ನೇಪಾಳದಲ್ಲೇಕೆ ಪದೇ ಪದೇ ವಿಮಾನ ದುರಂತಗಳು ಸಂಭವಿಸುತ್ತವೆ
24 ವರ್ಷಗಳಲ್ಲಿ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡವರೆಷ್ಟು?
ನೇಪಾಳಕ್ಕಿದೆ ವಿಮಾನ ದುರಂತಗಳ ಸರಮಾಲೆಯ ಕರಾಳ ಇತಿಹಾಸ
ಕಠ್ಮಂಡು: ನೇಪಾಳದಲ್ಲಿ ಮತ್ತೊಂದು ಭೀಕರ ವಿಮಾನ ದುರಂತ ನಡೆದು ಹೋಗಿದೆ. ಇಂದು ನಡೆದ ಭೀಕರ ವಿಮಾನ ಅಪಘಾತದಲ್ಲಿ ಸುಮಾರು 19 ಜನರು ಮೃತಪಟ್ಟಿರುವ ಘಟನೆ ಭಯಾನಕವಾಗಿದೆ. ಆದ್ರೆ ನೇಪಾಳ ಇಂತಹ ಹತ್ತಾರು ಅಪಘಾತಗಳನ್ನು ಪದೇ ಪದೇ ಕಾಣುವ ನತದೃಷ್ಟ ದೇಶ.
ಇಲ್ಲಿ ವಿಮಾನ ಅಪಘಾತದಂತ ದುರಂತಗಳು ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ನಡೆದು ಹೋಗುತ್ತವೆ. ಕಳೆದ ಎರಡು ವರ್ಷಗಳ ಹಿಂದಷ್ಟೇ ಭಾರತೀಯನೊಬ್ಬ ಇದೇ ನೇಪಾಳದ ವಿಮಾನವೊಂದರಲ್ಲಿ ಕುಳಿತು ಲೈವ್ ಮಾಡುವಾಗಲೇ ಪ್ಲೇನ್ ಕ್ಯಾಶ್ ಆಗಿದ್ದು ದೊಡ್ಡ ಸುದ್ದಿಯಾಗಿತ್ತು. ಹಾಗಿದ್ರೆ ಯಾಕೆ ನೇಪಾಳದಲ್ಲಿ ಪದೇ ಪದೇ ಈ ತರದ ದುರಂತಗಳು ನಡೆಯುತ್ತವೆ. ಕಳೆದ 24 ವರ್ಷಗಳಲ್ಲಿ ನಡೆದ ವಿಮಾನ ಅಪಘಾತಗಳೆಷ್ಟು ಅನ್ನೋದನ್ನ ನೋಡ್ತಾ ಹೋಗುವುದಾದ್ರೆ ಅಚ್ಚರಿಯ ಮಾಹಿತಿಗಳು ಆಚೆ ಬರುತ್ತವೆ.
ಇದನ್ನೂ ಓದಿ: VIDEO: ಕಣ್ಣೆದುರೇ ವಿಮಾನ ಪತನ.. 18 ಮಂದಿ ಭಸ್ಮ.. ಬದುಕಿ ಬಂದ ಪೈಲಟ್
ಮೇ 2022
ಕಳೆದ ಮೇ 2022ರಲ್ಲಿ ಇದೇ ನೇಪಾಳದಲ್ಲಿ ದೊಡ್ಡ ವಿಮಾನ ದುರಂತವೊಂದು ನಡೆದು ಹೋಗಿತ್ತು. ನಾಲ್ವರು ಭಾರತೀಯರನ್ನು ಸೇರಿ 22 ಪ್ರಯಾಣಿಕರನ್ನು ಹೊತ್ತುಕೊಂಡು ಹೊರಟಿದ್ದ ತಾರಾ ಏರ್ಫ್ಲೈಟ್ ಮಸ್ತಂಗ್ ಜಿಲ್ಲೆಯ ಬಳಿ ಭೀಕರವಾಗಿ ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಈ ಭೀಕರ ದುರಂತದಲ್ಲಿ ಭೀಕರ ಅಂತ್ಯ ಕಂಡಿದ್ದರು. ಹವಾಮಾನದ ವೈಪರಿತ್ಯದಿಂದಾಗಿ ವಿಮಾನ ದುರಂತದಲ್ಲಿ ಮಡಿದ ಪ್ರಯಾಣಿಕರ ಮೃತದೇಹವನ್ನು ಪತ್ತೆ ಮಾಡಲು ಹಾಗೂ ಕುಟುಂಬಗಳಿಗೆ ಹಸ್ತಾಂತರಿಸಲು ಮೂರು ದಿನ ಬೇಕಾಯಿತು.
ಫೆಬ್ರುವರಿ: 2019:
ಫೆಬ್ರುವರಿ 2019ರಲ್ಲಿ ನಡೆದ ಭೀಕರ ಹೆಲಿಕಾಪ್ಟರ್ ಪತನದಲ್ಲಿ ನೇಪಾಳದ ಅಂದಿನ ಪ್ರವಾಸೋದ್ಯಮ ಸಚಿವ ರವೀಂದ್ರ ಅಧಿಕಾರಿ ಸೇರಿ ಒಟ್ಟು 7 ಜನರು ಮೃತಪಟ್ಟಿದ್ದರು. ಅತ್ಯಂತ ಕಳಪೆ ಹವಾಮಾನದ ಸ್ಥಿತಿಯಿರುವಾಗ ಕಠ್ಮಂಡುವಿನತ್ತ ತೆರಳಿದ್ದ ಹೆಲಿಕಾಪ್ಟರ್ ಬೆಟ್ಟ-ಗುಡ್ಡಗಳ ಪ್ರದೇಶದಲ್ಲಿ ಈ ಹೆಲಿಕಾಪ್ಟರ್ ಪತನಗೊಂಡಿತ್ತು. ಹೆಲಿಕಾಪ್ಟರ್ ಆಪರೇಷನ್ ಮಾನದಂಡಗಳನ್ನ ಉಲ್ಲಂಘಿಸಿದ್ದು ಹಾಗೂ ವಿಪರೀತ ಭಾರವನ್ನು ಹೊತ್ತುಕೊಂಡು ಹೋಗಿದ್ದು ವ್ಯಕ್ತಿಗಳನ್ನು ಹೆಲಿಕಾಪ್ಟರ್ನಲ್ಲಿ ಹೇಗೆ ಬೇಕಾದ ಹಾಗೆ ಕೂರಲು ಬಿಟ್ಟಿದ್ದು ಈ ವಿಮಾನ ದುರಂತಕ್ಕೆ ಕಾರಣ ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು.
ಇದನ್ನೂ ಓದಿ: ಅಬಾರ್ಷನ್ ವೇಳೆ ಪ್ರಿಯತಮೆ ಸಾವು.. ಆಕೆಯ ಶವದ ಜೊತೆ ಇಬ್ಬರು ಮುದ್ದಾದ ಮಕ್ಕಳನ್ನೂ ನದಿಗೆ ಎಸೆದು ಸಾಯಿಸಿದ..
ಮಾರ್ಚ್ 2018
ಯುಎಸ್ ಬಾಂಗ್ಲಾ ಏರ್ಲೈನ್ಸ್ ವಿಮಾನ ಢಾಕಾದಿಂದ ಹೊರಟು ಕಠ್ಮಂಡುವಿನ ತ್ರಿಭುವನ ಏರ್ಪೋರ್ಟ್ನಲ್ಲಿ ಮಾರ್ಚ್ 2018ರಂದು ಭೀಕರವಾಗಿ ಪತನಗೊಂಡಿತ್ತು. ಈ ದುರ್ಘಟನೆಯಲ್ಲಿ ಸುಮಾರು 49 ಮಂದಿ ಪ್ರಯಾಣಿಕರು ಅಸುನೀಗಿದ್ದರು. ರನ್ವೇ ನಲ್ಲಿ ಟೇಕ್ಆಫ್ ಬಳಿಕ ಪುಟ್ಬಾಲ್ ಮೈದಾನದಲ್ಲಿ ತಿರುತಿರುಗಿ ಬಿದ್ದ ಬಿದ್ದ ಈ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡು ಪ್ರಯಾಣಿಕರು ಸುಟ್ಟು ಕರಕಲಾಗಿದ್ದರು. ಪೈಲೆಟ್ನ ನಿರ್ಲಕ್ಷ್ಯವೇ ವಿಮಾನ ದುರಂತಕ್ಕೆ ಕರಾಣ ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು.
ಫೆಬ್ರವರಿ 2016
ಏರ್ ಕಸ್ತಮಂಡಪ್ ಫ್ಲೈಟ್ ನೇಪಾಳದ ಕಾಲಿಕೋಟ್ ಎಂಬ ಜಿಲ್ಲೆಯಲ್ಲಿ ಭೀಕರವಾಗಿ ಅಪಘಾತಕ್ಕೀಡಾಗಿತ್ತು. ಪರಿಣಾಮವಾಗಿ ಇಬ್ಬರು ವಿಮಾನ ಸಿಬ್ಬಂದಿ ಮೃತಪಟ್ಟರೆ 9 ಜನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರು. ಹೀಗೆ ಹಲವಾರು ವಿಮಾನ ದುರಂತಗಳನ್ನು ಕಂಡಿದೆ ನೇಪಾಳ ಎಂಬ ನತದೃಷ್ಟ ದೇಶ.
⦁ 2015 ಮೇ ನಲ್ಲಿ ನೇಪಾಳದ ಚಾರಿಕೋಟ್ನಲ್ಲಿ ಹೆಲಿಕಾಪ್ಟರ್ ಪತನ ಐದು ಜನ ಅಮೆರಿಕಾದ ನೌಕಾಪಡೆ ಸೈನಿಕರು ಸೇರಿ ಇಬ್ಬರು ನೇಪಾಳಿ ಸೈನಿಕರ ಸಾವು
⦁ ಮೇ 2012 ಜೋಮ್ಸೋಮ್ ಏರ್ಪೋರ್ಟ್ನಲ್ಲಿ ಡೋರ್ನಿಯರ್ ಏರ್ಕ್ರಾಫ್ಟ್ ಪತನ 15 ಜನರ ಸಾವು
⦁ ಸೆಪ್ಟೆಂಬರ್ 2011ರಲ್ಲಿ ಮೌಂಟ್ ಎವರೆಸ್ಟ್ ಬಳಿ ವಿಮಾನ ಪತನ 10 ಜನ ಭಾರತೀಯರು ಸೇರಿ 19 ಮಂದಿ ಪ್ರಯಾಣಿಕರ ಸಾವು
⦁ 2006 ಜೂನ್ನಲ್ಲಿ ಹೆಲಿಕಾಪ್ಟರ್ ಪತನ, ಹೆಲಿಕಾಪ್ಟರ್ನಲ್ಲಿದ್ದ 24 ಜನರ ಸಾವು
⦁ 2001ರಲ್ಲಿ ಪಶ್ಚಿಮ ನೇಪಾಳದಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ರಾಜಕುಮಾರಿ ಪ್ರಿಕ್ಷಯಾ ಸೇರಿ ಐವರ ದುರ್ಮರಣ
ಒಟ್ಟಾರೆ 2000ನೇ ಇಸ್ವಿಯಿಂದ ಇಲ್ಲಿಯವರೆಗೂ ಅಂದ್ರೆ 24 ವರ್ಷಗಳಲ್ಲಿ ನೇಪಾಳದಲ್ಲಿ 12 ನಡೆದ ವಿಮಾನ ದುರಂತಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಗಳು ಪ್ರಾಣವನ್ನು ಬಿಟ್ಟಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ ನೇಪಾಳದಲ್ಲಿರುವ ಬೆಟ್ಟಗುಡ್ಡಗಳ ಭೂಪ್ರದೇಶ, ವಿಮಾನ ಹಾರಾಟಕ್ಕೆ ಪೂರಕವಲ್ಲದ ಹವಾಮಾನ ವೈಪರೀತ್ಯ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ