ಹೊಸ ಕಾರಿನಲ್ಲಿ ವೀಕೆಂಡ್ ಪ್ರವಾಸ.. ನಜ್ಜುಗುಜ್ಜಾದ ಒಂದೇ ಕುಟುಂಬದ 6 ಮಂದಿ; ಘೋರ ದುರಂತ!

author-image
admin
Updated On
ನೆಲಮಂಗಲದಲ್ಲಿ ಒಂದೇ ಕುಟುಂಬದ 6 ಮಂದಿ ದುರಂತ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
Advertisment
  • ಮೃತರು ಕೆಲ ತಿಂಗಳ ಹಿಂದಷ್ಟೇ VOLVO ಕಾರು ಖರೀದಿಸಿದ್ದರು
  • ಕಂಟೇನರ್ ಕಾರಿನ ಮೇಲೆ ಬಿದ್ದಿದ್ದರಿಂದ 6 ಮಂದಿ ಕೊನೆಯುಸಿರು
  • ಹೊಸ ಕಾರಿನಲ್ಲಿ ಪ್ರವಾಸ ಹೊರಟಿದ್ದ ಒಂದೇ ಕುಟುಂಬದವರು

ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ಸರಣಿ ಅಪಘಾತ ಸಂಭವಿಸಿದೆ. KA 01 ND 1536 ನಂಬರ್‌ನ ಕಾರಿನ ಮೇಲೆ ಕಂಟೇನರ್ ಬಿದ್ದಿದ್ದು, ಒಂದೇ ಕುಟುಂಬದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಕುಟುಂಬಸ್ಥರು 6 ತಿಂಗಳ ಹಿಂದಷ್ಟೇ VOLVO ಕಾರು ಖರೀದಿಸಿದ್ದರು. ಇಂದು, ನಾಳೆ ವೀಕೆಂಡ್ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಹೊರಟಿದ್ದರು. ಟಿ.ಬೇಗೂರು ಬಳಿ ಎದುರಿನಿಂದ ವೇಗವಾಗಿ ಬಂದ ಕಂಟೇನರ್ ಲಾರಿ ಕಾರಿನ ಮೇಲೆ ಬಿದ್ದಿದೆ. ಕಂಟೇನರ್ ಕಾರಿನ ಮೇಲೆ ಬಿದ್ದಿದ್ದರಿಂದ ಒಂದೇ ಕುಟುಂಬದ ಆರು ಮಂದಿ ಜೀವ ಬಿಟ್ಟಿದ್ದಾರೆ.

ಇದನ್ನೂ ಓದಿ: ನೆಲಮಂಗಲ ಭೀಕರ ಅಪಘಾತ.. ಒಂದೇ ಕುಟುಂಬದ 6 ಮಂದಿ ಕೊನೆಯುಸಿರು; ಭಾರೀ ಟ್ರಾಫಿಕ್ ಜಾಮ್‌! 

42 ವರ್ಷದ ಗೌರಬಾಯಿ, ಸಾಫ್ಟ್‌ವೇರ್‌ ಚಂದ್ರಮೌಳಿ, ದೀಕ್ಷಾ, ಧ್ಯಾನ್ ಸಾವನ್ನಪ್ಪಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನಾ ಹಿರಿಯ ಪೊಲೀಸರು ಅಧಿಕಾರಿಗಳು ಸ್ಥಳೀಯರ ಸಹಾಯ ಪಡೆದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

publive-image

ಭೀಕರ ಅಪಘಾತದ ಹಿನ್ನೆಲೆಯಲ್ಲಿ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಹೊಸ ಕಾರಿನಲ್ಲಿ ಪ್ರವಾಸ ಹೊರಟಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು, ಮಗು ಸಾವನ್ನಪ್ಪಿದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ನೆಲಮಂಗಲ ಟ್ರಾಫಿಕ್ ಪೊಲೀಸರು ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment