ನೆಲಮಂಗಲ ಭೀಕರ ಅಪಘಾತ.. ಒಂದೇ ಕುಟುಂಬದ 6 ಮಂದಿ ಕೊನೆಯುಸಿರು; ಭಾರೀ ಟ್ರಾಫಿಕ್ ಜಾಮ್‌!

author-image
admin
Updated On
ನೆಲಮಂಗಲ ಭೀಕರ ಅಪಘಾತ.. ಒಂದೇ ಕುಟುಂಬದ 6 ಮಂದಿ ಕೊನೆಯುಸಿರು; ಭಾರೀ ಟ್ರಾಫಿಕ್ ಜಾಮ್‌!
Advertisment
  • 2 ತಿಂಗಳ ಹಿಂದಷ್ಟೇ VOLVO ಕಾರು ಖರೀದಿಸಿದ್ದ ಕುಟುಂಬ
  • ಡಿಕ್ಕಿಯಾದ ರಭಸಕ್ಕೆ ಪಲ್ಟಿಯಾದ ಕಂಟೇನರ್‌, ಕಾರಿನ ಮೇಲೆ ಬಿದ್ದಿದೆ
  • ಕಾರಲ್ಲಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು, ಮಗು ಸಾವು

ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಹೊಚ್ಚ ಹೊಸ ಕಾರಿನ ಮೇಲೆ ಕಂಟೇನರ್​ ಉರುಳಿ ಬಿದ್ದು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ನಡೆದ ದುರಂತ ಸಂಭವಿಸಿದೆ.

publive-image

ಈ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಡಿಕ್ಕಿಯಾದ ರಭಸಕ್ಕೆ ಪಲ್ಟಿಯಾದ ಕಂಟೇನರ್‌ ಕಾರಿನ ಮೇಲೆ ಬಿದ್ದಿದೆ. 2 ಕಾರು, 2 ಲಾರಿ ಹಾಗೂ ಸ್ಕೂಲ್​ ಬಸ್​ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ ಮಾಲಿಕತ್ವದ ರೆಸ್ಟೋರೆಂಟ್​ಗೆ ನಕ್ಷೆ, ಲೈಸೆನ್ಸ್ ಏನೂ ಇಲ್ಲ.. BBMP ನೋಟಿಸ್ 

ಇಂದು ವೀಕೆಂಡ್​​ ಹಿನ್ನೆಲೆಯಲ್ಲಿ 2 ತಿಂಗಳ ಹಿಂದಷ್ಟೇ VOLVO ಕಾರು ಖರೀದಿಸಿದ್ದ ಕುಟುಂಬ ಪ್ರವಾಸಕ್ಕೆ ಹೊರಟಿತ್ತು. ಕಾರಲ್ಲಿ ತೆರಳುವಾಗ ಈ ಅಪಘಾತ ಸಂಭವಿಸಿ ಕಾರಲ್ಲಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು, ಮಗು ಸಾವನ್ನಪ್ಪಿದೆ.

publive-image

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನ ಮೇಲೆ ಕಂಟೇನರ್ ಲಾರಿ ಬಿದ್ದು ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ಲಾರಿಗಳ ನಡುವೆ ಅಪಘಾತ ಸಂಭವಿಸಿದ್ದು, ತುಮಕೂರು -ಬೆಂಗಳೂರು ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳಕ್ಕೆ ನೆಲಮಂಗಲ ಟ್ರಾಫಿಕ್ ಪೊಲೀಸರು ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಕಂಟೇನರ್ ಲಾರಿ ಬಿದ್ದ ಪರಿಣಾಮವಾಗಿ ಕಾರಿನಲ್ಲಿದ್ದವರ ರಕ್ಷಣೆ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment