newsfirstkannada.com

ಇವರು ಆಡಿದ್ದು ಕೇವಲ ಎರಡು ಟಿ-20I ಪಂದ್ಯ ಮಾತ್ರ..! RCBಯಲ್ಲಿ ಕೊಹ್ಲಿ, ಮ್ಯಾಕ್ಸಿಗೆ ಏನ್ ಟಿಪ್ಸ್ ಕೊಟ್ಟಾರು..?

Share :

Published April 19, 2024 at 12:59pm

Update April 19, 2024 at 1:42pm

    ಕೊಹ್ಲಿ, ಮ್ಯಾಕ್ಸ್​ವೆಲ್​​, ಡುಪ್ಲೆಸಿಗೆ ಏನ್​ ಟಿಪ್ಸ್​ ಕೊಡೋಕೆ ಸಾಧ್ಯ?

    ಆರ್​ಸಿಬಿ ಸಾಲು ಸಾಲು ಸೋಲಿಗೆ ಕಾರಣರಾದ್ರಾ ಕೋಚ್?

    ಆರ್​ಸಿಬಿ ಬ್ಯಾಟಿಂಗ್ ಕೋಚ್ ಯಾರು? ಅವರ ಹಿನ್ನೆಲೆ ಏನು?

ಆಡಿದ 7 ಪಂದ್ಯಗಳಲ್ಲಿ ಜಸ್ಟ್​ 1 ಪಂದ್ಯ ಗೆದ್ದಿರುವ ಆರ್​​ಸಿಬಿ, ಪಾಯಿಂಟ್ಸ್​​ ಟೇಬಲ್​ನಲ್ಲಿ ಕೊನೆ ಸ್ಥಾನಕ್ಕೆ ಕುಸಿದಿದೆ. ಈ ಹೀನಾಯ ಪರ್ಫಾಮೆನ್ಸ್​ನ ಬೆನ್ನಲ್ಲೇ, ಮ್ಯಾನೇಜ್​ಮೆಂಟ್​ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ.

RCB ದುಸ್ಥಿತಿಗೆ ಇವರೇ ಕಾರಣ
ಬ್ಯಾಟಿಂಗ್​ ಕೋಚ್ ನೀಲ್​ ಮೆಕೆಂಝಿ ಹಾಗೂ ಬೌಲಿಂಗ್​​​ ಕೋಚ್ ಆ್ಯಡಂ ಗ್ರಿಫಿತ್ ಆರ್​ಸಿಬಿ ಸೋಲಿಗೆ ಕಾರಣ ಎಂಬ ಕಿಡಿ ಹೊತ್ತಿಕೊಂಡಿದೆ. ಬ್ಯಾಟಿಂಗ್​ ಕೋಚ್​ ನೀಲ್​ ಮೆಕೆಂಝಿ ಬೇರೆ ಯಾರೂ ಅಲ್ಲ. ಸೌತ್​ ಆಫ್ರಿಕಾ ತಂಡದ ಮಾಜಿ ‘ಟೆಸ್ಟ್’​ ಕ್ರಿಕೆಟಿಗ. ಟೆಸ್ಟ್​ ಸ್ಪೆಷಲಿಸ್ಟ್​​ನ ತಂದು ಟಿ20 ಬ್ಯಾಟಿಂಗ್​ ಕೋಚ್​ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ? ಮುಂಬೈ ಇಂಡಿಯನ್ಸ್​ ತಂಡದಲ್ಲಿ ಕಿರನ್ ಪೊಲಾರ್ಡ್​​, ಸಿಎಸ್​ಕೆಯಲ್ಲಿ ಮೈಕಲ್​ ಹಸ್ಸಿಯಂತಹ ಟಿ20 ಲೆಜೆಂಡ್ಸ್​ ಬ್ಯಾಟಿಂಗ್ ಕೋಚ್​ ಆಗಿದ್ದಾರೆ. ಆದ್ರೆ ಆರ್​​ಸಿಬಿ ಡಿಫರೆಂಟ್. ಅದ್ಕೆ ಟೆಸ್ಟ್​ ಸ್ಪೆಷಲಿಸ್ಟ್​ ಕರೆದುಕೊಂಡು ಬಂದು ಟಿ20 ತಂಡಕ್ಕೆ ಬ್ಯಾಟಿಂಗ್​ ಪಾಠ ಮಾಡೋಕೆ ಬಿಟ್ಟಿದ್ದಾರೆ.

ಇದನ್ನೂ ಓದಿ: ಗದಗದಲ್ಲಿ ಹತ್ಯೆಯಾದ ನಾಲ್ವರಲ್ಲಿ ಓರ್ವ ಬಿಜೆಪಿ ಕಾರ್ಯಕರ್ತ; ಇವರ ದತ್ತು ಮಗಳನ್ನೂ ಕೊಲೆಗೈದ ಪಾಪಿಗಳು

ಆರ್​ಸಿಬಿ ಬ್ಯಾಟಿಂಗ್, ಬೌಲಿಂಗ್ ಕೋಚ್
ಆರ್​ಸಿಬಿ ಬ್ಯಾಟಿಂಗ್, ಬೌಲಿಂಗ್ ಕೋಚ್

2, T20I ಪಂದ್ಯ ಆಡಿರೋದೇ ನೀಲ್​​ ಮೆಕೆಂಝಿಯ ಅನುಭವ
ಟೆಸ್ಟ್​​ ಸ್ಪೆಷಲಿಸ್ಟ್​ ನೀಲ್​ ಮೆಕೆಂಝಿ ವೈಟ್​ ಬಾಲ್​ ಕ್ರಿಕೆಟ್​ ಆಡಿಲ್ಲ ಅಂತಿಲ್ಲ. ಇವರು ಒನ್​ ಡೇ ಆಡಿದ್ದಾರೆ. ಅಲ್ಲಿ ಅವರ ಸ್ಟ್ರೈಕ್​ರೇಟ್​ 70ಕ್ಕಿಂತ ಕಡಿಮೆ. ಕೇವಲ 2 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿರೋ ಅನುಭವ ಇವರಿಗಿದೆ. ಇಂತಹ ಟ್ರ್ಯಾಕ್​ ರೆಕಾರ್ಡ್​ ಹೊಂದಿರೋ ನೀಲ್​ ಮೆಕೆಂಝಿ, 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿರೋ ವಿರಾಟ್​ ಕೊಹ್ಲಿ, ಗ್ಲೇನ್​ ಮ್ಯಾಕ್ಸ್​ವೆಲ್, ಈಗಾಗಲೇ ಟಿ20 ಲೆಜೆಂಡ್​​ಗಳಾಗಿ ಬೆಳೆದಿರೋ ಫಾಫ್ ಡುಪ್ಲೆಸಿ, ದಿನೇಶ್​ ಕಾರ್ತಿಕ್​ರಂತವರಿಗೆ ಏನು ತಾನೆ ಹೇಳಿಕೊಡೋಕೆ ಸಾಧ್ಯ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ:ಐಪಿಎಲ್​​ನಲ್ಲಿ ಸತತ ಹೀನಾಯ ಸೋಲು, RCB ದುಸ್ಥಿತಿಗೆ ಇವರಿಬ್ಬರೇ ಪ್ರಮುಖ ಕಾರಣ..!

ದಕ್ಷಿಣ ಆಫ್ರಿಕಾ ಪರ 58 ಟೆಸ್ಟ್ ಪಂದ್ಯಗಳನ್ನು ಆಡಿರುವ ನೀಲ್​ ಮೆಕೆಂಝಿ 94 ಇನ್ನಿಂಗ್ಸ್ ಆಡಿ, 3253 ರನ್​ಗಳಿಸಿದ್ದಾರೆ. ಅತ್ಯಧಿಕ ಸ್ಕೋರ್ 226 ರನ್ ಆಗಿದ್ದು, ಐದು ಶತಕ, 16 ಅರ್ಧಶತಕ ಒಳಗೊಂಡಿದೆ. ಇನ್ನು 64 ಏಕದಿನ ಕ್ರಿಕೆಟ್ ಪಂದ್ಯ ಆಡಿರುವ ಇವರು, 37.51 ಸರಾಸರಿಯಲ್ಲಿ 1688 ರನ್​​ ಬಾರಿಸಿದ್ದಾರೆ. ಕೇವಲ 2 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿರುವ ಅವರು 7 ರನ್ ಬಾರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇವರು ಆಡಿದ್ದು ಕೇವಲ ಎರಡು ಟಿ-20I ಪಂದ್ಯ ಮಾತ್ರ..! RCBಯಲ್ಲಿ ಕೊಹ್ಲಿ, ಮ್ಯಾಕ್ಸಿಗೆ ಏನ್ ಟಿಪ್ಸ್ ಕೊಟ್ಟಾರು..?

https://newsfirstlive.com/wp-content/uploads/2024/04/Neil-McKenzie.jpg

Load More