ ಎಂಪೈರ್‘​ ಪುಸ್ತಕದಲ್ಲಿಯೂ ಕೂಡ ನೆಹರು ಹಾಗೂ ಎಡ್ವಿನಾ ನಡುವಿನ ಸಂಬಂಧ ಹೇಗಿತ್ತು ಎಂಬುದರ ಉಲ್ಲೇಖವಾಗಿತ್ತು. ಈಗ ಇದೇ ಎಡ್ವಿನಾ ಮೌಂಟ್ ಬ್ಯಾಟನ್​ಗೆ ನೆಹರು ಅವರು ಬರೆದ ಪತ್ರಗಳನ್ನು ಸೋನಿಯಾ ಗಾಂಧಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ದಯವಿಟ್ಟು ಅವುಗಳನ್ನು ಹಿಂದಿರುಗಿಸಿ ಎಂದು ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ (PMML) ಕಾಂಗ್ರೆಸ್​ನ ಎಂಪಿ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದಿದೆ. ಈ ವಿಷಯ ಈಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
/newsfirstlive-kannada/media/post_attachments/wp-content/uploads/2024/12/EDWINA-MOUNTBATTEN-1.jpg)
2008ರಲ್ಲಿ ಸೋನಿಯಾ ಗಾಂಧಿಯವರು ನೆಹರು ಮೆಮೊರಿಯಲ್ ಮ್ಯೂಸಿಯಂ ಆ್ಯಂಡ್​ ಲೈಬ್ರರಿಗೆ ನೀಡಲಾಗಿದ್ದ ನೆಹರು ಅವರಿಗೆ ಸಂಬಂಧಿಸಿದ ಪತ್ರಗಳನ್ನು ವಾಫಸ್​ ಪಡೆದಿದ್ದಾರೆ ಎಂಬುದು ಈಗ ತಿಳಿದು ಬಂದಿದೆ ಅವುಗಳನ್ನು ಹಿಂದಿರುಗಿಸಿ ಎಂದು ಪಿಎಂಎಂಎಲ್​ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದೆ.
ಇದನ್ನೂ ಓದಿ:Zakir Hussain; ಝಾಕೀರ್ ಹುಸೇನ್ ಇನ್ನಿಲ್ಲ, ತಬಲಾ ಮಾಂತ್ರಿಕನ ಜೀವನ ಹೇಗಿತ್ತು?
ರಾಹುಲ್ ಗಾಂಧಿಗೆ ಬರೆದಿರುವ ಪತ್ರದಲ್ಲಿ ನೆಹರು ದೇಶ-ವಿದೇಶದ ಅನೇಕರೊಂದಿಗೆ ನಡೆಸಿದ್ದ ಪತ್ರ ವ್ಯವಹಾರಗಳು ಇವೆ. ನೆಹರು ಎಡ್ವಿನಾ ಮೌಂಟ್​ ಬ್ಯಾಟನ್, ಅಲ್ಬರ್ಟ್ ಐನ್​ಸ್ಟನ್, ಅರುನಾ ಅಸಫ್ ಅಲಿ, ಜಯಪ್ರಕಾಶ ನಾರಾಯಣ, ವಿಜಯಲಕ್ಷ್ಮೀ ಪಂಡಿತ್, ಬಾಬು ಜಗಜೀವನ್​ರಾಮ್ ಮತ್ತು ಗೋವಿಂದ ಬಲ್ಲಾಬ್​ ಪಂತ್ ಅವರಿಗೆ ಬರೆದ ಪತ್ರಗಳನ್ನು ಸೋನಿಯಾ ಗಾಂಧಿ ತಮ್ಮ ವಶದಲ್ಲಿಟ್ಟುಕೊಂಡಿದ್ದಾರಂತೆ ಎಂದು ಅಹ್ಮದಾಬಾದ್ ಮೂಲದ ಇತಿಹಾಸಕಾರ ಹಾಗೂ ಪಿಎಂಎಂಎಲ್​ನ ಸದಸ್ಯ ರಿಜ್ವಾನ್ ಖದ್ರಿ ಹೇಳಿದ್ದಾರೆ. ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿರುವ ಪತ್ರದಲ್ಲಿ, ಹಲವು ಸಂದರ್ಭಗಳಲ್ಲಿ ಹಲವು ಜನರಿಗೆ ನೆಹರು ಬರೆದಿದ್ದ ಪತ್ರಗಳು ಸುಮಾರು 51 ಪೆಟ್ಟಿಗೆಯಲ್ಲಿ ಇದ್ದವು. ಅವುಗಳು ಈಗ ಸೋನಿಯಾ ಗಾಂಧಿ ವಶದಲ್ಲಿದ್ದು ಅವುಗಳನ್ನು ಪುನಃ ನೀಡಬೇಕು ಎಂದು ಹೇಳಲಾಗಿದೆ.
/newsfirstlive-kannada/media/post_attachments/wp-content/uploads/2024/12/EDWINA-MOUNTBATTEN-2.jpg)
ಸೆಪ್ಟೆಂಬರ್ 9 ರಂದು ಬರೆದ ಪತ್ರದಲ್ಲಿ ಸೋನಿಯಾ ಗಾಂಧಿಯವರ ಹೆಸರನ್ನು ಉಲ್ಲೇಖಿಸಿರುವ ಖದ್ರಿ, ದೇಶದ ಇತಿಹಾಸವಾಗಿ ಆ ಪತ್ರಗಳನ್ನು ನಾವು ಸುಭದ್ರವಾಗಿ ಇಟ್ಟುಕೊಳ್ಳುವುದು ತುಂಬಾ ಪ್ರಮುಖವಾದದ್ದು. ಹೀಗಾಗಿ ಸೋನಿಯಾ ಗಾಂಧಿಯವರು ಆ ಪತ್ರಗಳನ್ನು ವಾಪಸ್ ಕೊಡಲಿ, ಇಲ್ಲವೇ ಕಾಪಿಗಳನ್ನು ಹಂಚಿಕೊಳ್ಳಲಿ ಅಥವಾ ಡಿಜಿಟಲ್​ ಮಾದರಿಯಲ್ಲಿ ಹಿಂದಿರುಗಿಸಲಿ ಎಂದು ಕೇಳಿಕೊಂಡಿದ್ದಾರೆ.
ಈ ಒಂದು ಪತ್ರ ಈಗ ಬಿಜೆಪಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಿದೆ. ಬಿಜೆಪಿ ಸಂಸದ ಸಂಬೀತ್ ಪಾತ್ರ ಕಾಂಗ್ರೆಸ್​ ವಿರುದ್ಧ ಈ ವಿಚಾರವಾಗಿ ಗುಡುಗಿದ್ದಾರೆ. ಆ ಪತ್ರಗಳಲ್ಲಿ ಏನಿದೆ ಎಂದು ಈ ದೇಶದ ಜನರಿಗೆ ಗೊತ್ತಾಗಬಾರದೇ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಯತ್ನಾಳ್ ಸೈಲೆಂಟ್, ವಿಜಯೇಂದ್ರ ವೈಲೆಂಟ್​; ದಾವಣಗೆರೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ BSY ಪುತ್ರ?
ಈ ಒಂದು ಮೆಮೊರಿಯಲ್ ಪ್ರಮುಖವಾಗಿ ನೆಹರುಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿದೆ. ಜಾಗತಿಕ ನಾಯಕರಿಗೆ ನೆಹರು ಅವರು ಬರೆದ ಪತ್ರಗಳು ಸುಮಾರು 51 ಪೆಟ್ಟಿಗೆಗಳಲ್ಲಿ ಇದ್ದವು ಎಂದು ಹೇಳಲಾಗುತ್ತಿದೆ. 2008ರಲ್ಲಿ ಸೋನಿಯಾ ಗಾಂಧಿ ಯುಪಿಎದ ಅಧ್ಯಕ್ಷರಾದ ಕಾಲದಲ್ಲಿ ಈ ಮ್ಯೂಸಿಯಂಗೆ ಭೇಟಿ ನೀಡಿ ಆ ಪತ್ರಗಳನ್ನು ತೆಗೆದುಕೊಂಡು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ.
ನೆಹರು ಎಡ್ವಿನಾ ಮೌಂಟ್​ಬ್ಯಾಟನ್​ಗೆ ಬರೆದ ಪತ್ರದ ಬಗ್ಗೆ ತಿಳಿಯಲು ಬಯಸಿದ್ದರು. ಅವುಗಳನ್ನು 2010ರಲ್ಲಿ ಡಿಜಿಟಲ್ ದಾಖಲೆಗಳಾಗಿ ಮಾಡುವ ಸಿದ್ಧತೆ ನಡೆದಿತ್ತು. ಅದಕ್ಕಿಂತ ಮೊದಲು ಸೋನಿಯಾ ಗಾಂಧಿ ಆ ಪತ್ರಗಳನ್ನೆಲ್ಲಾ ತೆಗೆದುಕೊಂಡು ಹೋಗಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ ಸಂಬೀತ್ ಪಾತ್ರ. ಈ ಹಿಂದೆ ನೆಹರು ಮೆಮೊರಿಯಲ್ ಮ್ಯೂಸಿಯಂ ಆ್ಯಂಡ್ ಲೈಬ್ರರಿ ಸೋಸೈಟಿ ಎಂಬ ಹೆಸರಿಲ್ಲಿದ್ದ ಮ್ಯೂಸಿಯಂ ಜೂನ್ 2013ರಲ್ಲಿ ಪ್ರೈಮ್​ ಮಿನಿಸ್ಟರ್ ಮ್ಯೂಸಿಯಂ ಆ್ಯಂಡ್ ಲೈಬ್ರರಿ ಎಂದು ಹೆಸರನ್ನು ಬದಲಾಯಿಸಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us