/newsfirstlive-kannada/media/post_attachments/wp-content/uploads/2023/09/NewBornBaby.jpg)
ಭಾರತ ಸೇರಿದಂತೆ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚು ಮಾರಾಟವಾಗುತ್ತಿರುವ ನೆಸ್ಲೆಯ ಬೇಬಿ-ಫುಡ್ ಬ್ರಾಂಡ್ಗಳಲ್ಲಿ (baby-food brands) ಸಕ್ಕರೆ ಪ್ರಮಾಣ ಹೆಚ್ಚಿರೋದು ದೃಢವಾಗಿದೆ. ಆಘಾತಕಾರಿ ವಿಚಾರ ಏನೆಂದರೆ, ಬಡ ಹಾಗೂ ಅಭಿವೃದ್ಧಿ ರಾಷ್ಟ್ರಗಳಲ್ಲಿ ನೆಸ್ಲೆ ಮಾರಾಟ ಮಾಡುತ್ತಿರುವ ಶಿಶುಗಳ ಫುಡ್ನಲ್ಲಿ ಮಾತ್ರ ಸಕ್ಕರೆ ಅಂಶ ಪತ್ತೆಯಾಗಿದೆ. ಆದರೆ ಬ್ರಿಟನ್, ಜರ್ಮನಿ, ಸ್ವಿಟ್ಜರ್ಲೆಂಡ್, ಅಮೆರಿಕ ಸೇರಿಂದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಾರಾಟವಾಗ್ತಿರುವ ಬ್ರ್ಯಾಂಡ್ಗಳಲ್ಲಿ ಸಕ್ಕರೆ ಇಲ್ಲದೇ ತನ್ನ ಪ್ರಾಡೆಕ್ಟ್ಗಳನ್ನು ಮಾರಾಟ ಮಾಡುತ್ತಿದೆರೋದು Public Eye ನಡೆಸಿದ ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿದೆ.
ಸಕ್ಕರೆ ಅಂಶದ ಬಗ್ಗೆ ಮಾಹಿತಿಯೇ ಇಲ್ಲ
ಈ ಮೂಲಕ ವಿಶ್ವದ ಅತಿದೊಡ್ಡ ಗ್ರಾಹಕ ಉತ್ಪನ್ನಗಳ ಕಂಪನಿ, ತನ್ನ ಆಹಾರ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದಲ್ಲಿ ನಿಯಮ ಉಲ್ಲಂಘಿಸಿದ ಆರೋಪ ಹೊತ್ತಿದೆ. ಶಿಶುಗಳಿಗಾಗಿ ಒದಗಿಸುವ ಸೆರೆಲಾಕ್ನಂತಹ ಉತ್ಪನ್ನಗಳಲ್ಲಿ ಸಕ್ಕರೆ ಮತ್ತು ಜೇನುತುಪ್ಪ ಸೇರಿಸಿರುವುದು ಕಂಡುಬಂದಿದೆ. ಭಾರತದಲ್ಲಿ ಮಾರಾಟವಾಗುವ ನೆಸ್ಲೆಯ ಮಕ್ಕಳ ಉತ್ಪನ್ನಗಳ ಪ್ರತಿ ಸೇವೆಯಲ್ಲಿ ಸುಮಾರು 3 ಗ್ರಾಂ ಸಕ್ಕರೆ ಅಂಶ ಇದೆ. ಹೀಗಿದ್ದೂ ಪ್ಯಾಕೆಟ್‌ನಲ್ಲಿ ಸಕ್ಕರೆ ಪ್ರಮಾಣದ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ ಎಂದು ವರದಿ ಹೇಳಿದೆ.
ತನಿಖಾ ಸಂಸ್ಥೆಗಳಾದ ಪಬ್ಲಿಕ್ ಐ ಮತ್ತು IBFAN (ಇಂಟರ್‌ನ್ಯಾಷನಲ್ ಬೇಬಿ ಫುಡ್ ಆಕ್ಷನ್ ನೆಟ್‌ವರ್ಕ್) ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಮಾರಾಟವಾದ ಕಂಪನಿಯ ಉತ್ಪನ್ನಗಳ ಮಾದರಿಗಳನ್ನು ವೈಜ್ಞಾನಿಕ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಬೆಲ್ಜಿಯಂನಲ್ಲಿ ನಡೆದ ಪ್ರಯೋಗಾಲಯದಲ್ಲಿ ಈ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ನೆಸ್ಲೆ ಮಾರಾಟ ಮಾಡುವ ಸೆರೆಲಾಕ್ನಲ್ಲಿ ಸಕ್ಕರೆ ಅಂಶ ಕಂಡುಬಂದಿಲ್ಲ. ಆದರೆ ಇಥಿಯೋಪಿಯಾ ( Ethiopia) ಮತ್ತು ತೈಲ್ಯಾಂಡ್ನಲ್ಲಿ ಮಾರಾಟವಾಗುವ ಸೆರೆಲಾಕ್ನ ಒಂದು ಪ್ಯಾಕೇಟ್ನಲ್ಲಿ ಕ್ರಮವಾಗಿ 5 ಮತ್ತು 6 ಗ್ರಾಂ ಸಕ್ಕರೆ ಪ್ರಮಾಣ ಇದೆ ಎಂದು ವರದಿ ಹೇಳಿದೆ.
ದ್ವಿಮುಖ ಮಾನದಂಡದ ಬಗ್ಗೆ ಆತಂಕ
ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ನಿಗೆಲ್ ರೋಲಿನ್ಸ್ ಪ್ರತಿಕ್ರಿಯಿಸಿ.. ಸ್ವಿಟ್ಜರ್ಲೆಂಡ್‌ನಲ್ಲಿ ನೆಸ್ಲೆ ಉತ್ಪನ್ನಗಳಿಗೆ ಸಕ್ಕರೆ ಸೇರಿಸಿಲ್ಲ ಎಂಬುವುದು ಗೊತ್ತಾಗಿದೆ. ಆದರೆ ಬಡ ರಾಷ್ಟ್ರಗಳಲ್ಲಿ ಸಕ್ಕರೆ ಅಂಶಗಳನ್ನು ಬಳಸಿಕೊಂಡಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಈ ಎರಡು ವಿಚಾರಗಳು ಪ್ರಶ್ನೆಯನ್ನು ಹುಟ್ಟಿಹಾಕಿದೆ ಎಂದು ಅವರು ಹೇಳಿದ್ದಾರೆ. ನೆಸ್ಲೆಯ ಈ ದ್ವಿಮುಖ ಮಾನದಂಡದ ಬಗ್ಗೆ ಆತಂಕ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ