newsfirstkannada.com

ಮದುವೆಯಾಗು ಎಂದು ಒತ್ತಾಯ.. ಯುವತಿಯನ್ನು ಕೊಂದು ಕಾಲ್ಕಿತ್ತಿದ್ದ ಲೆಫ್ಟಿನೆಂಟ್​​ ಕರ್ನಲ್​ ಅರೆಸ್ಟ್​

Share :

Published September 12, 2023 at 12:39pm

Update September 12, 2023 at 12:40pm

  ಯುವತಿಯನ್ನು ಕೊಂದ ವಿವಾಹಿತ ಸೇನಾಧಿಕಾರಿ ಅರೆಸ್ಟ್​

  ಸಿರ್ವಾಲ್​ ಗಡ್ ನಿರ್ಜನ​ ಪ್ರದೇಶದಲ್ಲಿ ಸಿಕ್ತು ಯುವತಿಯ ಶವ

  ತಲೆಗೆ ಸುತ್ತಿಗೆಯಿಂದ ಹೊಡೆದು ಯುವತಿಯನ್ನು ಹತ್ಯೆ ಮಾಡಿದ ಸೇನಾಧಿಕಾರಿ

ಡೆಹ್ರಾಡೂನ್​: ವಿವಾಹಿತ ಸೇನಾಧಿಕಾರಿಯೊಬ್ಬ ಯುವತಿಯನ್ನು ಕೊಂದ ಘೋರ ಘಟನೆ ಪಚ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಬೆಳಕಿಗೆ ಬಂದಿದೆ. ಶ್ರೇಯಾ ಶರ್ಮಾ ಎಂಬಾಕೆ ಲೆಫ್ಟಿನೆಂಟ್​​ ಕರ್ನಲ್ ರಾಮೆಂದು ಉಪಾಧ್ಯಾಯ ಕೈಯಾರೆ ಕೊಲೆಯಾಗಿದ್ದಾಳೆ.

ನೇಪಾಲ ಮೂಲದ ಶ್ರೇಯಾ ಶರ್ಮಾ ತನ್ನನ್ನು ಮದುವೆಯಾಗು ಎಂದು ರಾಮೆಂದು ಉಪಾಧ್ಯಾಯನನ್ನು ಒತ್ತಾಯಿಸಿದ್ದಾಳೆ. ಈ ಕಾರಣಕ್ಕೆ ಕೋಪಗೊಂಡು ಆಕೆಯನ್ನು​ ಹತ್ಯೆಗೈದಿದ್ದಾನೆ. ಯುವತಿಯ ಶವ ಸಿರ್ವಾಲ್​ ಗಡ್​ ಪ್ರದೇಶದಲ್ಲಿ ಸಿಕ್ಕಿದೆ.

ರಾಮೆಂದು ಉಪಾಧ್ಯಾಯ ಕ್ಲೆಮೆಂಟ್​​ ಟೌನ್​​ ಕಂಟೋನ್ಮೆಂಟ್​​ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದನು. ಹೀಗಿರುವಾಗ ಯುವತಿಯ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದನು. ಕೊನೆಗೆ ಆ ಯುವತಿ ತನ್ನನ್ನು ವಿವಾಹವಾಗುವಂತೆ ಒತ್ತಡ ಹೇರಿದ್ದಾಳೆ. ಹೀಗಾಗಿ ಆಕೆಯನ್ನು ರಾಮೆಂದು ಹತ್ಯೆ ಮಾಡಿದ್ದಾನೆ.

ಶ್ರೇಯಾ ಶರ್ಮ ಮತ್ತು ರಾಮೆಂದು ಉಪಾಧ್ಯಾಯಗೆ ಸಿಲಿಗುರಿಯ ಡ್ಯಾನ್ಸ್​ ಬಾರ್​ನಲ್ಲಿ ಭೇಟಿಯಾಗಿ ಪರಿಚಯವಾಗುತ್ತದೆ. ಮೂರು ವರ್ಷಗಳ ಕಾಲ ಇವರ ಸಂಬಂಧ ಮುಂದುವರೆಯುತ್ತದೆ. ಬಳಿಕ ರಾಮೆಂದು ಉಪಾಧ್ಯಾಯ ಡೆಹ್ರಾಡೂನ್​ಗೆ ವರ್ಗಾವಣೆಯಾಗುತ್ತದೆ. ಆಕೆಯನ್ನು ಕೂಡ ರಾಮೆಂದು ಉಪಾಧ್ಯಾಯ ಡೆಹ್ರಾಡೂನ್​ಗೆ ಕರೆಸಿಕೊಳ್ಳುತ್ತಾನೆ. ಬಾಡಿಗೆ ಮನೆಯಲ್ಲಿ ಇರಿಸಿಕೊಳ್ಳುತ್ತಾನೆ.

ಶನಿವಾರದಂದು ಇಬ್ಬರು ರಾಜ್​ಪುರದ ರಸ್ತೆ ಕ್ಲಬ್​ನಲ್ಲಿ ಮದ್ಯ ಸೇವಿಸುತ್ತಾರೆ. ಬಳಿಕ ಲಾಂಗ್​ ಡ್ರೈವ್​ ಹೋಗುತ್ತಾರೆ. ಥಾನೋ ರಸ್ತೆಯ ನಿರ್ಜನ ಪ್ರದೇಶದ ಬಳಿಕ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡುತ್ತಾನೆ. ಬಳಿಕ ಶವವನ್ನು ಎಸೆದು ಓಡಿ ಹೋಗುತ್ತಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆಯಾಗು ಎಂದು ಒತ್ತಾಯ.. ಯುವತಿಯನ್ನು ಕೊಂದು ಕಾಲ್ಕಿತ್ತಿದ್ದ ಲೆಫ್ಟಿನೆಂಟ್​​ ಕರ್ನಲ್​ ಅರೆಸ್ಟ್​

https://newsfirstlive.com/wp-content/uploads/2023/09/Army.jpg

Load More