Advertisment

ಅಯ್ಯೋ ವಿಧಿಯೇ.. ನೆಲಮಂಗಲ ಅಪಘಾತದ ಆಘಾತ; ಚಂದ್ರಮ್‌ ತಂದೆ ಕೂಡ ದುರಂತ ಅಂತ್ಯ!

author-image
admin
Updated On
ಅಯ್ಯೋ ವಿಧಿಯೇ.. ನೆಲಮಂಗಲ ಅಪಘಾತದ ಆಘಾತ; ಚಂದ್ರಮ್‌ ತಂದೆ ಕೂಡ ದುರಂತ ಅಂತ್ಯ!
Advertisment
  • ವೋಲ್ವೋ ಕಾರಿನ ಮೇಲೆ ಕಂಟೇನರ್ ಬಿದ್ದು ಭೀಕರ ಅಪಘಾತ
  • ನೆಲಮಂಗಲದ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ದುರಂತ
  • ಮಕ್ಕಳು, ಮೊಮ್ಮಕ್ಕಳ ಸಾಮೂಹಿಕ ಅಂತ್ಯಕ್ರಿಯೆ ಕಂಡಿದ್ದ ಹಿರಿಯ ಜೀವ

ವಿಜಯಪುರ: ಸರಿಯಾಗಿ 7 ದಿನಗಳ ಹಿಂದೆ. ಡಿಸೆಂಬರ್ 21ರಂದು ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಕೇಳರಿಯದ ಭೀಕರ ಅಪಘಾತ ಸಂಭವಿಸಿತ್ತು. ಕಂಟೇನರ್ ಒಂದು ವೋಲ್ವೋ ಕಾರಿನ ಮೇಲೆ ಬಿದ್ದಿದ್ದು ಕಾರು ಹಾಗೂ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಅಪ್ಪಚ್ಚಿಯಾಗಿದ್ದರು. ಚಂದ್ರಮ್‌ ಕುಟುಂಬದ ಈ ದುರಂತ ಕರುಣಾಜನಕವಾಗಿದ್ದು, ಇಡೀ ದೇಶಾದ್ಯಂತ ಸುದ್ದಿಯಾಗಿತ್ತು.

Advertisment

ಚಂದ್ರಮ್ ಯೋಗಪ್ಪಗೊಳ್ ಅವರು IAST ಸಾಫ್ಟ್​ವೇರ್ ಸಲ್ಯೂಷನ್ಸ್​​ನ ಎಂಡಿ, ಸಿಇಒ ಆಗಿದ್ದರು. 5 ವರ್ಷದ ಹಿಂದೆ ಚಂದ್ರಮ್ ಈ ಕಂಪನಿಯನ್ನ ಆರಂಭ ಮಾಡಿದ್ದರು. ಯಶಸ್ವಿಯಾಗಿ ನಡೆಯುತ್ತಿದ್ದ ಈ ಕಂಪನಿಯಲ್ಲಿ 150ಕ್ಕೂ ಹೆಚ್ಚು ಕೆಲಸಗಾರರು ಇದ್ದರು. ಮಹಾರಾಷ್ಟ್ರದ ತಮ್ಮ ಊರಿಗೆ ಹೋಗಿ ಬರ್ತೀನಿ ಎಂದು ಹೊರಟವರಿಗೆ ಈ ರೀತಿಯಾಗಿತ್ತು.

ನೆಲಮಂಗಲ ಬಳಿ ನಡೆದ ಕಂಟೇನರ್ ಹಾಗೂ ವೋಲ್ವೋ ಕಾರಿನ ಅಪಘಾತದಲ್ಲಿ ಒಂದೇ ಕುಟುಂಬದ 6 ಜನ ಸಾವನ್ನಪ್ಪಿದ್ದರು. 3 ಆ್ಯಂಬುಲೆನ್ಸ್‌ನಲ್ಲಿ ಮೃತರ ಶವಗಳನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಿ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗಿತ್ತು. ಒಂದೇ ಮನೆಯ 6 ಜನರ ದಾರುಣ ಅಂತ್ಯಕ್ಕೆ ಇಡೀ ಊರಿನ ಸಾವಿರಾರು ಜನ ಕಣ್ಣೀರು ಹಾಕಿದ್ದರು.

ಎಂತವರಿಗೂ ಈ ದುರಂತದ ವಿಷಯ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿತ್ತು. ಇನ್ನು ಮೃತ ಚಂದ್ರಮ್ ತಂದೆ ಈರಗೊಂಡ ಏಗಪ್ಪಗೊಳ ತನ್ನ ಮಕ್ಕಳು, ಮೊಮ್ಮಕ್ಕಳ ಸಾವಿನ ಬಳಿಕ ಆಘಾತಗೊಂಡಿದ್ದರು. ಕುಟುಂಬ ಸದಸ್ಯರ ಸಾವಿನಿಂದ‌ ಆಘಾತಕ್ಕೊಳಕ್ಕಾಗಿದ್ದ ಈರಗೊಂಡ ಏಗಪ್ಪಗೊಳ ಅವರು ಇಂದು ಸಂಜೆ ಮಹಾರಾಷ್ಟ್ರದ ಸಾಂಗ್ಲಿ‌ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮದಲ್ಲಿ ನಿಧನರಾಗಿದ್ದಾರೆ.

Advertisment

publive-image

ಇದನ್ನೂ ಓದಿ: ನೆಲಮಂಗಲ ಅಪಘಾತ.. ದೇವರಂತಹ ಮನುಷ್ಯ; ಚಂದ್ರಮ್ ಕಂಪನಿ ನೌಕರರಿಂದ ಕಣ್ಣೀರ ವಿದಾಯ 

ಕಂಟೇನರ್ ಅಪಘಾತದಲ್ಲಿ ಈರಗೊಂಡ ಮಗ ಚಂದ್ರಮ್ ಹಾಗೂ ಗೌರಾಬಾಯಿ,‌ ದೀಕ್ಷಾ, ಧ್ಯಾನ್,‌‌ ವಿಜಯಲಕ್ಷ್ಮಿ, ಆರ್ಯ ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ಅನಾರೋಗ್ಯದ ಜೊತೆ ಕುಟುಂಬಸ್ಥರ ಸಾವಿನಿಂದ ನೊಂದಿದ್ದ ಈರಗೊಂಡ ಅವರು ಇಂದು ಪ್ರಾಣ ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment