ಯುಜಿಸಿ ಇಂದ ಗುಡ್​ನ್ಯೂಸ್;​ ಸಹಾಯಕ ಪ್ರಾಧ್ಯಾಪಕ ನೇಮಕಾತಿಗೆ ಇನ್ಮುಂದೆ NET ಅಗತ್ಯ ಇಲ್ಲ

author-image
Bheemappa
Updated On
ಯುಜಿಸಿ ಇಂದ ಗುಡ್​ನ್ಯೂಸ್;​ ಸಹಾಯಕ ಪ್ರಾಧ್ಯಾಪಕ ನೇಮಕಾತಿಗೆ ಇನ್ಮುಂದೆ NET ಅಗತ್ಯ ಇಲ್ಲ
Advertisment
  • ನೇಮಕಾತಿ, ಬಡ್ತಿಗಾಗಿ ಕನಿಷ್ಠ ವಿದ್ಯಾರ್ಹತೆ ಕರಡು ರಿಲೀಸ್
  • ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಇನ್ಮುಂದೆ ಅರ್ಹತೆ ಹೇಗೆ?
  • ವಿವಿ ಉಪಕುಲಪತಿ ಆಯ್ಕೆ ಪ್ರಕ್ರಿಯೆಯೂ ಬದಲಾಯಿತಾ?

ನವದೆಹಲಿ: ಸಹಾಯಕ ಪ್ರಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಅರ್ಹತಾ ಮಾನದಂಡ ಪರಿಷ್ಕರಣೆ ಮಾಡಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮುಂದಾಗಿದೆ. ಸದ್ಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮತ್ತು ಬಡ್ತಿಗಳಿಗೆ ಅಗತ್ಯ ಇರುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ಅನ್ನು ತೆಗೆದು ಹಾಕಲು ಯುಜಿಸಿ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.

ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶೈಕ್ಷಣಿಕ ಸಿಬ್ಬಂದಿ ನೇಮಕಾತಿ ಹಾಗೂ ಬಡ್ತಿಗಾಗಿ ಕನಿಷ್ಠ ವಿದ್ಯಾರ್ಹತೆ ಕರಡನ್ನು ಬಿಡುಗಡೆ ಮಾಡಲಾಗಿದೆ. ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು, ಉನ್ನತ ಶಿಕ್ಷಣವನ್ನು ಬಲಪಡಿಸುವ ದೃಷ್ಟಿಯಿಂದ ಹೀಗೆ ಮಾಡಲಾಗಿದೆ. ಉನ್ನತ ಶಿಕ್ಷಣದಲ್ಲಿ ಕರಡು ಸುಧಾರಣೆಗಳು ಹಾಗೂ ಮಾರ್ಗಸೂಚಿಗಳು ಕ್ರಿಯಾಶೀಲತೆ, ನಾವಿನ್ಯತೆ, ನಮ್ಯತೆಯನ್ನು ತರುತ್ತವೆ. ಇವುಗಳಿಗೆ ಶಿಕ್ಷಣ ತಜ್ಞರು ಪ್ರಗತಿಪರವಾಗಿರುವವು ಅಂತ ಕರೆದಿದ್ದಾರೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೇಳಿದ್ದಾರೆ.

publive-image

ಇದನ್ನೂ ಓದಿ:ನ್ಯಾಷನಲ್ ಅಲ್ಯೂಮಿನಿಯಂ ಕಂಪನಿಯಲ್ಲಿ ವಿವಿಧ ಹುದ್ದೆಗಳು.. 500ಕ್ಕೂ ಹೆಚ್ಚಿನ ಕೆಲಸಗಳಿಗೆ ಅಪ್ಲೇ ಮಾಡಿ

ಕನಿಷ್ಠ ಶೇಕಡಾ 55 ಅಂಕಗಳೊಂದಿಗೆ ಎಂಇ ಅಥವಾ ಎಂಟೆಕ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗಿರುತ್ತಾರೆ. ಇದು ಅಲ್ಲದೇ, ಕನಿಷ್ಠ ಶೇಕಡಾ 75 ಅಂಕಗಳನ್ನ ಪಡೆದವರು ಪದವಿಪೂರ್ವ (NCrF ಮಟ್ಟ 6) ಅಥವಾ ಕನಿಷ್ಠ 55 ಶೇಕಡಾ ಅಂಕ ಪಡೆದವರು PG ಪದವಿ (NCrF ಮಟ್ಟ 6.5) ಮತ್ತು PhD ಪದವಿ (NCrF ಮಟ್ಟ 8) ಪಡೆದವರು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗಿರುತ್ತಾರೆ ಎಂದು ಹೇಳಲಾಗಿದೆ.

ಹೊಸ ನಿಯಮಾವಳಿ ಪ್ರಕಾರ ವಿವಿಯ ಉಪಕುಲಪತಿ ಆಯ್ಕೆ ಪ್ರಕ್ರಿಯೆಯೂ ಬದಲಾಗಿದೆ. ಪ್ರಾಂಶುಪಾಲರ ನೇಮಕಾತಿ ಕೂಡ ಬದಲಾವಣೆ ಆಗಿದೆ. ಇನ್ಮುಂದೆ ಪ್ರಾಂಶುಪಾಲರನ್ನು 5 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತದೆ. ಇದಾದ ಮೇಲೆ ಮತ್ತೊಮ್ಮೆ ಬೇಕಾದರೆ ಪ್ರಾಂಶುಪಾಲರು ಆಗಬಹುದು. ಇದಾದ ಮೇಲೆ ನೇಮಕ ಇರಲ್ಲ. ಇದರ ಬದಲಿಗೆ ಪ್ರೊಫೆಸರ್ ಅರ್ಹತಾ ಮಾನದಂಡ ಪೂರೈಸಿದರೆ ಪ್ರೊಫೆಸರ್ ಹುದ್ದೆ ಪಡೆಯಬಹುದು. ಬಳಿಕ ತಮ್ಮ ಮೂಲ ಸಂಸ್ಥೆಗೆ ಸೇರಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment