ಘೋರ ದುರಂತ.. ಪತ್ನಿ, ಮಗನಿಂದಲೇ ಜೀವ ಕಳೆದುಕೊಂಡ ಅಪ್ಪ; ಅಸಲಿಗೆ ಆಗಿದ್ದೇನು?

author-image
admin
Updated On
ಘೋರ ದುರಂತ.. ಪತ್ನಿ, ಮಗನಿಂದಲೇ ಜೀವ ಕಳೆದುಕೊಂಡ ಅಪ್ಪ; ಅಸಲಿಗೆ ಆಗಿದ್ದೇನು?
Advertisment
  • ಪತ್ನಿ ಹಾಗೂ ಮಗನಿಂದಲೇ ದಾರುಣವಾಗಿ ಸಾವನ್ನಪ್ಪಿದ ವ್ಯಕ್ತಿ
  • ಗಂಡನ ಗಲಾಟೆಗೆ ರೋಸಿ ಹೋದ ಹೆಂಡತಿ ಮಾಡಿದ್ದೇನು?
  • ಪತ್ನಿ ಹಾಗೂ 17 ವರ್ಷದ ಅಪ್ರಾಪ್ತ ಮಗನನ್ನು ಬಂಧಿಸಿದ ಪೊಲೀಸರು

ನೆಲಮಂಗಲ: ಗಂಡ- ಹೆಂಡತಿ ಮಧ್ಯೆ ನೂರೆಂಟು ಕಾರಣಕ್ಕೆ ಜಗಳಗಳು ನಡೆಯುತ್ತವೆ. ಜಗಳವೇ ನಡೆಯದ ಮನೆಗಳು ಸಿಗುವುದು ನಿಜಕ್ಕೂ ಅಪರೂಪ. ನಾಲ್ಕು ಗೋಡೆಯ ಮಧ್ಯೆ ನಡೆಯೋ ಜಗಳಗಳು ಅಲ್ಲೇ ಬಗೆಹರಿದರೆ ಒಳ್ಳೆಯದು. ಆದರೆ ಸಂಸಾರದ ಚೌಕಟ್ಟನ್ನು ಮೀರಿ ಆಗುವ ಗಲಾಟೆಗಳು ಅನಾಹುತ ಮತ್ತು ದುರಂತಕ್ಕೆ ಕಾರಣವಾಗುತ್ತವೆ.

ಪತ್ನಿ ಹಾಗೂ ಮಗನಿಂದಲೇ ವ್ಯಕ್ತಿಯೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಡೆದಿದೆ. ಕುಡಿದು ಬಂದ ಈ ವ್ಯಕ್ತಿ ಮನೆಯಲ್ಲಿ ಪತ್ನಿ ಹಾಗೂ ಮಗನ ಮೇಲೆ ಹಲ್ಲೆಗೆ ಮುಂದಾಗಿದ್ದ. ಗಂಡನ ಗಲಾಟೆಗೆ ರೋಸಿ ಹೋದ ಹೆಂಡತಿ, ಮಗ ಬುದ್ಧಿ ಕಲಿಸಲು ಹೋಗಿ ಪ್ರಾಣವೇ ಕಳೆದುಕೊಳ್ಳುವಂತೆ ಮಾಡಿದ್ದಾರೆ.

ಇದನ್ನೂ ಓದಿ: ‘ಮಾಜಿ CM ಹನಿಟ್ರ್ಯಾಪ್‌, ಸ್ಟಿಂಗ್ ಆಗಿರೋದು ನಿಜ’- ಶಾಸಕ ಮುನಿರತ್ನ ವಿರುದ್ಧ ಸಂತ್ರಸ್ತೆ ಸ್ಫೋಟಕ ಆರೋಪ 

ಕಳೆದ ಅಕ್ಟೋಬರ್ 7ರ ರಾತ್ರಿ ಮೃತ ಮುನಿರಾಜು ಕುಡಿದು ಮನೆಗೆ ಬಂದಿದ್ದಾನೆ. ಈ ವೇಳೆ ಗಲಾಟೆ ಮಾಡಿದ್ದು, ತಾಯಿ ಹಾಗೂ ಮಗ ದೊಣ್ಣೆಯಿಂದ ಮುನಿರಾಜು ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಳಿಕ ಕುಟುಂಬಸ್ಥರು ಮುನಿರಾಜು ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಮುನಿರಾಜು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಮೃತ ಮುನಿರಾಜು ಪತ್ನಿ ಗೀತಾ ಹಾಗೂ 17 ವರ್ಷದ ಅಪ್ರಾಪ್ತ ಮಗನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment