ಹುಡುಗ RCB ಫ್ಯಾನ್, ಹುಡುಗಿ ಯಶ್ ಅಭಿಮಾನಿ; ಡ್ಯಾನ್ಸರ್ ದುರಂತದ ಈ ಸ್ಟೋರಿ ಹೃದಯವಿದ್ರಾವಕ

author-image
admin
ಹುಡುಗ RCB ಫ್ಯಾನ್, ಹುಡುಗಿ ಯಶ್ ಅಭಿಮಾನಿ; ಡ್ಯಾನ್ಸರ್ ದುರಂತದ ಈ ಸ್ಟೋರಿ ಹೃದಯವಿದ್ರಾವಕ
Advertisment
  • ನೆಲಮಂಗಲ ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಡ್ಯಾನ್ಸರ್ಸ್‌!
  • ಕುಣಿಗಲ್​ನಲ್ಲಿ ನಡೆದ ಕಾರ್ಯಕ್ರಮ ಒಂದ್ರಲ್ಲಿ ಭಾಗವಹಿಸಿದ್ದ ಇಬ್ಬರು
  • ಯಮ ಸ್ವರೂಪಿ ಲಾರಿಯಿಂದ ಸ್ನೇಹಿತರ ಕನಸುಗಳೇ ಕಮರಿ ಹೋಗಿದೆ

ಇವರಿಬ್ಬರೂ ಇನ್ನೂ ಬಾಳಿ ಬದುಕಬೇಕಾಗಿದ್ದವರು. ಇಬ್ಬರು ಡ್ಯಾನ್ಸರ್ ಆಗಬೇಕು ಅನ್ನೋ ಕನಸು ಕಟ್ಟಿಕೊಂಡಿದ್ರು. ಹುಡುಗಿ ಯಶ್ ಅಭಿಮಾನಿಯಾಗಿದ್ರೆ, ಹುಡುಗ ಆರ್​ಸಿಬಿಯ ಅಭಿಮಾನಿಯಾಗಿದ್ದ. ಆದ್ರೆ ಕಂಡ ಕನಸು ಈಡೇರುವ ಮುನ್ನವೇ ಭಗವಂತ ಇವರಿಬ್ಬರ ಬಾಳಲ್ಲಿ ಘೋರ ಅನ್ಯಾಯವನ್ನೇ ಮಾಡಿದ್ದಾನೆ. ಯಮ ಸ್ವರೂಪಿ ಲಾರಿಯಿಂದ ಕನಸುಗಳೇ ಕಮರಿ ಹೋಗಿದ್ದು, ಮಕ್ಕಳ ಕಳ್ಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಬದುಕು ಅನ್ನೋದು ಬೊಗಸೆಯೊಳಗಿನ ಹಕ್ಕಿಯಂತೆ. ಹಾರುವ ಪಾರಿವಾಳದಂತೆ. ನಮ್ಮ ಕೈಯಲ್ಲಿರೋ ಹಕ್ಕಿಯನ್ನ ಬಲವಾಗಿ ಅಮುಕಿದ್ರೆ ಅದು ಸತ್ತೆ ಹೋಗುತ್ತೆ. ಹಾಗಂತ ಸಡಿಲ ಬಿಟ್ರೆ ಮತ್ತೆ ಹಾರಿ ಹೋಗುತ್ತೆ. ಅನಿರೀಕ್ಷಿತವಾದ ಅಪಘಾತಗಳು, ಸಾಲ ಸೋಲಗಳು, ನಮ್ಮ ಬಾಳನ್ನ ಛಿದ್ರಗೊಳಿಸಿಬಿಡುತ್ತೆ. ಇಂತಹದ್ದೇ ಬದುಕಿನ ಬಣ್ಣದಾಟಕ್ಕೆ ಅರಳುವ ಬದುಕೇ ಮುಗಿದು ಹೋಗಿದೆ. ಕಂಡ ಕನಸು ಕಮರಿ ಹೋಗಿವೆ.

publive-image

ಡ್ಯಾನ್ಸರ್ ಆಗುವ ಕನಸು ಕಸಿಯಿತು ಯಮರೂಪಿ ಲಾರಿ
ಲೈಫ್​ಗೆ ಗ್ಯಾರಂಟಿ ವಾರಂಟಿ ಏನೂ ಇಲ್ಲ ಅನ್ನೋದಕ್ಕೆ ಸಾಕ್ಷಿಗಳೇನು ಬೇಕಿಲ್ಲ. ಯಾವಾಗ ಹೇಗೆ ಸಾವು ಅನ್ನೋದು ಎರಗುತ್ತೆ. ಜೀವ ಕಸಿಯುತ್ತೆ. ಬದುಕಿನ ಪಯಣಕ್ಕೆ ಅಂತ್ಯ ಹಾಡುತ್ತೆ ಅಂತ ಹೇಳೋದಿಕ್ಕೆ ಆಗಲ್ಲ. ಇವತ್ತು ಅಂತಹದೇ ಒಂದು ಕರುಳು ಮಿಡಿಯವ ಕಣ್ಣೀರ ಕಹಾನಿ ಇದು.

ಅಕ್ಷರಶಃ ಬೆಚ್ಚಿ ಬೀಳಿಸೋ ಆ್ಯಕ್ಸಿಡೆಂಟ್​ ಇದು. ಅಪಘಾತದ ತೀವ್ರತೆಗೆ ಇಬ್ಬರು ಮಾಂಸದ ಮುದ್ದೆಯಾಗಿ ರಸ್ತೆಯಲ್ಲಿ ಬಿದ್ದು ಜೀವ ಕಳೆದುಕೊಂಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಈ ಎರಡು ಜೀವಗಳು ನರಕಯಾತನೆಯನ್ನ ಅನುಭವಿಸಿ ಜೀವ ಬಿಟ್ಟಿವೆ.

ಇಬ್ಬರ ವಯಸ್ಸು 25ರ ಒಳಗೆ. ಈಗಿನ್ನೂ ಬದುಕಿನ ಗತಿಯನ್ನ ಹಿಡಿತಕ್ಕೆ ತಂದುಕೊಳ್ಳವ ಹೊತ್ತಲ್ಲಿ ವಿಧಿ ಬಹುದೊಡ್ಡ ದಾರುಣವನ್ನೇ ಸೃಷ್ಟಿಸಿ ಬಿಟ್ಟಿದ್ದಾನೆ. ಯಮ ಸ್ವರೂಪಿ ಲಾರಿಯಿಂದ ಈ ಇಬ್ಬರ ಜೀವ ಬಲಿಯಾಗಿ ಹೋಗಿದೆ. ಇವರಿಬ್ಬರ ಕನಸು ಆಸೆಗಳ ಬಗ್ಗೆ ಕೇಳ್ಬಿಟ್ರೆ ನಿಮ್ಮ ಕರುಳೇ ಕಿತ್ತಿ ಬರುತ್ತೆ. ಅಂತಾ ದಾರುಣ ಕತೆ ಒಟ್ಟಿಗೆ ಜೀವ ಬಿಟ್ಟ ಈ ಸ್ನೇಹಿತರದ್ದು.

publive-image

ಈ ಫೋಟೋದಲ್ಲಿ ಕಿರುಮಲ್ಲಿಗೆ ನಗೆಯ ಬೀರಿರೋ ಇದೇ ಹುಡುಗಿ ನೆಲಮಂಗಲದಲ್ಲಿ ನಡೆದ ರಣ ಭೀಕರ ಅಪಘಾತದಲ್ಲಿ ಪ್ರಾಣ ಕಳ್ಕೊಂಡಿದ್ದಾಳೆ. ಇವಳ ಗೆಳೆಯ ಪ್ರಜ್ವಲ್​ ಕೂಡ ಪ್ರಾಣ ಬಿಟ್ಟಿದ್ದಾನೆ. ಪ್ರಜ್ವಲ್ ಮತ್ತು ಸಹನಾ ಶೆಟ್ಟಿ ಇಬ್ಬರು ಫ್ರೆಂಡ್ಸ್. ಇಬ್ಬರಿಗೂ ಡ್ಯಾನ್ಸ್ ಅಂದ್ರೆ ಪಂಚಪ್ರಾಣ. ಡ್ಯಾನ್ಸರ್ ಆಗಿರೋ ಕಾರಣಕ್ಕೆ ಸಣ್ಣಪುಟ್ಟ ಇವೆಂಟ್​ಗಳಲ್ಲಿ ಡ್ಯಾನ್ಸ್ ಮಾಡ್ತಿದ್ರು.

ಕುಣಿಗಲ್​ನಲ್ಲಿ ನಡೆದ ಕಾರ್ಯಕ್ರಮ ಒಂದ್ರಲ್ಲಿ ಸಹನಾ ಮತ್ತು ಪ್ರಜ್ವಲ್ ಡ್ಯಾನ್ಸ್ ಕಾರ್ಯಕ್ರಮ ಒಂದನ್ನ ಕೊಟ್ಟಿದ್ರು. ಅದೊಂದು ಮದುವೆ ಇವೆಂಟ್ ಆಗಿತ್ತು. ಮದುವೆ ಸಂಭ್ರಮದಲ್ಲಿ ಖುಷಿ ಖುಷಿಯಾಗಿ ಕುಣಿದು ಸಂಭ್ರಮಿಸಿದ್ದವರ ಪಾಲಿಗೆ ವಿಧಿ ಮಸಣದ ಹಾದಿ ತೋರಿಸ್ತಾನೆ ಅನ್ನೋ ಸಣ್ಣ ಸುಳಿವು ಕೂಡ ಸಿಕ್ಕಿರಲ್ಲಿಲ್ಲ. ಮದುವೆ ಇವೆಂಟ್ ಮುಗಿಸ್ಕೊಂಡು ಇನ್ನೇನು ಬೆಂಗಳೂರಿಗೆ ವಾಪಸ್ ಬರಬೇಕಿತ್ತು. ಅಷ್ಟರಲ್ಲಿ ನೆಲಮಂಗಲದ ಬೈಪಾಸ್ ಬಳಿ ಇವರಿಬ್ಬರು ಬರ್ತಿದ್ದ ಸ್ಕೂಟಿಗೆ ಯಮ ಸ್ವರೂಪಿ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಲಾರಿ ಗುದ್ದಿದ್ದ ರಭಸಕ್ಕೆ ಅಕ್ಷರಶಃ ಇಬ್ಬರು ರಸ್ತೆಗುರುಳಿ ಬಿದ್ದಿದ್ರು.

ಇದನ್ನೂ ಓದಿ: ಕಲಬುರಗಿ ಕೋರ್ಟ್‌ನಲ್ಲಿ ಹಿರಿಯ ನ್ಯಾಯಾಧೀಶರಿಗೆ ಹೃದಯಾಘಾತ.. ಘೋರ ದುರಂತ! 

ಲಾರಿ ಗುದಿದ್ದ ರಭಸಕ್ಕೆ ಅಪ್ಪಚಿಯಾಗಿದ್ರು ಡ್ಯಾನ್ಸರ್ಸ್
ಸ್ಥಳದಲ್ಲೇ ಹೋಗಿತ್ತು ಬಾಳಿ ಬದುಕಬೇಕಿದ್ದವರ ಉಸಿರು 
ಲಾರಿ ಅದೆಂಥಾ ರಭಸದಲ್ಲಿ ಗುದ್ದಿತ್ತು ಅಂದ್ರೆ ಸಹನಾ ಮತ್ತು ಪ್ರಜ್ವಲ್ ಆ್ಯಕ್ಸಿಡೆಂಟ್​ನಲ್ಲಿ ಅಕ್ಷರಶಃ ಅಪ್ಪಚ್ಚಿಯಾಗಿ ಹೋಗಿದ್ರು. ದೇಹದ ಮಾಂಸ ಕೂಡ ಛಿದ್ರ ಛಿದ್ರವಾಗಿ ಹೋಗಿತ್ತು. ಬಾಳಿ ಬದುಕಬೇಕಾಗಿದ್ದ ಇಬ್ಬರು ಸ್ಥಳದಲ್ಲೇ ನರಳಿ, ನರಳಿ ಪ್ರಾಣ ಬಿಟ್ಟಿದ್ರು. ಭಗವಂತ ಇಬ್ಬರ ಬದುಕನ್ನೇ ಕಸಿದು ಬಿಟ್ಟಿದ್ದ.

ಇದು ಸಹನಾ ಶೆಟ್ಟಿ... ಅದೆಷ್ಟು ಮುದ್ದಾಗಿದ್ದಾಳೆ ನೋಡಿ. ಚಿಟ್ಟೆಯಂತೆ ಹಾರುವ ಕನಸು ಕಂಡಿದ್ದಳು. ಆದ್ರೆ ಬದುಕಿನ ಅರ್ಧದಷ್ಟು ಆಯಸ್ಸು ಮೀರುವ ಮುನ್ನವೇ ಸಹನಾ ಶೆಟ್ಟಿ ಬದುಕು ದಾರುಣವಾಗಿ ಅಂತ್ಯ ಕಂಡಿದೆ. ಸಹಾನಾ ನವಿಲನ್ನೂ ನಾಚುವಂತೆ ಕುಣಿತಿದ್ಳು. ದೊಡ್ಡ ಡ್ಯಾನ್ಸರ್ ಆಗ್ಬೇಕು. ಅಪ್ಪ ಅಮ್ಮನಿಗೆ ನೆರವಾಗ್ಬೇಕು ಅನ್ನೋ ನೂರಾರು ಕನಸುಗಳನ್ನ ಸಹನಾ ಕಟ್ಕೊಂಡಿದ್ಳು. ಆದ್ರೆ ವಿಧಿ ಮಾಡಿದ ಮೋಸಕ್ಕೆ ಸಹನಾಳ ಎಲ್ಲಾ ಕನಸುಗಳು ನುಚ್ಚು ನೂರಾಗಿವೆ. ಯಮ ಸ್ವರೂಪಿ ಲಾರಿ ಅಟ್ಟಹಾಸಕ್ಕೆ ಸಹನಾ ಅನ್ನೋ ಸೃಜನ ಸುಂದರಿಯ ಬದುಕಿನ ಬಂಡಿಯ ಪಯಣವೇ ಮುಗಿದು ಹೋಗಿದೆ.

publive-image

ಮುದ್ದು ಮಗಳ ದಾರುಣ ಅಂತ್ಯ.. ಮುಗಿಲು ಮುಟ್ಟಿದ ಆಕ್ರಂದನ
ಎದೆಯೆತ್ತರಕ್ಕೆ ಬೆಳೆದ ಮಕ್ಕಳು ಕಣ್ಮುಂದೆಯೇ ಜೀವ ಬಿಟ್ರೆ ಹೆತ್ತ ಕರುಳಗಳಿಗೆ ಅದೆಷ್ಟು ಸಂಕಟ ಆಗ್ಬೇಡ ಹೇಳಿ. ಸಹನಾ ಮತ್ತು ಪ್ರಜ್ವಲ್ ಮನೆಯಲ್ಲೂ ಅಕ್ಷರಶಃ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಜ್ವಲ್, ತಾಯಿಗೆ ಫ್ರೆಂಡ್ ಮದುವೆ ಇದೆ ಅಂತ ಹೇಳಿ ಹೋಗಿದ್ದ.. ಅಮ್ಮನಿಗೆ ಅದೇ ಕೊನೆ ಕಾಲ್ ಅದಾದ ಮೇಲೆ ಮಗನ ಸಾವಿನ ಸುದ್ಧಿಯೇ ತಾಯಿ ಕಿವಿಗಪ್ಪಳಿಸಿದೆ. ಹೆತ್ತ ಕರುಳಿಗೆ ಸಿಡಿಲೇ ಬಡಿದಂತಾಗಿದೆ.

ಆರತಿಗೊಂದು ಕೀರ್ತಿಗೊಂದು ಮುದ್ದಾದ ಮಕ್ಕಳಿದ್ರು. ಪ್ರಜ್ವಲ್ ಡ್ಯಾನ್ಸ್ ಪ್ರಾಕ್ಟಿಸ್ ಮಾಡ್ಕೊಂಡು ಡ್ಯಾನ್ಸರ್ ಆಗ್ಬೇಕು ಅನ್ನೋ ಕನಸು ಕಟ್ಕೊಂಡಿದ್ದ. ಈಗ ನೋಡಿದ್ರೆ ಅವನೇ ಇಲ್ಲ ನಮ್ಮ ಜೊತೆ ಅಂತ ಹೆತ್ತ ಕರುಳು ಕಣ್ಣೀರು ಸುರಿಸ್ತಿದೆ. ಈ ತಾಯಿಯನ್ನ ಸಮಾಧಾನ ಮಾಡೋಕೆ ಆ ದೇವರಿಂದಲೂ ಸಾಧ್ಯವಿಲ್ವೇನೋ. ವಿಧಿ ನಿಜಕ್ಕೂ ಅದೆಂಥಾ ಕ್ರೂರಿ ಅಂತ ಅನಿಸಲ್ವಾ. ಅತ್ತ ಸಹನಾ ಮನೆಯಲ್ಲೂ ಕಣ್ಣೀರಿನ ಕೋಡಿಯೇ ಹರಿಯುತ್ತಿದೆ. ಮುದ್ದು ಮಗಳ ಕಳ್ಕೊಂಡು ನೋವು ಇಡೀ ಕುಟುಂಬವನ್ನೆ ಶೋಕ ಸಾಗರದಲ್ಲಿ ಮುಳುಗಿಸಿದೆ. ಮಗಳ ಬಗ್ಗೆ ಆ ಹೆತ್ತ ಜೀವಗಳು ಅದೆಷ್ಟು ಕನಸು ಕಟ್ಕೊಂಡಿದ್ವು. ಅದೆಷ್ಟು ಆಸೆ ಇಟ್ಕೊಂಡಿದ್ವು ಗೊತ್ತಿಲ್ಲ.. ಆದ್ರೆ ಕಂಡ ಕನಸು ಆಸೆ ಎಲ್ಲವೂ ಛಿದ್ರ ಛಿದ್ರಗೊಂಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment