newsfirstkannada.com

ಬುದ್ಧಿ ಕಲಿಯದ ನೇಪಾಳ.. ಭಾರತದ ಭೂಪ್ರದೇಶವನ್ನು 100 ರೂಪಾಯಿ ನೋಟಿನಲ್ಲಿ ಮುದ್ರಿಸಲು ನಿರ್ಧಾರ

Share :

Published May 5, 2024 at 1:41pm

    100 ರೂಪಾಯಿ ನೋಟನ್ನು ಮುದ್ರಿಸಲು ಮುಂದಾದ ನೇಪಾಳ

    ಭಾರತದ ಮೂರು ಗಡಿ ಪ್ರದೇಶಗಳ ನಕ್ಷೆಯನ್ನು ತೋರಿಸಲು ನಿರ್ಧಾರ

    ನೋಟಿನಲ್ಲಿ ಲಿಪುರೇಖ್​, ಲಿಂಪಿಯಾಧುರಾ, ಕಾಲಾಪಾನಿ ಫೋಟೋ

ನೇಪಾಳ ಹೊಸ ಖ್ಯಾತೆ ತೆಗೆದಿದೆ. 100 ರೂಪಾಯಿ ನೋಟನ್ನು ಮುದ್ರಿಸಲು ಮುಂದಾದ ನೆರೆಯ ದೇಶ ಅದರಲ್ಲಿ ಭಾರತದ ಜೊತೆಗಿನ ವಿವಾದಿತ ಪ್ರದೇಶವನ್ನು ಮುದ್ರಿಸಲು ಮುಂದಾಗಿದೆ.

ಭಾರತದ ಮೂರು ಗಡಿ ಪ್ರದೇಶಗಳಾದ ಲಿಪುರೇಖ್​, ಲಿಂಪಿಯಾಧುರಾ, ಕಾಲಾಪಾನಿಯನ್ನು ನೇಪಾಳ ತನ್ನ ನೋಟಿನಲ್ಲಿ ನಕ್ಷೆಯನ್ನು ಮುದ್ರಿಸಲು ನಿರ್ಧರಿಸಿದೆ. ಈ ಬಗ್ಗೆ ಶುಕ್ರವಾರ ಮಾಹಿತಿ ಹೊರಡಿಸಿದೆ.

ನೇಪಾಳ ಪ್ರಧಾನಿ ಪುಷ್ಪಕಮಲ್​ ದಹಾಲ್​ ಪ್ರಚಂಡ ಅವರ ಅಧ್ಯಕ್ಷತೆಯಲ್ಲಿ ನೆರೆಯ ದೇಶ ನೋಟಿನಲ್ಲಿ ನಕ್ಷೆಯನ್ನು ಪ್ರಕಟಿಸಲು ನಿರ್ಧರಿಸಿದೆ. ಈ ಬಗ್ಗೆ ಸರ್ಕಾರದ ವಕ್ತಾರೆ ರೇಖಾ ಶರ್ಮಾ, 100 ರೂಪಾಯಿ ನೋಟಿನಲ್ಲಿ ಲಿಪುರೇಖ್​, ಲಿಂಪಿಯಾಧುರಾ, ಕಾಲಾಪಾನಿ ನಕ್ಷೆಯನ್ನು ತೋರಿಸಲಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಂದು ಲೀಟರ್​ ಹಾಲಿನ ಬೆಲೆ 210, ಒಂದು ಕೆಜಿ ಕೋಳಿ ಬೆಲೆ 780.. ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿ ಪಾಕ್​

ಜೂನ್​18,2020ರಲ್ಲಿ ನೇಪಾಳವು ಸಂವಿಧಾನವನ್ನ ತಿದ್ದುಪಡಿ ಮಾಡುವ ಮೂಲಕ ತನ್ನ ಗಡಿಭಾಗದ ಲಿಪುರೇಖ್​, ಲಿಂಪಿಯಾಧುರಾ, ಕಾಲಾಪಾನಿಯನ್ನು ಸಂಯೋಜಿಸುವ ಮೂಲಕ ರಾಜಕೀಯ ನಕ್ಷೆಯಲ್ಲಿ ನವೀಕರಿಸುವ ಕಾರ್ಯವನ್ನು ಪೂರ್ಣಗೊಳಿಸಿತು. ಆದರೆ ಭಾರತವ ಇದನ್ನು ‘ಏಕಪಕ್ಷೀಯ ಕಾರ್ಯ’ ಎಂದು ಕರೆಯಿತಲ್ಲದೆ, ತೀವ್ರವಾಗಿ ಪ್ರತಿಕ್ರಿಯಿತು. ಆದರೀಗ ಮತ್ತೆ ಖ್ಯಾತೆ ತೆಗೆಯುವ ಮೂಲಕ ತಮ್ಮ ದೇಶದ ನೋಟಿನಲ್ಲಿ ವಿವಾದಿತ ಭೂಪ್ರದೇಶದ ನಕ್ಷೆಯನ್ನು ಚಿತ್ರಿಸಲು ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬುದ್ಧಿ ಕಲಿಯದ ನೇಪಾಳ.. ಭಾರತದ ಭೂಪ್ರದೇಶವನ್ನು 100 ರೂಪಾಯಿ ನೋಟಿನಲ್ಲಿ ಮುದ್ರಿಸಲು ನಿರ್ಧಾರ

https://newsfirstlive.com/wp-content/uploads/2024/05/Nepal.jpg

Load More