ಒಂದೇ ಕುಟುಂಬದ 6 ಮಂದಿ ದುರಂತ.. ಬಾಸ್ ಕಳೆದುಕೊಂಡ ಸಿಬ್ಬಂದಿ ಕಣ್ಣೀರು; ಆತಂಕಕ್ಕೆ ಕಾರಣ ಇಲ್ಲಿದೆ!

author-image
admin
Updated On
ಒಂದೇ ಕುಟುಂಬದ 6 ಮಂದಿ ದುರಂತ.. ಬಾಸ್ ಕಳೆದುಕೊಂಡ ಸಿಬ್ಬಂದಿ ಕಣ್ಣೀರು; ಆತಂಕಕ್ಕೆ ಕಾರಣ ಇಲ್ಲಿದೆ!
Advertisment
  • ಅನ್ನದಾತನ ಕಳೆದುಕೊಂಡ ನೂರಾರು ಉದ್ಯೋಗಿಗಳು ಕಂಗಾಲು
  • IAST ಸಾಫ್ಟ್‌ವೇರ್ ಸಲ್ಯೂಷನ್‌ ಕಂಪನಿ ಕಟ್ಟಿ ಬೆಳಿಸಿದ್ದ ಚಂದ್ರಮ್
  • ಹುಟ್ಟೂರಲ್ಲಿ ಚಂದ್ರಮ್ ಕುಟುಂಬದ 6 ಮಂದಿ ಸಾಮೂಹಿಕ ಅಂತ್ಯಕ್ರಿಯೆ

ಬೆಂಗಳೂರು: ವಿಧಿಯಾಟ ಬಲ್ಲವರು ಯಾರು ಅನ್ನೋದು ಇದಕ್ಕೆ ಅನ್ನಿಸುತ್ತೆ. ರಜೆ ಇದೆ ಅಂತ ಊರ ಕಡೆ ಹೊರಟ್ಟಿದ್ದ ಫ್ಯಾಮಿಲಿಗೆ ಅರ್ಧ ದಾರಿಯಲ್ಲೇ ಜವರಾಯನ ದರ್ಶನ ಆಗಿದೆ. ಒಬ್ಬರಲ್ಲ.. ಇಬ್ಬರಲ್ಲ.. ಒಂದೇ ಕುಟುಂಬದ 6 ಮಂದಿ ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ. ಮಾಲೀಕನ ಸಾವು ಸಿಬ್ಬಂದಿಯ ಕಣ್ಣಲ್ಲಿ ನೀರು ತರಿಸಿದೆ. ಅನ್ನದಾತನ ಕಳೆದುಕೊಂಡು ಉದ್ಯೋಗಿಗಳಿಗೆ ದಿಕ್ಕೇ ತೋಚದಾಗಿದೆ.

ಇದನ್ನೂ ಓದಿ: ನೆಲಮಂಗಲ ಅಪಘಾತ.. ದೇವರಂತಹ ಮನುಷ್ಯ; ಚಂದ್ರಮ್ ಕಂಪನಿ ನೌಕರರಿಂದ ಕಣ್ಣೀರ ವಿದಾಯ 

ಒಂದೊಂದು ಸೀನ್​ಗಳು ಭಯಾನಕ.. ಘನಘೋರ. ನೆಲಮಂಗಲ ಬಳಿಯ ಟಿ. ಬೇಗೂರು ಅಪಘಾತದ ತೀವ್ರತೆ ಎಷ್ಟರ ಮಟ್ಟಿಗಿತ್ತು ಅನ್ನೋದನ್ನ ಒಂದೊಂದು ದೃಶ್ಯವೂ ಸಾರಿ ಸಾರಿ ಹೇಳುತ್ತವೆ. ಒಬ್ಬರಲ್ಲ.. ಇಬ್ಬರಲ್ಲ.. 6 ಮಂದಿ.. ಒಂದೇ ಕುಟುಂಬದ 6 ಮಂದಿ ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

publive-image

ನೆಲಮಂಗಲದಲ್ಲಿ ಆ್ಯಕ್ಸಿಡೆಂಡ್, 6 ಮಂದಿ ದುರ್ಮರಣ ಪ್ರಕರಣ
ಅನ್ನದಾತನನ್ನ ಕಳೆದುಕೊಂಡು ಆಘಾತಕ್ಕೀಡಾಗಿರುವ ಸಿಬ್ಬಂದಿ
ನೆಲಮಂಗಲದ ಈ ಭೀಕರ ಅಪಘಾತದಲ್ಲಿ ಇಡೀ ಕುಟುಂಬವೇ ಸರ್ವನಾಶವಾಗಿದೆ. ಯಮಕಿಂಕರನಂತೆ ಬಂದ ಕ್ಯಾಂಟರ್‌ ವೋಲ್ವೋ ಕಾರಿನ ಮೇಲೆ ಬಿದ್ದು 6 ಮಂದಿಯ ಜೀವ ತೆಗೆದಿದೆ. ಒಂದೇ ಕ್ಷಣದಲ್ಲಿ ಮಹಾರಾಷ್ಟ್ರ ಮೂಲದ ಚಂದ್ರಮ್ ಕುಟುಂಬ ಸಾವಿನ ಮನೆ ಸೇರಿ ಬಿಟ್ಟಿದೆ. ಚಂದ್ರಮ್ ಸಾವಿಗೆ ಅವರ ಕಚೇರಿಯ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ. ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್‌ ಕಂಪನಿಯ ಸಿಬ್ಬಂದಿಗೆ ದಿಕ್ಕೇ ತೋಚಂದಂತಾಗಿದೆ.

publive-image

ಮಹಾರಾಷ್ಟ್ರ ಸಾಂಗ್ಲಿ ಮೂಲದವರಾಗಿದ್ದ ಚಂದ್ರಮ್, ಬೆಂಗಳೂರಿನ ಹೆಚ್​ಎಸ್​ಆರ್ ಲೇಔಟ್​ನಲ್ಲೂ ಕಂಪನಿ ತೆರೆದಿದ್ದರು. 2018ರಲ್ಲಿ IAST ಸಾಫ್ಟ್‌ವೇರ್ ಕಂಪನಿಯನ್ನ ಶುರು ಮಾಡಿದ್ದು, 150ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಚಂದ್ರಮ್ ಮಹಾರಾಷ್ಟ್ರದ ಪುಣೆಯಲ್ಲೂ ಹೊಸ ಕಂಪನಿಯನ್ನೂ ಶುರು ಮಾಡೋಕೆ ಕೆಲಸಗಳು ನಡೀತಿತ್ತು. ಇದೆಲ್ಲವನ್ನೂ ನೆನೆದು ಸಿಬ್ಬಂದಿ, ಊರಿಗೆ ಹೋಗಿ ಬರ್ತೀನಿ ಅಂತಾ ಹೋದವರು ಬರ್ಲೇ ಇಲ್ಲ ಅಂತಾ ಕಣ್ಣೀರಿಟ್ಟಿದ್ದಾರೆ. ದೇವರಂತ ಬಾಸ್‌ ಕಳೆದುಕೊಂಡು ಸಿಬ್ಬಂದಿ ಆಕ್ರಂದನ ಮುಗಿಲುಮುಟ್ಟಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮುರಬಗಿಯಲ್ಲಿ ಇಂದು ಚಂದ್ರಮ್ ಕುಟುಂಬಸ್ಥರ ಸಾಮೂಹಿಕ ಅಂತ್ಯಕ್ರಿಯೆ ನೆರವೇರಲಿದೆ.

publive-image

ಸಿಬ್ಬಂದಿಗೆ ಆತಂಕವೇಕೆ?
ಭೀಕರ ಅಪಾಘಾತದಲ್ಲಿ ಚಂದ್ರಮ್ ಕುಟುಂಬದ ಎಲ್ಲರೂ ಮೃತಪಟ್ಟಿದ್ದಾರೆ. ಮಡದಿ ಗೌರಾಬಾಯಿ, ಮಗ ಗ್ಯಾನ್, ಪುತ್ರಿ ದೀಕ್ಷಾ ಕೂಡ ಸಾವನ್ನಪ್ಪಿದ್ದಾರೆ. ಸಹೋದರಿ ವಿಜಯಲಕ್ಷ್ಮಿಯೂ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಸಹೋದರ ಮಲ್ಲಿನಾಥ್ ವೈದ್ಯರಾಗಿದ್ದು ಬಿಸಿನೆಸ್‌ನಲ್ಲಿ ಇಂಟ್ರೆಸ್ಟ್ ಇಲ್ಲ. ಇದರಿಂದ ಕಂಪನಿ ನಡೆಸೋದ್ಯಾರು ಅನ್ನೋದು ಸಿಬ್ಬಂದಿಯನ್ನ ಆತಂಕಕ್ಕೆ ತಳ್ಳಿದೆ. ಕಂಪನಿ ನಡೆಸೋದ್ಯಾರು? ಮುಂದೆ ಹೇಗೆ ಎಂಬ ಆತಂಕದಲ್ಲಿ ಸಿಬ್ಬಂದಿ ಕಂಗಾಲಾಗಿದ್ದಾರೆ. ರಜೆ ಇದೆ ಅಂತ ಊರಿಗೆ ಹೋಗುತ್ತಿದ್ದ ಇಡೀ ಕುಟುಂಬಕ್ಕೆ ಕ್ರೂರ ವಿಧಿ ಸಾವನ್ನೋ ಸಜೆ ಕೊಟ್ಟಿದ್ದು ಮಾತ್ರ ಘೋರ ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment